ಭೈರತಿ ರಣಗಲ್ ಭರ್ಜರಿಯಾಗಿಯೇ ಗೆದ್ದಿದ್ದಾನೆ. ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿರುವ ‘ಭೈರತಿ ರಣಗಲ್’ ಬಗ್ಗೆ ಆರಂಭದಿಂದಲೂ ಸಿನಿಪ್ರಿಯರು ಭಾರಿ ನಿರೀಕ್ಷೆ ಇತ್ತು. ಸದ್ಯ ತೆರೆಕಂಡಿರುವ ‘ಭೈರತಿ ರಣಗಲ್’ ಸಿನಿಮಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಒಂದು ಲೆಕ್ಕದ ಪ್ರಕಾರ ಭೈರತಿ ರಣಗಲ್ ಕಲೆಕ್ಷನ್ ಆಗಲೇ 10 ಕೋಟಿ ದಾಟಿದೆ. ಆದರೆ ಅಧಿಕೃತ ಟಿಕೆಟ್ ಲೆಕ್ಕ ಸಿಕ್ಕಿದೆಯೇ ಹೊರತು, ಕಲೆಕ್ಷನ್ ಲೆಕ್ಕ ಸಿಕ್ಕಿಲ್ಲ.
ಬುಕ್ ಮೈ ಶೋ ಹಾಗೂ ಇನ್ನಿತರರು ಕೊಟ್ಟಿರುವ ಟಿಕೆಟ್ ಸೇಲ್ಸ್ ಲೆಕ್ಕದ ಪ್ರಕಾರ..
ಮೊದಲ ದಿನ 50 ಸಾವಿರ ಜನ ಸಿನಿಮಾ ನೋಡಿದ್ದಾರೆ.
ಎರಡನೇ ದಿನ ಪ್ರೇಕ್ಷಕರ ಸಂಖ್ಯೆ 60 ಸಾವಿರ ದಾಟಿದೆ.
3ನೇ ದಿನ ಪ್ರೇಕ್ಷಕರ ಸಂಖ್ಯೆ 75 ಸಾವಿರ ದಾಟಿದೆ.
ಇದೆಲ್ಲವೂ ಅಧಿಕೃತವಾಗಿಯೇ ಸಿಗುತ್ತಿರುವ ಲೆಕ್ಕ.
ಅಂದರೆ ದಿನದಿಂದ ದಿನಕ್ಕೆ ಚಿತ್ರವನ್ನು ನೋಡಲು ಬಯಸುತ್ತಿರುವ ಹಾಗೂ ಚಿತ್ರಮಂದಿರಕ್ಕೆ ಬರುತ್ತಿರುವ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ವಿಶೇಷ ಎಂದರೆ ಭೈರತಿ ರಣಗಲ್ ಆರ್ಭಟ, ಚಿತ್ರಮಂದಿರದಲ್ಲಿ 3ನೇ ವಾರಕ್ಕೆ ಕಾಲಿಟ್ಟಿರುವ ಬಘೀರ ಚಿತ್ರಕ್ಕೆ ಡಿಸ್ಟರ್ಬ್ ಮಾಡಿಲ್ಲ. ಬದಲಿಗೆ ಭೈರತಿ ರಣಗಲ್ ಚಿತ್ರಕ್ಕೆ ಟಿಕೆಟ್ ಸಿಗದವರೆಲ್ಲ ಬಘೀರನ ದರ್ಶನ ಮಾಡ್ತಿದ್ದಾರೆ. ಅಲ್ಲಿಗೆ ಭೈರತಿ ರಣಗಲ್, ಚಿತ್ರರಂಗಕ್ಕೆ ಮತ್ತೊಂದು ಹಿಟ್ ಕೊಟ್ಟಂತಾಗಿದೆ.
ಅಂದಹಾಗೆ ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್ ಅವರನ್ನು ಜನ ಟ್ರೋಲ್ ಮಾಡ್ತಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ಸಿಗಲಿಲ್ಲ. ಬಘೀರ ಚಿತ್ರದಲ್ಲಿ ಶ್ರೀಮುರಳಿಗೂ ಸಿಗಲಿಲ್ಲ. ಈಗ ಭೈರತಿ ರಣಗಲ್ ಚಿತ್ರದಲ್ಲಿ ಶಿವಣ್ಣಂಗೂ ಸಿಗಲಿಲ್ಲ. ರುಕ್ಮಿಣಿ ಎಂದರೆ ನಿಲುಕದ ನಕ್ಷತ್ರ ಎಂದು ತಮಾಷೆಯಾಗಿ ಕಾಲೆಳೆಯುತ್ತಿದ್ದಾರೆ.
ಇದೆಲ್ಲದರ ಮಧ್ಯೆ ಡೈರೆಕ್ಟರ್ ನರ್ತನ್ ಗೆದ್ದಿದ್ದಾರೆ. ಚಿತ್ರವನ್ನು ಹೇಗೆ ಕೂಲ್ ಆಗಿ ಪ್ರೇಕ್ಷಕರಿಗೆ ತೋರಿಸಿದ್ದಾರೋ, ಅಷ್ಟೇ ಕೂಲ್ ಆಗಿ ಪ್ರೇಕ್ಷಕರೂ ಸಿನಿಮಾ ಎಂಜಾಯ್ ಮಾಡ್ತಿದ್ದಾರೆ.
ಮಫ್ತಿಯ ಪ್ರೀಕ್ವೆಲ್ ಕಥೆಯನ್ನು ಶಿವಣ್ಣನ ಅಭಿಮಾನಿಗಳು ಸಖತ್ ಎಂಜಾಯ್ ಮಾಡ್ತಿದ್ದಾರೆ. ‘ಮಫ್ತಿ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಗಣ (ಶ್ರೀಮುರಳಿ), ಭೈರತಿ ರಣಗಲ್ (ಶಿವರಾಜ್ ಕುಮಾರ್) ಸಾಮ್ರಾಜ್ಯಕ್ಕೆ ಲಗ್ಗೆಯಿಟ್ಟು, ಆತನನ್ನು ಸಾಕ್ಷಿಸಮೇತ ಅರೆಸ್ಟ್ ಮಾಡಿರುತ್ತಾನೆ. ಅಲ್ಲಿಗೆ ಸಿನಿಮಾ ಮುಕ್ತಾಯವಾಗಿರುತ್ತದೆ. ಈಗ ಭೈರತಿ ರಣಗಲ್ ಹಿನ್ನೆಲೆ ಹೇಳಿದ್ದಾರೆ. ಸಾವಿರಾರು ಜನರ ಪಾಲಿಗೆ ದೇವರಾಗಿರುವ ಭೈರತಿ ರಣಗಲ್ ಈ ಮೊದಲು ಏನಾಗಿದ್ದ? ಆತನ ಬಾಲ್ಯ ಹೇಗಿತ್ತು? ಡಾನ್ ರೀತಿ ಆತ ಬೆಳೆದು ನಿಂತಿದ್ದು ಹೇಗೆ? ಅವನ ಪರ್ಸನಲ್ ಲೈಫ್ ಯಾವ ರೀತಿ ಇತ್ತು ಎಂಬ ಕಥೆ ಚಿತ್ರದಲ್ಲಿದೆ. ಪ್ರೇಕ್ಷಕರಿಗೆ ಇಷ್ಟವಾಗಿದೆ. ಅದಕೆಕ ಸಾಕ್ಷಿ ಭೈರತಿ ರಣಗಲ್ ಕಲೆಕ್ಷನ್. ಈಗ ಸೋಮವಾರ. ವೀಕೆಂಡಿನಲ್ಲಿ ಆರ್ಭಟಿಸಿದ್ದ ಭೈರತಿ ರಣಗಲ್, ವಾರದ ಮಧ್ಯೆಯೂ ಅದೇ ದಾಖಲೆ ಮುಂದುವರಿಸಿದರೆ ಸಿನಿಮಾ ಸೂಪರ್ ಹಿಟ್ ಆಗೋದ್ರಲ್ಲ ನೋ ಡೌಟ್.



