ಟೀಂ ಇಂಡಿಯಾ ವರ್ಸಸ್ ಪಾಕಿಸ್ತಾನದ ಪಂದ್ಯಕ್ಕೆ ಭಾರೀ ಪರ ವಿರೋಧ ವ್ಯಕ್ತವಾಗಿದೆ. ವ್ಯಕ್ತವಾಗಿತ್ತು. ಬಹುಶಃ ಈ ಹಿಂದಿನ ಯಾವ ಭಾರತ-ಪಾಕ್ ಪಂದ್ಯಗಳಿಗೂ ವ್ಯಕ್ತವಾಗದ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೇ ಆಕ್ರೋಶಗೊಂಡಿದ್ದರು. ಪಹಲ್ಗಾಂ ದಾಳಿಯ ನೆನಪು ಇಷ್ಟು ಬೇಗ ಮರೆತು ಹೋಯ್ತೇ.. ದುಡ್ಡಿಗಾಗಿ ಬಿಸಿಸಿಐ ದೇಶದ ಮರ್ಯಾದೆ ಕಳೆಯುತ್ತಿದೆ ಎಂದೆಲ್ಲ ಆಕ್ರೋಶಗೊಂಡಿದ್ದರು. ಮೋದಿಯನ್ನು ಆರಾಧಿಸುವ ಭಕ್ತರೇ.. ಪ್ರಧಾನಿ ಮೋದಿ ವಿರುದ್ಧವೂ ಆಕ್ರೋಶಗೊಂಡಿದ್ದು ಈ ಬಾರಿಯ ವಿಶೇಷ. ಇಷ್ಟೆಲ್ಲದರ ನಡುವೆಯೂ ಭಾರತ ಗೆದ್ದಾಯ್ತು. ಗೆದ್ದ ಮೇಲೆ.. ಟೀಕಿಸಿದ್ದ ಅಭಿಮಾನಿಗಳೇ ಮೆಚ್ಚುಗೆ ವ್ಯಕ್ತಪಡಿಸತೊಡಗಿದ್ದಾರೆ. ಎಂದಿನಂತೆ ವಿರೋಧಗಳೂ ಇವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮರ್ಯಾದೆ ಹರಾಜು :
ಉಗ್ರವಾದ ಪ್ರಾಯೋಜಿಸುತ್ತಿರುವ ಪಾಕಿಸ್ತಾನದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಬಹುಮಾನ ವಿತರಣೆ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ‘ಗೆಲುವನ್ನು ಪಹಲ್ಗಾಂ ಸಂತ್ರಸ್ತರು ಹಾಗೂ ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸುತ್ತೇವೆ’ ಎನ್ನುವ ಮೂಲಕ ಪಾಕಿಸ್ತಾನಿಗಳ ಮಾನ ಮರ್ಯಾದೆ ಹರಾಜು ಹಾಕಿದ್ದಾರೆ. ಇದನ್ನು ಪಾಕಿಸ್ತಾನ ನಿರೀಕ್ಷೆ ಮಾಡಿರಲಿಲ್ಲ. ಸೋತು ಮರ್ಯಾದೆ ಹೋಗಿದೆ ಅಷ್ಟೇ ಅಲ್ಲ, ಆಡಿ ಇದ್ದ ಬದ್ದ ಒಂದಿಷ್ಟು ಗೌರವವನ್ನೂ ಕಳೆದುಕೊಂಡಿದೆ ಪಾಕಿಸ್ತಾನ.
ಭಾರತ ಮಾಡಿದ ಅವಮಾನಗಳು ಒಂದೆರಡಲ್ಲ :
ಟಾಸ್ ಹಾಕುವಾಗ ಸೂರ್ಯ, ಪಾಕ್ ಕ್ಯಾಪ್ಟನ್ ಜೊತೆ ಶೇಕ್ ಹ್ಯಾಂಡ್ ಕೂಡಾ ಮಾಡಲಿಲ್ಲ.
ಪಾಕಿಸ್ತಾನದ ನಾಯಕನನ್ನು ಔಪಚಾರಿಕತೆ, ಸಂಪ್ರದಾಯಕ್ಕಾಗಿಯೂ ಮಾತನಾಡಲಿಲ್ಲ.
ಮ್ಯಾಚ್ ನಡೆಯುವಷ್ಟು ಸಮಯದಲ್ಲಿ ಪಾಕ್ ಆಟಗಾರರ ಜೊತೆ ಸಣ್ಣ ನಗುವೂ ಇರಲಿಲ್ಲ.
ಪಂದ್ಯ ಮುಗಿದ ಮೇಲೆ ಭಾರತದ ಆಟಗಾರರು ಅಭಿನಂದಿಸಲು ಬರುತ್ತಾರೆ ಎಂದು ಪಾಕ್ ಆಟಗಾರರು ಕಾಯುತ್ತಿದ್ದರು. ಆದರೆ, ಪಾಕ್ ಆಟಗಾರರು ಡ್ರೆಸ್ಸಿಂಗ್ ರೂಂಗೆ ಹೋದರು.
ಅಜೇಯ ಆಟಗಾರರಾಗಿದ್ದ ಸೂರ್ಯ ಮತ್ತು ಶಿವಂ ದುಬೆ ಕೂಡಾ ಪಾಕ್ ಆಟಗಾರರ ಜೊತೆ ಶೇಕ್ ಹ್ಯಾಂಡ್ ಮಾಡಲಿಲ್ಲ.
ಬಹುಮಾನ ವಿತರಣೆ ವೇಳೆ ಪಾಕ್ ಪರ ಪ್ರಾಯೋಜಕರ ಜೊತೆಯಲ್ಲೂ ಶೇಕ್ ಹ್ಯಾಂಡ್ ಮಾಡಲಿಲ್ಲ
ಹೀಗೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಅವಮಾನ ಮಾಡಿದೆ. ರಾಜಕೀಯವೇ ಬೇರೆ.. ಆಟವೇ ಬೇರೆ. ಭಾರತದ ವರ್ತನೆ ಸರಿಯಲ್ಲ ಎಂದು ಕೆಲವರು ಟೀಕೆ ಮಾಡ್ತಿದ್ದಾರೆ. ಆದರೆ, ಭಯೋತ್ಪಾದನೆ, ರಾಜಕೀಯಕ್ಕೆ ಸಂಬಂಧಪಟ್ಟ ವಿಚಾರ ಅಲ್ಲ. ರಾಜಕೀಯವೇ ಬೇರೆ. ಕ್ರಿಕೆಟ್ಟೇ ಬೇರೆ. ಭಯೋತ್ಪಾದನೆಯೇ ಬೇರೆ. ಪಾಕ್ ಆಟಗಾರರಾಗಿದ್ದ ಸಯೀದ್ ಅನ್ವರ್, ಶಾಹೀದ್ ಆಫ್ರಿದಿ.. ಮೊದಲಾದವರು ಓಪನ್ ಆಗಿಯೇ ಉಗ್ರವಾದಕ್ಕೆ ಜೈ ಎನ್ನುತ್ತಿದ್ದಾಗ ಮಾತನಾಡದವರು ಈಗ ʻಟೀಂ ಇಂಡಿಯಾಗೆ ಬುದ್ದಿʼ ಹೇಳೊ ಅಗತ್ಯ ಇಲ್ಲ.



