ಶಿವಣ್ಣ ಹುಟ್ಟುಹಬ್ಬಕ್ಕೆ ಈ ಬಾರಿ ತಯಾರಿ ಜೋರಾಗಿದೆ. ಏಕೆಂದರೆ ಕಾಯುತ್ತಿರುವುದು ಇಡೀ ರಾಜವಂಶದ ಫ್ಯಾನ್ಸ್. ರಾಜಕುಮಾರ್ (Dr.Rajkumar) , ಶಿವ ರಾಜ್‍ಕುಮಾರ್ (Dr. Shiva Rajkumar), ಪುನೀತ್ ರಾಜ್`ಕುಮಾರ್ (Dr. Puneeth Rajkumar), ಯುವ ರಾಜ್`ಕುಮಾರ್(Yuva Rajkumar) ಸೇರಿದಂತೆ ಎಲ್ಲರ ಅಭಿಮಾನಿಗಳೂ ಸಂಭ್ರಮಕ್ಕೆ ಜೊತೆಯಾಗಿದ್ದಾರೆ. ಸಡಗರವೂ ಜೋರು ಜೋರು. ಕೋವಿಡ್, ಪುನೀತ್ ನಿಧನದಿಂದಾಗಿ ಸತತ ನಾಲ್ಕು ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿದ್ದ ಶಿವ ರಾಜ್‍ಕುಮಾರ್. ಈ ಬಾರಿ ಅಭಿಮಾನಿಗಳ ಜೊತೆ ಹಬ್ಬ ಮಾಡಲಿದ್ದಾರೆ.
ಈ ಬಾರಿ ಜುಲೈ 11ರ ಸಂಜೆಯಿಂದಲೇ ಸಂಭ್ರಮಾಚರಣೆ ಆರಂಭವಾಗಲಿದೆ. ಇದಕ್ಕಾಗಿ ಒಂದು ತಿಂಗಳ ತಯಾರಿಯನ್ನು ಅಭಿಮಾನಿಗಳು ಮಾಡಿಕೊಂಡಿದ್ದಾರೆ. ಮೊನ್ನೆ ಡಾನ್ಸ್ ಕರ್ನಾಟಕ ಡಾನ್ಸ್ ಶೋ ಶೂಟಿಂಗ್ ಸಮಯದಲ್ಲಿ ಅಲ್ಲಿಗೆ ಬಂದಿದ್ದ ಒಂದಷ್ಟು ಮಂದಿ ಅಭಿಮಾನಿಗಳು ಜುಲೈ 12ರಂದು ಎಲ್ಲಿಯೂ ಹೋಗದಂತೆ ಶಿವರಾಜ್ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ ಎಂದು ವಿವರ ಕೊಟ್ಟಿದ್ದಾರೆ ಶಿವಣ್ಣ ಕುಟುಂಬದ ಸದಸ್ಯರಂತೆಯೇ ಇರುವ ನಿರ್ಮಾಪಕ ಕೆ.ಪಿ.ಶ್ರೀಕಾಂತ್.
ಜುಲೈ 11ರ ರಾತ್ರಿ 12ಗಂಟೆಗೆ ಕೇಕ್ ಕತ್ತರಿಸುವ ಕಾರ್ಯಕ್ರಮ. ನಂತರ ಸಿಡಿಮದ್ದು ಸಿಡಿಸಿ ಸಂಭ್ರಮಾಚರಣೆ.
ಜುಲೈ 12ರಂದು ರಾಜ್ಯದ ವಿವಿಧ ಭಾಗಗಳಿಂದ ಬಂದ ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ, ನಂತರ ಕಾರ್ಯಕ್ರಮ ಸಂತೋಷ್ ಚಿತ್ರಮಂದಿರದಲ್ಲಿ ಹೊಸ ಸಿನಿಮಾ ಘೋಸ್ಟ್ ಟೀಸರ್ ಬಿಡುಗಡೆ
ಮಧ್ಯಾಹ್ಯ ನಾಗವಾರದ ಮನೆಗೆ ಬರುವ ಅಭಿಮಾನಿಗಳಿಗೆ ಶಿವರಾಜ್ ಕುಮಾರ್ ಅವರಿಂದ ಭರ್ಜರಿ ಊಟದ ವ್ಯವಸ್ಥೆ ಇದೆ.
ಇದಾದ ಮೇಲೆ ಅಲ್ಲಲ್ಲಿ ಶಿವರಾಜ್ ಕುಮಾರ್, ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಅಭಿಮಾನಿ ಸಂಘಗಳೂ ಸೇರಿದಂತೆ ವಿವಿದ ಅಭಿಮಾನಿ ಸಂಘಗಳಿಂದ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮಗಳೂ ನಡೆಯಲಿವೆ.



