ಇತ್ತೀಚೆಗೆ ಬೆಂಗಳೂರಿನಲ್ಲಿ ಲುಲು ಮಾಲ್ʻನಲ್ಲಿ (Bengaluru Lulu mal) ಲೈಂಗಿಕ ಕಿರುಕುಳ ನೀಡುತ್ತಿರುವ (sexual harassment) ವಿಡಿಯೋ ಒಂದು ವೈರಲ್ viral video ಆಗಿತ್ತು. ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಯುವತಿಯೊಬ್ಬಳ ಹಿಂಭಾಗ ಮುಟ್ಟಿ, ನಂತರ ಅದೊಂದು ಆಕಸ್ಮಿಕ ಎಂಬಂತೆ ವರ್ತಿಸಿ ಹೋಗುತ್ತಿದ್ದ ದೃಶ್ಯ ಇತ್ತು. ಈಗ ಆ ವಿಡಿಯೋದಲ್ಲಿನ ಆ ವಿಕೃತಿ ಮೆರೆದಿದ್ದವನ ಡೀಟೈಲ್ಸ್ ಬಯಲಾಗಿದೆ. ಬಸವೇಶ್ವರನಗರ ನಿವಾಸಿ ಅಶ್ವಥ್ ನಾರಾಯಣ್ (60) ಆರೋಪಿ.
ವಯಸ್ಸು ೬೦ ವರ್ಷ ಎನ್ನುವುದಷ್ಟೇ ಅಲ್ಲ, ಆತ ಒಬ್ಬ ನಿವೃತ್ತ ಶಿಕ್ಷಕನೂ ಹೌದು. ಆರೋಪಿ ಪ್ರತಿಷ್ಠಿತ ಮಠಕ್ಕೆ ಸೇರಿದ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ನಿವೃತ್ತನಾಗಿದ್ದ. ಕಳೆದ ಎಂಟು ತಿಂಗಳ ಹಿಂದೆ ಅಶ್ವಥ್ ನಾರಾಯಣ್ ನಿವೃತ್ತನಾಗಿದ್ದ. ಸದ್ಯ ಅಶ್ವಥ್ ನಾರಾಯಣ್ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದು, ಆತನ ಪತ್ತೆಗೆ ಮಾಗಡಿ ರೋಡ್ ಪೊಲೀಸ್ರು ಹುಡುಕಾಟ ಮುಂದುವರೆಸಿದ್ದಾರೆ. ವೀಡಿಯೊ ಆಧರಿಸಿ ಸದ್ಯ ಆರೋಪಿಯ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. A retired teacher is accused in lulu mal sexual harassment case.
ಅಕ್ಟೋಬರ್ 29ರಂದು ಸಂಜೆ ಆರುವರೆ ಸುಮಾರಿಗೆ ಮಾಲ್‌ನ ಎರಡನೇ ಮಹಡಿಯ ಫಂಚುರ್ ಗೇಮ್ ಫ್ಲೋರ್‌ನಲ್ಲಿ ವ್ಯಕ್ತಿಯೋರ್ವ ಯುವತಿ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಆಕೆಯ ದೇಹವನ್ನು ಮುಟ್ಟಿದ್ದಾನೆ. ಲೈಂಗಿಕವಾಗಿ ಪ್ರಸ್ತಾಪಿಸುವ ಸಲುವಾಗಿಯೇ ಮಹಿಳೆಯ ಹಿಂಬದಿಯಲ್ಲಿ ಆಕೆಯನ್ನು ಅಶ್ಲೀಲವಾಗಿ ಮುಟ್ಟಿದ್ದಾನೆ. ಬಳಿಕ ತನಗೇನೂ ತಿಳಿದಿಲ್ಲ ಎಂಬಂತೆ ಆಲ್ಲಿಂದ ಹೋಗಿದ್ದಾನೆ. ಇಡೀ ವಿಡಿಯೋ ನೋಡಿದರೆ ಅದೊಂದು ಆಕಸ್ಮಿಕ ಎನ್ನುವಂತಿದೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ಅದೊಂದು ಬೇಕೆಂದೇ ಮಾಡಿದ ಉದ್ದೇಶ ಪೂರ್ವಕ ಕಿರುಕುಳ ಎಂದು ಅರಿವಾಗುತ್ತದೆ. ಏಕೆಂದರೆ ವಿಡಿಯೋದಲ್ಲಿ ಯುವತಿಯೂ ಅದಕ್ಕೆ ಆಕ್ಷೇಪ ಮಾಡುವುದಿಲ್ಲ. ಹಾಗೆ ನೋಡಿದರೆ ಆಕೆಗೆ ಅದೊಂದು ಕಿರುಕುಳ ಎಂದು ಅನ್ನಿಸದಂತೆ ವರ್ತಿಸುತ್ತಾನೆ ಆರೋಪಿ. ಆರೋಪಿಯ ವಯಸ್ಸು ನೋಡಿದ ಆ ಯುವತಿಯೂ ಏನೋ ಅಕಸ್ಮಾತ್ತಾಗಿ ಟಚ್ ಆಗಿರಬೇಕು ಎಂದು ಕೊಳ್ಳುತ್ತಾಳೆ. ಆದರೆ ಅದೇ ಸಮಯದಲ್ಲಿ ಬೇರೊಬ್ಬರು ಲುಲು ಮಾಲ್ʻನಲ್ಲಿ ಚಿತ್ರೀಕರಣ ಮಾಡುತ್ತಿದ್ದು, ಆಕಸ್ಮಿಕವಾಗಿ ಈ ವಿಕೃತಿಯ ವಿಡಿಯೋ ಸೆರೆಯಾಗಿತ್ತು.
ಬೆನ್ನಲ್ಲೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿ ಬೆನ್ನಲ್ಲೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿರುವ ವಿಚಾರ ಟಿವಿಗಳ ಮೂಲಕ ಗೊತ್ತಾಗಿ ಲುಲು ಮಾಲ್ ಅಧಿಕಾರಿ ಇದೀಗ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಮಾಗಡಿ ರಸ್ತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ವಿಡಿಯೋ ಆಧಾರದ ಮೇಲೆ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು.



