1989ರಲ್ಲಿ ಇನ್ಸ್`ಪೆಕ್ಟರ್ ವಿಕ್ರಂ ಸಿನಿಮಾ ಮಾಡಿದಾಗ ಶಿವಣ್ಣ 30+ ಆಗಿದ್ದರು. ಈಗ 60+ ಆಗಿದ್ದಾರೆ. ಆಗ ಶಿವರಾಜ್ ಕುಮಾರ್ ಆಗಿದ್ದವರು ಈಗ ಶಿವಣ್ಣನಾಗಿದ್ದಾರೆ. ಇದೀಗ ಮತ್ತೊಮ್ಮೆ ಇನ್ಸ್`ಪೆಕ್ಟರ್ ವಿಕ್ರಂ ಆಗುತ್ತಿದ್ದಾರೆ. ಇನ್ಸ್`ಪೆಕ್ಟರ್ ವಿಕ್ರಂ. 34 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಸಿನಿಮಾ. ಸೂಪರ್ ಹಿಟ್. 100 ಡೇಸ್ ಮೂವಿ. ದಿನೇಶ್ ಬಾಬು ನಿರ್ದೇಶನದ ಚಿತ್ರವದು. ಶಿವಣ್ಣ ಕೆರಿಯರ್`ನ 7ನೇ ಸಿನಿಮಾ ಕೂಡಾ ಹೌದು. ಪಾರ್ವತಮ್ಮ ಬ್ಯಾನರ್`ನ ಚಿತ್ರದ ಮೂಲಕ ರಾಘವೇಂದ್ರ ರಾಜ್`ಕುಮಾರ್ ನಿರ್ಮಾಪಕರೂ ಆಗಿದ್ದರು. ಫನ್ನಿ ಇನ್ಸ್`ಪೆಕ್ಟರ್ ಪಾತ್ರದಲ್ಲಿ ಶಿವಣ್ಣ ಮಿಂಚಿದ್ದರು. ಅಶ್ವತ್ಥ್, ಚಿ.ಗುರುದತ್, ಅಪರ್ಣ, ಕಾವ್ಯ, ಅವಿನಾಶ್, ಹೊನ್ನವಳ್ಳಿ ಕೃಷ್ಣ ನಟಿಸಿದ್ದ ಚಿತ್ರದ ಕಥೆ ವಿಭಿನ್ನವಾಗಿತ್ತು. ಫನ್ನಿಯಾಗಿತ್ತು. ಸಿನೆಮಾ ಸಕ್ಸಸ್ ಆಗಿತ್ತು.
ಅದಾದ ಮೇಲೆ ಮತ್ತೊಮ್ಮೆ ಇನ್ಸ್`ಪೆಕ್ಟರ್ ವಿಕ್ರಂ ಹೆಸರಲ್ಲಿ ಮತ್ತೊಂದು ಸಿನಿಮಾ ಬಂದಿತ್ತು. ಆ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಮತ್ತು ಭಾವನಾ ಹೀರೋ-ಹೀರೋಯಿನ್. ಸಿನಿಮಾ ಸುಮಾರಾಗಿ ಓಡಿತ್ತು. ಇದೀಗ ಮತ್ತೊಮ್ಮೆ ವಿಕ್ರಂ ರಿಟನ್ರ್ಸ್ ಅಗುತ್ತಿದ್ದಾರೆ.
ಈ ಐವಿ ರಿಟನ್ರ್ಸ್ ಚಿತ್ರಕ್ಕೆ ಶಿವರಾಜ್ಕುಮಾರ್ ಸೋದರ ಸಂಬಂಧಿ ಲಕ್ಕಿ ಗೋಪಾಲ್ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ. ಲಕ್ಕಿ ಗೋಪಾಲ್ ಹಿಂದೆ ‘ಎಸ್ಆರ್ಕೆ’ ಎಂಬ ಸಿನಿಮಾ ಅನೌನ್ಸ್ ಮಾಡಿದ್ದರು. ಕಾರಣಾಂತರಗಳಿಂದ ಅದು ನಿಂತು ಹೋಗಿತ್ತು. ಈಗ ಅವರು ಮತ್ತೊಮ್ಮೆ ಶಿವಣ್ಣಗೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಇದಕ್ಕೆ ‘ಐವಿ ರಿಟರ್ನ್ಸ್’ ಎಂದು ಹೆಸರಿಟ್ಟಿದ್ದಾರೆ. ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದಂತೆ ಇದರಲ್ಲಿಯೂ ಶಿವಣ್ಣ ಪೊಲೀಸ್ ಆಗಿರಲಿದ್ದಾರೆ.
ನಾನು ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಬೇರೆ ರೀತಿಯ ಶಿವಣ್ಣ ಅವರನ್ನು ತೋರಿಸುತ್ತೇನೆ. ಇದರ ಸ್ಕ್ರಿಪ್ಟ್ ಕ್ರೇಜಿ ಆಗಿದೆ ಎಂದು ಲಕ್ಕಿ ಗೋಪಾಲ್ ಹೇಳಿದ್ದಾರೆ. ಸದ್ಯಕ್ಕೆ ‘ಐವಿ ರಿಟರ್ನ್ಸ್’ ಸಿನಿಮಾದ ಫಸ್ಟ್ ಲುಕ್ ಮಾತ್ರ ಬಿಡುಗಡೆ ಆಗಿದೆ.



