ಬೇಡರ ಕಣ್ಣಪ್ಪ. ಕನ್ನಡಕ್ಕೆ.. ಕನ್ನಡ ಚಿತ್ರ ಜಗತ್ತಿಗೆ ವರವನ್ನೇ ಕೊಟ್ಟ ಸಿನಿಮಾ. ಡಾ.ರಾಜ್ ಕುಮಾರ್ ನಟಿಸಿದ್ದ ಮೊದಲ ಚಿತ್ರ ಬೇಡರ ಕಣ್ಣಪ್ಪ. ಮುತ್ತುರಾಜ್, ರಾಜ್ ಕುಮಾರ್ ಆಗಿದ್ದು ಈ ಚಿತ್ರದಿಂದಲೇ. ಆ ಸಿನಿಮಾ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ರೀಮೇಕ್ ಆಗಿದೆ. ಕನ್ನಡದಲ್ಲಿಯೇ ಮತ್ತೊಮ್ಮೆ ರೀಮೇಕ್ ಆಗಿತ್ತು. ಈಗ ಮಗದೊಮ್ಮೆ ತೆಲುಗಿನಲ್ಲಿ ರೀಮೇಕ್ ಆಗುತ್ತಿರುವ ಬೇಡರ ಕಣ್ಣಪ್ಪ ರೀಮೇಕ್ ʻಕಣ್ಣಪ್ಪʼ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ಧಾರೆ ಎನ್ನಲಾಗಿತ್ತು. ಶಿವಣ್ಣ ಕೂಡಾ ಆರಂಭದಲ್ಲಿ ಉತ್ಸಾಹದಲ್ಲಿ ತೋರಿಸಿದ್ದರಾದರೂ.. ನಂತರ ಡೇಟ್ಸ್ ಹೊಂದಾಣಿಕೆ ಸಾಧ್ಯವಾಗದೆ ಹಿಂದೆ ಸರಿದಿದ್ದರು. ಈಗ ಶಿವಣ್ಣ ನಟಿಸಬೇಕಿದ್ದ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ ಅಕ್ಷಯ್ ಕುಮಾರ್ ಈಗಾಗಲೇ ತೆಲುಗು ಸಿನಿಮಾದ ಚಿತ್ರೀಕರಣವನ್ನು ಮುಗಿಸಿ, ಹಿಂದಿ ಸಿನಿಮಾದ ಶೂಟಿಂಗ್ಗೆ ಮರಳಿದ್ದಾರೆ. ಇದು ಅಕ್ಷಯ್ ಕುಮಾರ್ ನಟಿಸುತ್ತಿರುವ ಮೊದಲ ತೆಲುಗು ಸಿನಿಮಾ ಎನ್ನುವುದು ಮತ್ತೊಂದು ವಿಶೇಷ. ಅಕ್ಷಯ್ ಈ ಹಿಂದೆ ಕನ್ನಡದಲ್ಲೂ ನಟಿಸಿದ್ದರು. ತಮಿಳಿನಲ್ಲೂ ನಟಿಸಿದ್ಧಾರೆ.
ಡಾ ರಾಜ್ಕುಮಾರ್ ಅವರನ್ನು ಕನ್ನಡಕ್ಕೆ ಪರಿಚಯಿಸಿದ ಐತಿಹಾಸಿಕ ದಾಖಲೆ ‘ಬೇಡರ ಕಣ್ಣಪ್ಪ’ ಚಿತ್ರದ್ದು. ಅದೇ ಸಿನಿಮಾ ಈಗಾಗಲೇ ಬೇರೆ ಬೇರೆ ಭಾಷೆಗಳಲ್ಲಿ ರೀಮೇಕ್ ಆಗಿದೆ. ಕನ್ನಡದಲ್ಲಿಯೇ ಶಿವ ಮೆಚ್ಚಿದ ಕಣ್ಣಪ್ಪ ಹೆಸರಲ್ಲಿ ಬಂದೂ ಆಗಿದೆ. ಮತ್ತೊಮ್ಮೆ ಈಗ ತೆಲುಗಿನಲ್ಲಿ ‘ಕಣ್ಣಪ್ಪ’ ಹೆಸರಿನಲ್ಲಿ ತೆರೆಗೆ ಬರುತ್ತಿದೆ.
ಮಂಚು ವಿಷ್ಣು ಬೇಡರ ಕಣ್ಣಪ್ಪನ ಪಾತ್ರದಲ್ಲಿ ನಟಿಸುತ್ತಿದ್ದು, ಶಿವನ ಪಾತ್ರದಲ್ಲಿ ನಟಿಸುವಂತೆ ಶಿವರಾಜ್ ಕುಮಾರ್ ಅವರನ್ನು ಕೇಳಲಾಗಿತ್ತು. ಬಳಿಕ ಆ ಪಾತ್ರವನ್ನು ಅಕ್ಷಯ್ ಕುಮಾರ್ ಅವರಿಗೆ ನೀಡಲಾಗಿದ್ದು, ಅವರು ಚಿತ್ರೀಕರಣ ಮುಗಿಸಿ ವಾಪಸ್ ಆಗಿದ್ಧಾರೆ. ಅಕ್ಷಯ್ ಕುಮಾರ್ ಅವರು ಓ ಮೈ ಗಾಡ್ 2 ಸರಣಿಯಲ್ಲಿ ಶಿವನ ಅವತಾರದಲ್ಲಿ ಕಾಣಿಸಿಕೊಂಡಿದ್ದರು.
ಬೇಡರ ಕಣ್ಣಪ್ಪ ಚಿತ್ರದಲ್ಲಿ ಡಾ.ರಾಜ್ ಕುಮಾರ್ ಕಣ್ಣಪ್ಪನಾಗಿ ನಟಿಸಿದ್ದರು. ಅದೇ ಸಿನಿಮಾವನ್ನು ಮತ್ತೊಮ್ಮೆ ರೀಮೇಕ್ ಮಾಡಿದಾಗ.. ಶಿವಣ್ಣ ʻಕಣ್ಣಪ್ಪʼನಾಗಿದ್ದರೆ, ಡಾ.ರಾಜ್ ಶಿವನ ಪಾತ್ರದಲ್ಲಿ ನಟಿಸಿದ್ದರು. ಈಗ ಅದೇ ಸಿನಿಮಾವನ್ನು ತೆಲುಗಿನಲ್ಲಿ ಮಾಡಲಾಗುತ್ತಿದ್ದು, ಡಾ.ರಾಜ್ ನಟಿಸಿದ್ದ ಅದೇ ರೋಲ್ʻನಲ್ಲಿ ನಟಿಸಲು ಕೇಳಿದ್ದರು. ಅಂದರೆ. ಶಿವನ ಪಾತ್ರದಲ್ಲಿ. ಆದರೆ.. ಡಾ.ರಾಜ್ ಮಾಡಿದ್ದ ಆ ಪಾತ್ರಕ್ಕೆ ಶಿವಣ್ಣ ನೋ ಎಂದಿದ್ದಾರೆ.
ಶಿವನ ಪಾತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು ಆದರೆ ಪ್ರಭಾಸ್ ಸಹ ಆ ಸಿನಿಮಾದಲ್ಲಿ ನಟಿಸಲು ಒಲ್ಲೆ ಎಂದಿದ್ದರು. ಆದರೆ ಸಿನಿಮಾದ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
‘ಕಣ್ಣಪ್ಪ; ಸಿನಿಮಾದಲ್ಲಿ ಮಂಚು ವಿಷ್ಣು ಬೇಡರ ಕಣ್ಣಪ್ಪನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರೀತಿ ಮುಕುಂದನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಮೋಹನ್ಲಾಲ್ ಸಹ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಿರಿಯ ನಟರಾದ ಮೋಹನ್ ಬಾಬು, ಶರತ್ ಕುಮಾರ್, ಬ್ರಹ್ಮಾನಂದಂ ಅವರುಗಳು ಸಹ ಇದ್ದಾರೆ. ತೆಲುಗಿನ ಕೆಲವು ಜನಪ್ರಿಯ ಯುವ ನಟ-ನಟಿಯರು ಸಹ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣವನ್ನು ಆಂಧ್ರ-ತೆಲಂಗಾಣ ಸೇರಿದಂತೆ ವಿದೇಶಗಳಲ್ಲಿಯೂ ಮಾಡಲಾಗಿದೆ.



