ಶಿವಣ್ಣನ ಆತ್ಮೀಯ ವಲಯಕ್ಕೆ ಒಮ್ಮೆ ಪ್ರವೇಶಿಸಿದವರು ವಾಪಸ್ ಬರೋದಿಲ್ಲ. ಆಪ್ತವಲಯಕ್ಕೆ ಹೋದವರು ಶಿವಣ್ಣನ ಪ್ರೀತಿಯಲ್ಲಿಯೇ ಬಂಧಿಯಾಗಿ ಹೋಗ್ತಾರೆ. ಅಂತಹವರಲ್ಲಿ ಒಬ್ಬರು ಚಿಕ್ಕಣ್ಣ. ಇದೀಗ ಉಪಾಧ್ಯಕ್ಷ ಚಿತ್ರದ ಮೂಲಕ ಹೀರೋ ಆಗಿರುವ ಚಿಕ್ಕಣ್ಣ ಪ್ರೀ-ರಿಲೀಸ್ ಈವೆಂಟ್ʻನಲ್ಲಿ ಶಿವಣ್ಣನ ತಾಯಿಯ ಪ್ರೀತಿಯನ್ನು ನೆನಪಿಸಿಕೊಂಡಿದ್ದಾರೆ.
ಶಿವಣ್ಣ ಅವರ ‘ವಜ್ರಕಾಯ’ ಮತ್ತು ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಸಿನಿಮಾಗಳಲ್ಲಿ ಚಿಕ್ಕಣ್ಣ ನಟಿಸಿದ್ದಾರೆ. ಆಗ ಶೂಟಿಂಗ್ ವೇಳೆ ನಡೆದ ಒಂದು ಘಟನೆಯನ್ನು ಈಚೆಗೆ ಚಿಕ್ಕಣ್ಣ ಹೇಳಿದ್ದಾರೆ. ಶಿವಣ್ಣ ಅವರ ಜೊತೆಗೆ ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಒಂದು ದಿನ ನನಗೆ ತುಂಬ ಜ್ವರ ಬಂದಿತ್ತು. ಆದರೆ ಅವತ್ತು ಶೂಟಿಂಗ್ ನಿಲ್ಲಿಸುವಂತೆ ಇರಲಿಲ್ಲ. ಅದರಲ್ಲೇ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೆ. ಆಗ ಶಿವಣ್ಣ ನನಗೆ ತುಂಬ ಚೆನ್ನಾಗಿ ಆರೈಕೆ ಮಾಡಿದರು. ತಮ್ಮ ತೊಡೆ ಮೇಲೆ ನನ್ನನ್ನು ಮಲಗಿಸಿಕೊಂಡರು. ಒಬ್ಬ ತಾಯಿ ತನ್ನ ಮಗುವನ್ನು ಯಾವ ರೀತಿ ನೋಡಿಕೊಳ್ಳುತ್ತಾರೋ, ಆ ರೀತಿ ನನ್ನನ್ನು ಅಂದು ಕೇರ್ ಮಾಡಿದರು” ಎಂದು ಚಿಕ್ಕಣ್ಣ ಹೇಳಿದ್ದಾರೆ.
ಚಿತ್ರದ ಟ್ರೇಲರ್ ರಿಲೀಸ್ʻಗೆ ಅತಿಥಿಯಾಗಿ ಬಂದಿದ್ದ ಶಿವಣ್ಣ ಅವರ ಎದುರೇ ಈ ಮಾತು ಹೇಳಿದ ಚಿಕ್ಕಣ್ಣ ಕಾಮಿಡಿ ನಟನೊಬ್ಬ ಹೀರೋ ಆಗಿರುವ ಚಿತ್ರದ ಟ್ರೇಲರ್ ರಿಲೀಸ್ ಮಾಡುವುದಕ್ಕೆ ಆಗಮಿಸಿದ ಶಿವಣ್ಣಗೆ ಥ್ಯಾಂಕ್ಸ್ ಹೇಳಿದ್ಧಾರೆ. ಇಂತಹ ಥ್ಯಾಂಕ್ಸುಗಳು ಶಿವಣ್ಣಗೆ ಹೊಸದೇನಲ್ಲ. ಸಿನಿಮಾ ಟ್ರೇಲರ್ ನೋಡಿದ ಶಿವಣ್ಣ ನಾನು ಚಿಕ್ಕಣ್ಣ ಅವರನ್ನು ಬಹಳ ಇಷ್ಟಪಡುತ್ತೇನೆ. ಅವರು ನನ್ನ ಜೊತೆ 2 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಉಪಾಧ್ಯಕ್ಷ’ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಇದರಲ್ಲಿ ಚಿಕ್ಕಣ್ಣ ನಿಜಕ್ಕೂ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಸಿನಿಮಾವನ್ನು ನಾನು ಜ.26ಕ್ಕೆ ಮೈಸೂರಿನಲ್ಲಿ ನೋಡುತ್ತೇನೆ” ಎಂದಿದ್ದಾರೆ.
ಉಪಾಧ್ಯಕ್ಷ’ ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದು, ಉಮಾಪತಿ ಶ್ರೀನಿವಾಸ್ ಗೌಡ ಅವರ ಪತ್ನಿ ಸ್ಮಿತಾ ಅವರು ನಿರ್ಮಾಣ ಮಾಡಿದ್ದಾರೆ. ಶರಣ್ ನಟಿಸಿದ್ದ ‘ಅಧ್ಯಕ್ಷ’ ಸಿನಿಮಾದ ಕಥೆ ಎಲ್ಲಿಗೆ ನಿಂತಿತ್ತೋ, ಅಲ್ಲಿಂದ ‘ಉಪಾಧ್ಯಕ್ಷ’ ಸಿನಿಮಾದ ಕಥೆ ಅಲ್ಲಿಂದ ಆರಂಭವಾಗಲಿದೆಯಂತೆ. ಅರ್ಜುನ್ ಜನ್ಯ ಅವರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ನಾಯಕಿಯಾಗಿ ಮಲೈಕಾ ನಟಿಸಿದ್ದು, ರವಿಶಂಕರ್, ಧರ್ಮಣ್ಣ ಕಡೂರು, ಸಾಧು ಕೋಕಿಲ, ಕರಿಸುಬ್ಬು, ಕೀರ್ತಿ ರಾಜ್, ವೀಣಾ ಸುಂದರ್, ಅರಸು ಮಹಾರಾಜ್ ಮುಂತಾದವರು ನಟಿಸಿದ್ದಾರೆ. ಅಂದಹಾಗೆ, ನಟ ಶರಣ್ ಕೂಡ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 26ರಂದು ಈ ಸಿನಿಮಾ ತೆರೆಗೆ ಬರುತ್ತಿದೆ.



