ಶಿವಣ್ಣ (Dr.Shiva RajKumar) ಹಲವು ಸಿನಿಮಾಗಳಲ್ಲಿ ಪುಟ್ಟ ಪುಟ್ಟ ರೋಲ್ ಮಾಡಿದ್ದಾರೆ. ಸ್ಕ್ರೀನ್ ಮೇಲೆ ಎಷ್ಟು ಹೊತ್ತು ಇರುತ್ತಾರೆ ಎನ್ನುವುದು ಮುಖ್ಯವಲ್ಲ, ಎಷ್ಟು ಇಂಪ್ಯಾಕ್ಟ್ ಮಾಡುತ್ತಾರೆ ಎನ್ನುವುದು ಮುಖ್ಯ. ಚಂದ್ರೋದಯ (Chandrodaya) ಅನ್ನೋ ಸಿನಿಮಾ ಬಂದಿತ್ತು. ರಮೇಶ್ (Ramehs Aravind) ಹೀರೋ. ಶಿವಣ್ಣ (Dr.Shiva RajKumar) ಅವರದ್ದು ಗೆಸ್ಟ್ ರೋಲ್. ಇಡೀ ಸಿನಿಮಾದಲ್ಲಿ ಒಂದಿಪ್ಪುತ್ತು ನಿಮಿಷ ಇರ್ತಾರೆ. ಹೊರಬಂದವರಿಗೆ ಕೊನೆಗೆ ನೆನಪಿನಲ್ಲುಳಿಯೋದು ಶಿವ ರಾಜ್`ಕುಮಾರ್ ಪಾತ್ರವೇ. ನಿನ್ನೇ ಪ್ರೀತಿಸುವೆ (Ninne Preethisuve) ಚಿತ್ರದಲ್ಲೂ ಇದೇ ಕಥೆ.
ಅಷ್ಟೇ ಏಕೆ, ಮಫ್ತಿ (Mufti) ಚಿತ್ರದ ಹೀರೋ ಶ್ರೀಮುರಳಿ (Sri Muralli). ಶಿವಣ್ಣ ಅವರದ್ದು ಸಪೋರ್ಟಿಂಗ್ ಕ್ಯಾರೆಕ್ಟರ್. ಆದರೆ ಸಿನಿಮಾ ಯಾವ ಪರಿ ಹಿಟ್ ಆಯ್ತು ಎಂದರೆ, ಪೋಷಕ ನಟ ಪಾತ್ರಧಾರಿಯೇ ಹೀರೋ ಆಗಿ, ಸಿನಿಮಾ ಗೆದ್ದಿತ್ತು. ಅದೇ ಜೈಲರ್ (Jailor) ಚಿತ್ರದಲ್ಲೂ ಆಗಿರೋದು.
ಎರಡೂವರೆ ಗಂಟೆಯ ಚಿತ್ರದಲ್ಲಿ ಇರೋದು ಕೆಲವೇ ನಿಮಿಷ. ಬರೋದು ಎರಡೋ ಮೂರೋ ಸೀನ್. ಇರೋದು ಚಿಕ್ಕ ಚಿಕ್ಕ ಡೈಲಾಗು. ಹೀರೋ ಸೂಪರ್ ಸ್ಟಾರ್ ರಜನಿಕಾಂತ್. ತಮಿಳಿನಲ್ಲಿ ಫಸ್ಟ್ ಆಕ್ಟಿಂಗ್. ಆದರೆ ಶಿವಣ್ಣಂಗೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೈಲರ್ ಸಿನಿಮಾದಲ್ಲಿ ನರಸಿಂಹ ಅನ್ನೋ ಪಾತ್ರಕ್ಕೆ ನಟ ಶಿವರಾಜ್ಕುಮಾರ್ ಅವರು ಬಣ್ಣ ಹಚ್ಚಿದ್ದಾರೆ. ಕೆಲವೇ ಕೆಲವು ನಿಮಿಷಗಳ ಸಮಯ ತೆರೆಮೇಲೆ ಕಂಡರೂ ಶಿವಣ್ಣ ಮೂಡಿಸುವ ಇಂಪ್ಯಾಕ್ಟ್ ಭರ್ಜರಿ ಆಗಿದೆ. ಇದು ಫ್ಯಾನ್ಸ್ಗೆ ಭರ್ಜರಿ ಖುಷಿ ನೀಡಿದೆ. ಆ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿ ‘ಜೈಲರ್’ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಪ್ರಿ-ಕ್ಲೈಮ್ಯಾಕ್ಸ್ನಲ್ಲಿ ಬರುವ ಸೀನ್ನಲ್ಲಂತೂ ಅಕ್ಷರಶಃ ಶಿವಣ್ಣ ಅವರ ಮ್ಯಾರಿಸಂ, ಆಕ್ಟಿಂಗ್ ಬೇರೆ ಲೆವೆಲ್ನಲ್ಲಿ ಇದೆ. ಮುಖ್ಯವಾಗಿ ಈ ಸೀನ್ ಫ್ಯಾನ್ಸ್ಗೆ ಭಾರಿ ಇಷ್ಟವಾಗಿದೆ. ಬರೀ ಕರ್ನಾಟಕದಲ್ಲಿ ಮಾತ್ರವಲ್ಲ, ತಮಿಳುನಾಡು, ಕೇರಳದಲ್ಲೂ ಕೂಡ ಶಿವಣ್ಣನ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಜೈಲರ್ ರಿಲೀಸ್ ಆಗಿದ್ದರಿಂದ ಟ್ವಿಟರಿನಲ್ಲಿ ರಜನಿಕಾಂತ್ ಹೆಸರು ಸಹಜವಾಗಿಯೇ ಟ್ರೆಂಡಿಂಗ್`ನಲ್ಲಿತ್ತು. ಆದರೆ ಅದನ್ನೂ ಮೀರಿಸುವಂತೆ ಇದ್ದಕ್ಕಿದ್ದಂತೆ ಶಿವಣ್ಣ ಹೆಸರು ಟ್ರೆಂಡಿಂಗಿಗೆ ಬಂತು. ನೆಲ್ಸನ್ (Nelson) ನಿರ್ದೇಶನ ಮಾಡಿರುವ ‘ಜೈಲರ್’ ಸಿನಿಮಾದಲ್ಲಿ ಶಿವಣ್ಣ ಜೊತೆಗೆ ಮೋಹನ್ಲಾಲ್ (Mohan Lal), ಜಾಕಿಶ್ರಾಫ್ (Jacki Shraff) ಕೂಡ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಶಿವಣ್ಣ ನಿಭಾಯಿಸಿರುವ ನರಸಿಂಹ ಪಾತ್ರ ಜಾಸ್ತಿಯೇ ಜನಪ್ರಿಯತೆಯನ್ನು ಪಡೆದುಕೊಂಡಿದೆ.
ಸಿನಿಮಾ ನೋಡಿದ ಪ್ರೇಕ್ಷಕರು ಅದರಲ್ಲೂ ತಮಿಳು ಪ್ರೇಕ್ಷಕರು ನಾನು ಇವತ್ತಿನಿಂದ ಶಿವಣ್ಣನ ಫ್ಯಾನ್ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ರಜನಿ ಎದುರು ಇಷ್ಟು ಸಖತ್ತಾಗಿ ನಟಿಸಿದ್ದಾರಲ್ಲ.. ಯಾರಿವರು ಎಂದು ಹುಡುಕಾಡಿದ್ದಾರೆ. ಇಷ್ಟೆಲ್ಲ ಆಗಿ ಶಿವಣ್ಣ ಹೆಸರು ಟೈಟಲ್ ಕಾರ್ಡಿನಲ್ಲಿ ಕನ್ನಡದಲ್ಲಿಯೇ ಬರುವುದು ಇನ್ನೊಂದು ಥ್ರಿಲ್ ಕೊಟ್ಟಿದೆ.



