ದರ್ಶನ್ ಅಭಿಮಾನಿಗಳ ವಿರುದ್ಧ ಈಗ ಪೊಲೀಸ್ ಕೇಸ್ ದಾಖಲಾಗಿದೆ. ಅದು ರಮ್ಯಾ ಕೊಟ್ಟಿರುವ ದೂರು. ರಮ್ಯಾಗೆ ಈಗ ಮಹಿಳಾ ಆಯೋಗದಿಂದಲೂ ಬೆಂಬಲ ಸಿಕ್ಕಿದೆ. ಅಶ್ಲೀಲವಾಗಿ ಸಂದೇಶ ಕಳಿಸಿದವರ ವಿರುದ್ಧ ತನಿಖೆ ಮಾಡಿ ಕ್ರಮ ಕೈಕೊಳ್ಳಬೇಕು ಎಂದು ಕೋರಿ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದಾರೆ. ಇನ್ನು ನಟ ವಿನಯ್ ರಾಜ್ ಕುಮಾರ್, ಬಿಗ್ ಬಾಸ್ ಪ್ರಥಮ್, ನಟ ಅಹಿಂದ ಚೇತನ್ ಮತ್ತು ಆ ಮೂಲಕ ಫೈರ್ ಸಂಘಟನೆ ರಮ್ಯಾ ಅವರ ಬೆನ್ನಿಗೆ ನಿಂತಿವೆ. ಫಿಲ್ಮ್ ಚೇಂಬರ್ʻನವರಾದ ಉಮೇಶ್ ಬಣಕಾರ್ ರಮ್ಯಾ ಮಾಡ್ತಿರೋದು ಸರಿ ಎನ್ನುತ್ತಿದ್ದರೆ, ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹುಲು ʻನಂಗೇನೂ ಗೊತ್ತಿಲ್ಲʼ ಅಂತಿದ್ದಾರೆ.
ಸದ್ಯಕ್ಕೆ ದರ್ಶನ್ ಫ್ಯಾನ್ಸ್ ವಿರುದ್ಧ 11 BNS ಸೆಕ್ಷನ್ʻಗಳಲ್ಲಿ FIR ದಾಖಲಾಗಿದೆ.
BNS 351(2) : ಮಹಿಳೆ ಗೌರವಕ್ಕೆ ಧಕ್ಕೆಯಾಗುವ ಶಬ್ದ ಬಳಕೆ ಮಾಡಿ ನಿಂದನೆ
351(3) : ಲೈಂಗಿಕ ಉದ್ದೇಶದಿಂದ ಕಿರುಕುಳ ನೀಡಿರುವುದು
BNS 352: ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಮುಟ್ಟುವುದು ಅಥವಾ ಮುಟ್ಟುವುದಾಗಿ ಹೆದರಿಸುವುದು
BNS ಸೆ. 75(1)(4): ಕ್ರಿಮಿನಲ್ ವರ್ತನೆಗಳ ಮೂಲಕ ಸಂಚು ಮಾಡುವುದು
BNS ಸೆ. 79: ಗಂಭೀರ ನಡತೆ ಆಧಾರದ ಗಂಭೀರ ಅಪರಾಧ.
IT ಆ್ಯಕ್ಟ್ ಸೆ. 66 – Hacking/Illegal access ಮಾಡಿ, ಹೆದರಿಸುವುದು
ಕಂಪ್ಯೂಟರ್ ಸಿಸ್ಟಮ್‌ಗೆ ಕಾನೂನು ಬಾಹಿರವಾಗಿ ಅತಿಕ್ರಮ ಪ್ರವೇಶ ಮಾಡುವುದು
ಡೇಟಾ ಡಿಲೀಟ್ ಮಾಡುವುದು, ಹಿಸ್ಟರಿ ಡಿಲೀಟ್ ಮಾಡುವುದು ಅಥವಾ ಬದಲಾಯಿಸುವುದು ಅಪರಾಧ
ಶಿಕ್ಷೆ: ಗರಿಷ್ಠ 3 ವರ್ಷದವರೆಗೆ ಜೈಲು ಶಿಕ್ಷೆ ಜೊತೆಗೆ ದಂಡ ವಿಧಿಸಲು ಅವಕಾಶ
ಸೆ. 67: ಅಶ್ಲೀಲ ಪೋಸ್ಟ್, ಫೋಟೋ, ವಿಡಿಯೋ ಅಪ್‌ಲೋಡ್ ಮಾಡುವುದು
ಶಿಕ್ಷೆ: 3 ರಿಂದ 5 ವರ್ಷ ಜೈಲು ಶಿಕ್ಷೆ, ಭಾರೀ ದಂಡ ವಿಧಿಸಲು ಅವಕಾಶ
ದರ್ಶನ್ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚು ಇದೆ ಎನ್ನುವುದೇನೋ ನಿಜ. ಆದರೆ.. ಅಭಿಮಾನವೇ ತುಂಬಿ ತುಳುಕುವ ಅಭಿಮಾನಿಗಳಿಗಿಂತ ಎಕ್ಸ್ ಪೋಸ್ ಆಗುವುದು ಇಂತಹ ಎಡಬಿಡಂಗಿಗಳೇ. ಇದೀಗ ಎಡಬಿಂಡಗಿ ಫ್ಯಾನ್ಸ್ಗಳ ಹುಚ್ಚುಬಿಡಿಸೋ ಕಾರ್ಯಾಚರಣೆ ಶುರುವಾಗಿದೆ.
ಇದು ಒಂದು ಕಡೆ ಆದರೆ.. ದರ್ಶನ್ ಪರ ನಿಂತಿರುವವರ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಜೈಲಿನಲ್ಲಿದ್ದಾಗ ದರ್ಶನ್ ಜೊತೆಯಲ್ಲಿದ್ದವರು ನಟಿ ರಚಿತಾ ರಾಮ್, ವಿನೋದ್ ಪ್ರಭಾಕರ್, ವಿನೋದ್ ರಾಜ್, ಧನ್ವೀರ್, ಚಿಕ್ಕಣ್ಣ, ತರುಣ್ ಸುಧೀರ್, ಸೋನಲ್ ಮಂಥೆರೋ.. ಅವರಂತಹ ಕೆಲವೇ ಕೆಲವು ನಟರು. ಈಗಲೂ ಅಷ್ಟೇ.. ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಮಾರ್ಮಿಕ ಪೋಸ್ಟ್ ಹಾಕಿ ದರ್ಶನ್ ಪರ ನಿಂತಿದ್ರೆ, ಸಂಜನಾ ಗಲ್ರಾನಿ ಮಾತ್ರ ಓಪನ್ ಆಗಿ ಸಪೋರ್ಟ್ ಮಾಡಿದ್ದಾರೆ.
ನಟಿ ಸಂಜನಾ ಗಲ್ರಾನಿ ʻಯಾರು.. ಎಷ್ಟೇ ದೊಡ್ಡ ನಟಿಯಾಗಿರಲಿ.. ಪ್ರಶ್ನೆ ಮಾಡೋಕೆ ಅವರಿಗೆ ಏನ್ ಅಧಿಕಾರ ಇದೆ. ಅವರು ಯಾರು ಪ್ರಶ್ನೆ ಮಾಡೋಕೆ? ಅವರೇನು ನ್ಯಾಯಾಂಗ ವ್ಯವಸ್ಥೆಯೇ? ಜಡ್ಜ್ ಅಂತೂ ಅಲ್ಲ.. ಅಲ್ಲವೇ?. ಯಾರಾದ್ರು ಮೆಸೆಜ್ ಮಾಡ್ತಾರೆ. ಬೀದಿಲಿ ಹೋಗೋರು ಬರೋವ್ರೆಲ್ಲ ಮೆಸೇಜ್ ಮಾಡ್ತಾರೆ. ಅವರಿಗೆ ದರ್ಶನ್ ಇಷ್ಟ ಇರುತ್ತಾರೆ. ಹಾಗೆಂದ ಮಾತ್ರಕ್ಕೆ.. ದರ್ಶನ್ ಫ್ಯಾನ್ಸ್ ಎಲ್ಲ ಕೆಟ್ಟವರು ಅಂದ್ರೆ ಹೇಗೆ.. ʻʻರೇಣುಕಾಸ್ವಾಮಿ ಕೇಸ್ ಆರಂಭದಿಂದಲೂ ನೋಡ್ತಿದ್ದೇನೆ. ಅಂದಿನಿಂದ ಇದೆಲ್ಲ ಶುರುವಾಗಿದೆ. ಕೊಲೆ ಮಾಡಿದ್ದು ಯಾರೋ. ಸಫರ್ ಆಗುತ್ತಿರೋದು ಯಾರೋ.. ದರ್ಶನ್ ಸರ್ ಹೆಸರು ಹಾಳು ಮಾಡಲಾಗುತ್ತಿದೆ…ʼʼ ಎಂದಿದ್ದಾರೆ.
ಅಂದಹಾಗೆ ದರ್ಶನ್ ಜೊತೆ ನಿಂತವರಲ್ಲಿ ನಟಿ ವಿಜಯಲಕ್ಷ್ಮಿ, ತಮ್ಮ ದಿನಕರ್ ಕೂಡಾ ಇದ್ದಾರೆ. ಅವರದ್ದು ಮಾತ್ರ ನಿಷ್ಕಲ್ಮಷ ಬೆಂಬಲ ಎನ್ನಬಹುದು.



