Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ನಂದಿನಿಗೀಗ ಶಿವಣ್ಣನೂ ರಾಯಭಾರಿ : ಡಾ.ರಾಜ್, ಅಪ್ಪು ಹಾಗೆಯೇ ಉಚಿತ..!

SpeciallU by SpeciallU
August 2, 2023
in Cinema, News, Politics
Reading Time: 1 min read
0 0
0
ನಂದಿನಿಗೀಗ ಶಿವಣ್ಣನೂ ರಾಯಭಾರಿ : ಡಾ.ರಾಜ್, ಅಪ್ಪು ಹಾಗೆಯೇ ಉಚಿತ..!

ಡಾ.ರಾಜ್ (Dr.Rajkumar) ನಂದಿನಿಗೆ (KMF) ರಾಯಭಾರಿಯಾಗಿದ್ದೇ ವಿಶೇಷ ಕಥೆ. ನಂದಿನಿ ಉತ್ಪನ್ನವೊಂದರ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದ ಫೋಟೋ ಅಚಾನಕ್ ಆಗಿ ಜಾಹೀರಾತು ರೂಪ ಪಡೆದಿದ್ದೇ ಸ್ಪೆಷಲ್ ಸ್ಟೋರಿ. ಜಾಹೀರಾತು (Advertisement) ರೂಪದಲ್ಲಿ ಅದನ್ನು ಪ್ರಕಟಿಸಿದಾಗ ಮೊದಲಿಗೆ ರಾಜ್ (Dr.Rajkumar) ಅವರ ಅನುಮತಿ ಪಡೆದಿರಲಿಲ್ಲವಂತೆ. ಅದಾದ ಮೇಲೆ ರಾಜ್ ಅವರಿಗೆ ಕೆಎಂಎಫ್`ನವರೇ ಇದನ್ನು ಗಮನಕ್ಕೆ ತಂದಾಗ ನನ್ನ ಒಂದು ಫೋಟೋ ಹಾಕಿಕೊಂಡರೆ ರೈತರಿಗೆ ಲಾಭವಾಗುತ್ತೆ ಅನ್ನೋದಾದ್ರೆ ಆಗಲಿ ಬಿಡಿ. ಅದಕ್ಕೆಲ್ಲ ಹಣ ಬೇಡ. ರೈತರಿಗೆ (Farmers) ಲಾಭವಾದರೆ ಅಷ್ಟೇ ಸಾಕು ಎಂದಿದ್ದರಂತೆ ಡಾ.ರಾಜ್.

ಅದೇ ಮಾದರಿಯಲ್ಲಿ ಡಾ.ಪುನೀತ್ ರಾಜ್`ಕುಮಾರ್ (Dr.Puneeth Rajkumar) ಕೂಡಾ ಇದ್ದರು. ಉಚಿತವಾಗಿಯೇ ಕೆಎಂಎಫ್ (KMF) ಉತ್ಪನ್ನಗಳಿಗೆ ರಾಯಭಾರಿಯಾಗಿದ್ದರು. ಅಪ್ಪ ಮತ್ತು ತಮ್ಮನ ನಂತರ ಈಗ ಅಣ್ಣ ಶಿವಣ್ಣ (Dr. Shiva raj kumar) ನಂದಿನಿ  (Nandini) ರಾಯಭಾರಿಯಾಗಿದ್ದಾರೆ. ಕೆಎಂಎಫ್ (KMF) ಉತ್ಪನ್ನಗಳಿಗೆ ರಾಯಭಾರಿಯಾಗಿ ಡಾ.ಶಿವ ರಾಜ್`ಕುಮಾರ್ (Dr. Shiva raj kumar) ಅವರನ್ನು ಆಯ್ಕೆ ಮಾಡಲಾಗಿದೆ. ಮೊದಲಿಗೆ ಅಪ್ಪ, ಆಮೇಲೆ ತಮ್ಮ ರಾಯಭಾರಿಯಾಗಿದ್ದ ಅದೇ ಕೆಎಂಎಫ್ ನಂದಿನಿಗೆ ಇನ್ನು ಮುಂದೆ ಶಿವಣ್ಣ ರಾಯಭಾರಿಯಾಗಲಿದ್ದಾರೆ. ಶಿವಣ್ಣ ಅವರನ್ನು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್  ಭೇಟಿಯಾಗಿ, ಅಭಿನಂದಿಸಿದ್ದಾರೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

1996ರಲ್ಲಿ ಡಾ ರಾಜ್ಕುಮಾರ್ ಮೊದಲ ಬಾರಿಗೆ ನಂದಿನಿ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ನಂದಿನಿ ರಾಯಭಾರಿಯೂ ಆಗಿದ್ದ ಅವರು, ಇದ್ಯಾವುದಕ್ಕೂ ಒಂದು ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿರಲಿಲ್ಲ. ಅದೇ ರೀತಿ ಡಾ ಪುನೀತ್ ರಾಜ್ಕುಮಾರ್ ಅವರು ಕೂಡ ನಂದಿನಿ ಉತ್ಪನ್ನಗಳಿಗೆ ಉಚಿತವಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ಶಿವರಾಜ್ಕುಮಾರ್ ಅವರು ನಂದಿನಿ ರಾಯಭಾರಿಯಾಗಿದ್ದಾರೆ.

ಇಂಥದ್ದೊಂದು ಅವಕಾಶ ನಮ್ಮ ಫ್ಯಾಮಿಲಿಗೆ ಸಿಗುತ್ತಿರುವುದಕ್ಕೆ ನಮಗೆ ಖುಷಿಯಾಗುತ್ತದೆ. ಮೊದಲು ಅಪ್ಪಾಜಿ ಆಗಿದ್ರು, ಆಮೇಲೆ ಅಪ್ಪು. ಈಗ ನನಗೆ ಬಂದಿದೆ. ಇದರ ಭಾಗವಾಗುವುದಕ್ಕೆ ನನಗೂ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ ಶಿವರಾಜ್ಕುಮಾರ್.

ಇದು ರೈತರಿಗೆ ಸಂಬಂಧಿಸಿದ ಕೆಲಸವಾಗಿರೋ ಕಾರಣ ಖುಷಿ ಎನಿಸುತ್ತದೆ. ನಂದಿನಿ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಲ್ಲೇ ಅತೀ ಬೇಡಿಕೆ ಇರುವ ಪ್ರಾಡಕ್ಟ್. ಆ ಬೇಡಿಕೆಯನ್ನು ಹಾಗೇ ಉಳಿಸಿಕೊಳ್ಳುವುದಕ್ಕೆ ನಮ್ಮ ಸಹಕಾರ ಖಂಡಿತ ಇರುತ್ತದೆ. ಸದ್ಯ ಒಂದು ಜಾಹೀರಾತು ಮಾಡಲು ಅವರು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ. ನಂದಿನಿ ಹಾಲಿನ ಗುಣಮಟ್ಟ ಜಾಸ್ತಿ  ಇರೋದ್ರಿಂದ ದರ ಹೆಚ್ಚಾದರೂ, ತೊಂದರೆ ಆಗುವುದಿಲ್ಲ ಎಂದಿದ್ದಾರೆ ಶಿವಣ್ಣ.

ಶಿವಣ್ಣ ಕೂಡಾ ಅಪ್ಪ ಮತ್ತು ಅಪ್ಪು ಹಾದಿಯಲ್ಲೇ ಸಾಗಿದ್ದಾರೆ. ಸಂಭಾವನೆ ಪಡೆದಿಲ್ಲ. ಇದು ಸರ್ಕಾರದ ಕಾರ್ಯಕ್ರಮ, ಅಲ್ಲದೆ ನಮ್ಮ ಪ್ರಾಡಕ್ಟ್. ರೈತರಿಗೋಸ್ಕರ ನಾವು ಸದಾ ಬೆಂಬಲವಾಗಿ ಇರಬೇಕು. ಸಂಭಾವನೆ ಪಡೆಯದೇ ಇರುವುದು ದೊಡ್ಡ ತ್ಯಾಗ ಏನಲ್ಲ. ಇದು ನಮ್ಮ ಕರ್ತವ್ಯ. ಇಂಥ ಕಾರ್ಯಗಳಿಗೆ ನಾವು ಮೊದಲು ಬಂದು ನಿಂತುಕೊಳ್ಳಬೇಕು. ಇದರಿಂದ ನಾವು ಏನನ್ನೂ ನಿರೀಕ್ಷೆ ಮಾಡಬಾರದು ಎಂದಿದ್ದಾರೆ ಶಿವಣ್ಣ.

ಕೆಎಂಎಫ್ಗೆ ಯಾರನ್ನು ರಾಯಭಾರಿ ಮಾಡಬೇಕು ಎಂಬ ಚರ್ಚೆ ಬಂದಾಗ ಮೊದಲು ನಾನು ಹೇಳಿದ್ದೇ ಡಾ ಶಿವರಾಜ್ಕುಮಾರ್ ಅವರ ಹೆಸರು. ಡಾ ರಾಜ್ಕುಮಾರ್, ಡಾ ಪುನೀತ್ ರಾಜ್ಕುಮಾರ್ ಅವರು ಸಂಭಾವನೆ ಪಡೆಯದೇ ಕೆಎಂಎಫ್ಗೆ ರಾಯಭಾರಿ ಆಗಿದ್ದರು. ಶಿವರಾಜ್ಕುಮಾರ್ ಅವರನ್ನೇ ರಾಯಭಾರಿಯನ್ನಾಗಿ ನೇಮಕ ಮಾಡಬೇಕು ಎಂದು ಎಲ್ಲರೂ ಸೇರಿ ತೀರ್ಮಾನ ಕೈಗೊಂಡೆವು. ಶಿವಣ್ಣ ಅವರು ಬಹಳ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ರಾಜ್ಯದ ಸಮಸ್ತ ರೈತರ ಪರವಾಗಿ ಶಿವರಾಜ್ಕುಮಾರ್  ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್. ಹಣ ಪಡೆಯುವುದಿಲ್ಲ ಎನ್ನುವುದು ತ್ಯಾಗವಲ್ಲ. ಅದು ನಮ್ಮ ಕರ್ತವ್ಯ ಎನ್ನುವ ಮೂಲಕ ಶಿವಣ್ಣ ಗ್ರೇಟ್ ಎನಿಸಿಕೊಂಡಿದ್ದಾರೆ.

Tags: #ಕೆಎಂಎಫ್ #ರಾಯಭಾರಿ #ನಂದಿನಿ #ಶಿವಣ್ಣ #ಭೀಮಾನಾಯ್ಕ್ #ಪುನೀತ್ #KMF #Ambassador #Nandini #Shivanna #Bheemanayk #Puneethrajkumar
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.