ಶಿವಣ್ಣ-ಪ್ರಭುದೇವ ಜೋಡಿಯ ಕರಟಕ ದಮನಕ ಚಿತ್ರಮಂದಿರಗಳಲ್ಲಿದೆ. ಇದರ ಜೊತೆಯಲ್ಲೇ ತಮ್ಮ ಮುಂದಿನ ಚಿತ್ರ ಬೈರತಿ ರಣಗಲ್ ರಿಲೀಸ್ ಡೇಟ್ ಘೋಷಿಸಿದ್ಧಾರೆ ಶಿವಣ್ಣ. ‘ಭೈರತಿ ರಣಗಲ್’ ಸಿನಿಮಾದ ಮೇಲೆ ಫ್ಯಾನ್ಸ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ವೇದ’ ನಂತರ ಶಿವರಾಜ್‌ಕುಮಾರ್ ಅವರ ಹೋಮ್ ಬ್ಯಾನರ್ ಗೀತಾ ಪಿಕ್ಚರ್ಸ್‌ನಲ್ಲಿ ಶುರುವಾಗಿರುವ ಎರಡನೇ ಸಿನಿಮಾ ಭೈರತಿ ರಣಗಲ್. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ಭೈರತಿ ರಣಗಲ್ ರಿಲೀಸ್ ಆಗಲಿದೆ.
ಭೈರತಿ ರಣಗಲ್ ಮಫ್ತಿ ಸಿನಿಮಾದ ಪ್ರೀಕ್ವೆಲ್. ಮಫ್ತಿಯ ಡೈರೆಕ್ಟರ್ ನರ್ತನ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ಧಾರೆ. ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿ ‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ರುಕ್ಮಿಣಿ ವಸಂತ್ ನಟಿಸುತ್ತಿದ್ಧಾರೆ. ‘ಮಫ್ತಿ’ ಸಿನಿಮಾದಲ್ಲಿದ್ದ ಬಾಬು ಹಿರಣ್ಣಯ್ಯ, ಮಧು ಗುರುಸ್ವಾಮಿ, ವಿನಯ್ ಕೃಷ್ಣಸ್ವಾಮಿ, ದೇವರಾಜ್ ಸೇರಿದಂತೆ ರಾಹುಲ್ ಬೋಸ್ ಅವರೂ ನಟಿಸುತ್ತಿದ್ದಾರೆ.
ವಿಶೇಷ ಅಂದ್ರೆ.. ಅದೇ ದಿನ ಪುಷ್ಪ-2 ರಿಲೀಸ್ ಆಗಲಿದೆ. ಅಲ್ಲು ಅರ್ಜುನ್ ಅವರ ಪುಷ್ಪದ ಮೊದಲ ಭಾಗ ಭರ್ಜರಿ ಹಿಟ್ ಆಗಿತ್ತು. ಪುಷ್ಪ-2 ಕನ್ನಡದಲ್ಲೂ ರಿಲೀಸ್ ಆಗಲಿದೆ. ಆಗಸ್ಟ್ 15, ಗುರುವಾರ ಬರಲಿದೆ. ಅದಾದ ನಂತರ ಲಾಂಗ್ ವೀಕೆಂಡ್ ಸಿಗಲಿದೆ. ಹೀಗಾಗಿಯೇ ಆಗಸ್ಟ್ 15ಕ್ಕೆ ದೊಡ್ಡ ಪೈಪೋಟಿಯೂ ಇರಲಿದೆ. ಆಗಸ್ಟ್ 15ರಂದು ಬಾಲಿವುಡ್‌ನ ಅಜಯ್ ದೇವಗನ್ ಅಭಿನಯದ ‘ಸಿಂಗಂ ಎಗೇನ್’ ಸಿನಿಮಾದ ಕೂಡ ತೆರೆಗೆ ಬರಲಿದೆ.



