ಹ್ಯಾಟ್ರಿಕ್ ಹೀರೋ (hattrick hero) ಶಿವಣ್ಣಂಗೆ (shiva rajkumar) ಸ್ವಲ್ಪ ಆರೋಗ್ಯ ಸಮಸ್ಯೆಯಾದರೂ ಕುಟುಂಬದವರಷ್ಟೇ ತಳಮಳಗೊಳ್ಳೋದು ಫ್ಯಾನ್ಸ್. ಗೀತಾ ಶಿವ ರಾಜ್ʻಕುಮಾರ್ (Geetha Shiva rajkumar) ಅವರೇ ಡೋಂಟ್ ವರಿ ಎಂದರೂ ಅಭಿಮಾನಿಗಳ ತಳಮಳ ಮುಗಿಯುವಂತಹದ್ದಲ್ಲ. ರಾಘವೇಂದ್ರ ರಾಜ್ʻಕುಮಾರ್ ಹೇಳಿದರೂ ಆತಂಕ ತಣ್ಣಗಾಗಲ್ಲ. ಅವರಿಗೆ ಸ್ವತಃ ಶಿವಣ್ಣನೇ ಹೇಳಬೇಕು. ಈ ಬಾರಿಯೂ ಅಷ್ಟೆ. Shiva Rajkumar hospitalized later discharge̤ he is good now̤
ನಟ ಶಿವ ರಾಜ್ʻಕುಮಾರ್ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ಹಾಗೆಂದು ಯಾರೂ ಆತಂಕ ಪಡುವ ಗಂಭೀರ ಸಮಸ್ಯೆಯೇನೂ ಅಲ್ಲ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಾಣಿಸಿಕೊಂಡ ಕಾರಣ ಶಿವಣ್ಣ ತಕ್ಷಣ ವೈದೇಹಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಜ್ವರದ ಜೊತೆಗೆ ಸಾಮಾನ್ಯ ಆರೋಗ್ಯ ತಪಾಸಣೆ ಕೂಡ ಮಾಡಿದ್ದಾರೆ ಎನ್ನಲಾಗಿದೆ.
ಅರ್ಜುನ್ ಜನ್ಯ (Arjun Janya) ನಿರ್ದೇಶನದ 45 ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿರುವುದು ಗೊತ್ತಿದೆಯಷ್ಟೇ.. ಆ ಸಿನಿಮಾ ಚಿತ್ರೀಕರಣದ ವೇಳೆ ಮಳೆಯಲ್ಲಿ ನೆನದಿದ್ದಾರೆ ಶಿವಣ್ಣ (Shiva Rajkumar). ದೇಹ ಸ್ವಲ್ಪ ಬಿಸಿಯಾಗಿದೆ. ಅದಕ್ಕೆಲ್ಲ ಶಿವಣ್ಣ (Shiva Rajkumar) ಡೋಂಟ್ ಕೇರ್ ಎಂದರೂ ಚಿತ್ರತಂಡದವರು ಬಿಟ್ಟಿಲ್ಲ. ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿದ್ದಾರೆ.
ಜ್ವರಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದ ಬಳಿಕ ಶಿವರಾಜ್‌ಕುಮಾರ್ (Shiva Rajkumar) ಅವರನ್ನು ಮಧ್ಯಾಹ್ನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಸದ್ಯ ಶಿವಣ್ಣ (Shiva Rajkumar) ಮನೆಯಲ್ಲಿಯೇ ವಿಶ್ರಾಂತಿ ಪಡೆದು, ಅದಾಗಲೇ ಇನ್ನೊಂದು ಕೆಲಸಕ್ಕೆ ಹೊರಟು ನಿಂತಿದ್ದಾರೆ. ಯುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಆತಂಕ ಪಡೆಬೇಕಾದ ಅಗತ್ಯವಿಲ್ಲ ಎಂದು ವೈದ್ಯರೇ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.
ಇದೆಲ್ಲದರ ಜೊತೆಗೆ ಚೆನ್ನೈನಲ್ಲಿ ಆತ್ಮೀಯ ಗೆಳೆಯರೊಬ್ಬರ ಮಗಳ ಮದುವೆ ಇದೆಯಂತೆ. ಆ ಮದುವೆಗಾಗಿ ಹೊರಟು ನಿಂತಿದ್ದಾರೆ (Shiva Rajkumar) ಶಿವ ರಾಜ್ʻಕುಮಾರ್.
ಕೆಲವು ವರ್ಷಗಳ ಹಿಂದೆ ಶಿವಣ್ಣನಿಗೆ (Shiva Rajkumar) ಹೃದಯ ಸಂಬಂಧಿ ಸಮಸ್ಯೆ ಎದುರಾಗಿ, ಶಸ್ತ್ರಚಿಕಿತ್ಸೆಯೂ ಆಗಿತ್ತು. ಇನ್ನೊಮ್ಮೆ 57ನೇ ಹುಟ್ಟುಹಬ್ಬದ ನಡುವಲ್ಲೇ ಭುಜದ ಆಪರೇಷನ್ ಆಗಿತ್ತು. ಲಂಡನ್ʻನಲ್ಲಿ ಚಿಕಿತ್ಸೆ ಪಡೆದಿದ್ದರು. ವಯಸ್ಸು 60 ದಾಟಿದ್ದರೂ, ಈಗಲೂ ಎನರ್ಜೆಟಿಕ್ ಆಗಿರುವ ನಟ ಶಿವ ರಾಜ್ʻಕುಮಾರ್ (Shiva Rajkumar) ಅವರ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಎದುರಾದರೂ ಅಭಿಮಾನಿಗಳು ತಕ್ಷಣ ತಲ್ಲಣಗೊಳ್ಳುತ್ತಾರೆ. ಆದರೆ ಜ್ವರದ ಹೊರತಾಗಿ ಬೇರೆ ಯಾವ ಸಮಸ್ಯೆಗಳೂ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.
ಸ್ವತಃ ಶಿವಣ್ಣನೇ (Shiva Rajkumar) ಹೇಳಿದ್ಮೇಲೆ ಅಭಿಮಾನಿಗಳು ತಣ್ಣಗಾಗಲೇ ಬೇಕು. ಡೋಂಟ್ ವರಿ, ಶಿವಣ್ಣ ಆರೋಗ್ಯವಾಗಿದ್ದಾರೆ. ಎಂದಿನಂತೆ ರೆಸ್ಟ್ ಪಡೆದು ಚೆನ್ನೈಗೆ ಹೊರಟಿದ್ದಾರೆ. ಗೆಳೆಯನ ಮಗಳ ಮದುವೆಗಾಗಿ ಚೆನ್ನೈಗೆ ಹೋಗಿದ್ದಾರೆ. ರಿಲ್ಯಾಕ್ಸ್.



