ಭೈರತಿ ರಣಗಲ್ ಸಿನಿಮಾ ರಿಲೀಸ್ ಡೇಟ್ ಘೋಷಣೆಯಾಗಿದೆ. ಆ.15ರಂದು ತೆರೆಕಾಣಬೇಕಿದ್ದ ಸಿನಿಮಾ, ನವೆಂಬರ್ 15ರಂದು ರಿಲೀಸ್ ಆಗುತ್ತಿದೆ. ಯಲಹಂಕದ ಗೆಲರಿಯಾ ಮಾಲ್‍ನಲ್ಲಿ ಇದೇ ಮೊದಲ ಬಾರಿಗೆ ಹೊಸದಾಗಿ ನಿರ್ಮಿಸಲಾಗಿದ್ದ ಅತೀ ದೊಡ್ಡ ಗ್ರ್ಯಾಫಿಟಿ ಆರ್ಟ್ ಅನಾವರಣಗೊಳಿಸುವ ಮೂಲಕ ‘ಭೈರತಿ ರಣಗಲ್’ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಮಾಡಲಾಯ್ತು. ಈ ಸಿನಿಮಾವನ್ನು ಗೀತಾ ಶಿವರಾಜ್ಕುಮಾರ್ ಅವರು ನಿರ್ಮಿಸಿದ್ದಾರೆ. ನರ್ತನ್ ಅವರು ನಿರ್ದೇಶನ ಮಾಡಿದ್ದಾರೆ. ಬಿಡುಗಡೆ ದಿನಾಂಕ ಘೋಷಿಸುವಾಗ ನಿವೇದಿತಾ ಶಿವರಾಜ್ ಕುಮಾರ್ ಕೂಡ ಹಾಜರಿದ್ದರು.
ಮಫ್ತಿ ಸಿನಿಮಾದಲ್ಲಿ ಮ್ಯಾಜಿಕ್ ಮಾಡಿದ್ದ ನರ್ತನ್, ಭೈರತಿ ರಣಗಲ್ ಮೂಲಕ ಪ್ರೀಕ್ವೆಲ್ ಕಥೆ ಹೇಳಿದ್ದಾರೆ. ಶಿವಣ್ಣ ಅವರಿಗೆ ಹೊಸ ಇಮೇಜ್ ಕೊಟ್ಟಿದ್ದ ಸಿನಿಮಾ ಮಫ್ತಿ. ನ.15ರಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಮೂಲಕ ಜನರು ಪ್ರೋತ್ಸಾಹ ನೀಡಬೇಕು ಎಂದು ಅವರು ಪ್ರೇಕ್ಷಕರಲ್ಲಿ ವಿನಂತಿಸಿಕೊಂಡರು ನರ್ತನ್. ಶಿವಣ್ಣ ಕಣ್ಣುಗಳನ್ನು ಉಪೇಂದ್ರ ನಂತರ ಅದ್ಭುತವಾಗಿ ಬಳಸಿಕೊಂಡ ನಿರ್ದೇಶಕರಾಗಿ ನರ್ತನ್ ನಿಲ್ತಾರೆ. ಕೇವಲ ಕಣ್ಣುಗಳಲ್ಲೇ ಮಾತನಾಡಿದ್ದ ಶಿವಣ್ಣ, ಮಫ್ತಿಯಲ್ಲಿ ಅಬ್ಬರಿಸಿದ್ದರು. ಹೀರೋ ಶ್ರೀಮುರಳಿಯೇ ಆದರೂ.. ಶಿವಣ್ಣನ ಎಂಟ್ರಿ ನಂತರ.. ಚಿತ್ರದ ಖದರೇ ಚೇಂಜ್ ಆಗ್ಬಿಡುತ್ತೆ. ಈಗ ಸುದೀರ್ಘ ಹಲವು ವರ್ಷಗಳ ನಂತರ ಚಿತ್ರದ ಸೀಕ್ವೆಲ್ ಬರ್ತಾ ಇದೆ. ಭೈರತಿ ರಣಗಲ್. ಶಿವಣ್ಣ ಅಭಿನಯದ ಸಿನಿಮಾ. ಇದು ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಸಿನಿಮಾ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ರಂದೇ ರಿಲೀಸ್ ಆಗಬೇಕಿದ್ದ ಸಿನಿಮಾ ಈಗ ನವೆಂಬರ್ 15ಕ್ಕೆ ರಿಲೀಸ್ ಆಗುತ್ತಿದೆ. ರಿಲೀಸ್ ಡೇಟ್ ಘೋಷಿಸಿದ ನಂತರ ಗೀತಾ ಶಿವರಾಜ್ಕುಮಾರ್ ಮಾತಾಡಿದರು. ‘ಇದು ನಮ್ಮ ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣ ಆಗಿರುವ 2ನೇ ಸಿನಿಮಾ. ಮೊದಲ ಚಿತ್ರ ‘ವೇದ’ಗೆ ನೀವು ನೀಡಿದ ಪ್ರೋತ್ಸಾಹ, ಬೆಂಬಲಕ್ಕೆ ಧನ್ಯವಾದಗಳು. ಈಗ ಈ ಸಿನಿಮಾಗೂ ನಿಮ್ಮೆಲ್ಲರ ಪ್ರೋತ್ಸಾಹ ಇರಲಿ. ಬೆಳಗಾವಿಯಲ್ಲೂ ಈ ಸಿನಿಮಾ ಕುರಿತಾದ ಕಾರ್ಯಕ್ರಮ ಮಾಡುತ್ತೇವೆ’ ಎಂದು ಗೀತಾ ಹೇಳಿದರು.
ಭೈರತಿ ರಣಗಲ್ ಚಿತ್ರದಲ್ಲಿ ಶಿವ ರಾಜ್ ಕುಮಾರ್ ಎದುರು ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಭೈರತಿ ರಣಗಲ್ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ ಮಾಡಲಾಗಿದ್ದು, ಹಾಡಿನಲ್ಲಿ ಕಥಾನಾಯಕನ ಗುಣಗಾನ ಮಾಡಲಾಗಿದೆ. ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದು, ಶೀರ್ಷಿಕೆ ಗೀತೆ ಮೂಲಕ ಅವರು ನಿರೀಕ್ಷೆ ಹೆಚ್ಚಿಸಿದ್ದಾರೆ.
ಆನಂದ್ ಆಡಿಯೋ ಮೂಲಕ ‘ಭೈರತಿ ರಣಗಲ್’ ಟೈಟಲ್ ಸಾಂಗ್ ರಿಲೀಸ್ ಮಾಡಲಾಗಿದೆ. ಕಿನ್ನಳರಾಜ್ ಅವರು ಈ ಹಾಡಿಗೆ ಸಾಹಿತ್ಯ ಬರೆಸಿದ್ದಾರೆ. ಭೈರತಿ ರಣಗಲ್ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತಿಳಿಸುವಂತಹ ಸಾಲುಗಳನ್ನು ಅವರು ಬರೆದಿದ್ದಾರೆ. ಸಂತೋಷ್ ವೆಂಕಿ ಅವರ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ. ಲಿರಿಕಲ್ ವಿಡಿಯೋ ನೋಡಿ ಶಿವರಾಜ್ ಕುಮಾರ್ ಅಭಿಮಾನಿಗಳು ಖುಷಿಯಾಗಿದ್ದಾರೆ.



