ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಎಂದರೆ ಆಗುವ ರೋಮಾಂಚನ, ಸಿಗುವ ಥ್ರಿಲ್, ಶಿಸ್ತುಬದ್ಧ ಕ್ರಿಕೆಟ್, ಸ್ಲೆಡ್ಜಿಂಗ್, ತಿರುಗೇಟು, ಟೆಸ್ಟ್ ಕ್ಲಾಸಿಕ್, ಅದ್ಭುತ ಆಟ.. ಒಂದಾ..ಎರಡಾ.. ರೋಮಾಂಚನಗಳು. ಆದರೆ ಈ ಬಾರ್ಡರ್ ಗವಾಸ್ಕರ್ ಟ್ರೋಫಿ ಸಿರೀಸ್ ಎಂದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಣ್ಣದೊಂದು ಆತಂಕವೂ ಶುರುವಾಗುತ್ತದೆ. ಕಾರಣ ಇಷ್ಠೆ.. ಭಾರತೀಯ ಕ್ರಿಕೆಟ್ ಲೋಕದ ದಿಗ್ಗಜರು ಟೆಸ್ಟ್ ಕ್ರಿಕೆಟ್, ಕ್ರಿಕೆಟ್ʻಗೆ ಗುಡ್ ಬೈ ಹೇಳಿರೋದೇ ಆಸ್ಟ್ರೇಲಿಯಾ ವಿರುದ್ಧದ ಸರಣಿ ಮುಗಿದ ಮೇಲೆ. ಈಗ ಅದಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹೊಸ ಸೇರ್ಪಡೆ. ಅಷ್ಟೇ.
ಇದೀಗ ವಿರಾಟ್ ಕೊಹ್ಲಿ ನಿವೃತ್ತಿ ಹೇಳೋದರ ಜೊತೆಗೆ ಈ ಬಾರ್ಡರ್ ಗವಾಸ್ಕರ್ ಟ್ರೋಫಿ ನಂತರ ಟೆಸ್ಟ್ ಕ್ರಿಕೆಟ್ಟಿಗೆ ಗುಡ್ ಬೈ ಹೇಳಿದ ದಿಗ್ಗಜರ ಸಂಖ್ಯೆ 3ಕ್ಕೆ ಏರಿದೆ. ಮೊದಲನೆಯವರು ರವಿಚಂದ್ರನ್ ಅಶ್ವಿನ್. ಎರಡನೆಯವರು ರೋಹಿತ್ ಶರ್ಮಾ ಮತ್ತು ಮೂರನೇಯವರೇ ವಿರಾಟ್ ಕೊಹ್ಲಿ.
ರವಿಚಂದ್ರನ್ ಅಶ್ವಿನ್: 2024-25ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಬಳಿಕ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿದ್ದರು. ಈ ಸರಣಿಯ 2ನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅಶ್ವಿನ್ 18 ಓವರ್ಗಳಲ್ಲಿ ಪಡೆದದ್ದು ಕೇವಲ 1 ವಿಕೆಟ್ ಮಾತ್ರ. ಇದುವೇ ಅವರ ಕೊನೆಯ ಟೆಸ್ಟ್ ಪಂದ್ಯವಾಗಿಬಿಟ್ಟಿತು.
ರೋಹಿತ್ ಶರ್ಮಾ: 2024-25ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ 3 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ 5 ಇನಿಂಗ್ಸ್ ಆಡಿದ ಹಿಟ್ಮ್ಯಾನ್ ಕಲೆಹಾಕಿದ್ದು ಕೇವಲ 31 ರನ್ಗಳು ಮಾತ್ರ. ಅಂದರೆ ಕೇವಲ 6.20 ಸರಾಸರಿಯಲ್ಲಿ ರನ್ಗಳಿಸಿದ್ದರು. ಈ ಕಳಪೆ ಪ್ರದರ್ಶನ ರೋಹಿತ್ ಶರ್ಮಾ ಅವರ ಟೆಸ್ಟ್ ಕೆರಿಯರ್ ಅಂತ್ಯವಾಗಲು ಮುಖ್ಯ ಕಾರಣವಾಯಿತು.
ವಿರಾಟ್ ಕೊಹ್ಲಿ: 2024-25ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 105 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ಆ ಬಳಿಕ 4 ಮ್ಯಾಚ್ಗಳಿಂದ ಕಲೆಹಾಕಿದ್ದು ಕೇವಲ 85 ರನ್ಗಳು ಮಾತ್ರ. ಅದರಲ್ಲೂ ಆಫ್ ಸ್ಟಂಪ್ನಲ್ಲಿ ವಿಕೆಟ್ ಕೈಚೆಲ್ಲುವ ಮೂಲಕ ಕೊಹ್ಲಿ ಬ್ಯಾಟಿಂಗ್ ಮರೆತಂತೆ ಭಾಸವಾಗಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿ ಬೇಸರ ತಂದಿದ್ದಾರೆ.
ಆದರೆ ಬಾರ್ಡರ್ ಗವಾಸ್ಕರ್ ಟ್ರೋಫಿ ನಂತರ ಗುಡ್ ಬೈ ಹೇಳಿದ ದಿಗ್ಗಜರಲ್ಲಿ ಈ ಮೂವರಷ್ಟೇ ಅಲ್ಲ, ಇನ್ನೂ ಕೆಲವರಿದ್ದಾರೆ.
ಸೌರವ್ ಗಂಗೂಲಿ : 2007ರಲ್ಲಿ ಕೊನೆಯ ಸರಣಿಯಲ್ಲಿ ಅದ್ಭುತ ಆಟವಾಡಿಯೇ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. ಕೊನೆಯ 4 ಪಂದ್ಯಗಳಲ್ಲಿ 54ರ ಸರಾಸರಿಯಲ್ಲಿ 4 ಪಂದ್ಯವನ್ನಾಡಿದ್ದರು.
ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್.. ಹೀಗೆ ಭಾರತೀಯ ಕ್ರಿಕೆಟ್‌ನ ದಿಗ್ಗಜರೆಲ್ಲ ಬಾರ್ಡರ್ ಗವಾಸ್ಕರ್ ಟ್ರೋಫಿ ನಂತರವೇ ಕ್ರಿಕೆಟ್‌ಗೆ ಬೈ ಬೈ ಹೇಳಿದ್ದಾರೆ. ವಿಚಿತ್ರವೆಂದರೆ ಎಲ್ಲ ಆಟಗಾರರೂ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಅತ್ಯಂತ ಕಳಪೆ ಸರಾಸರಿಗೆ ಇಳಿದು, ಬ್ಯಾಟಿಂಗ್ ವೈಫಲ್ಯ ಮತ್ತು ಬೌಲಿಂಗ್ ವೈಫಲ್ಯ ಅನುಭವಿಸಿಯೇ ವಿದಾಯ ಹೇಳಿರೋದು. ಇದಕ್ಕೆ ಅಪವಾದ ಇರುವುದು ಗಂಗೂಲಿಗೆ ಮಾತ್ರ.
ರೋಹಿತ್ ಶರ್ಮಾ : 3 ಟೆಸ್ಟ್, 31 ರನ್.
ರವಿಂಚಂದ್ರನ್ ಅಶ್ವಿನ್ : 1 ಟೆಸ್ಟ್, 1 ವಿಕೆಟ್
ಧೋನಿ : 3 ಟೆಸ್ಟ್, 102 ರನ್, ಸರಾಸರಿ 20
ವಿವಿಎಸ್ ಲಕ್ಷ್ಮಣ್ : 4 ಟೆಸ್ಟ್, 155 ರನ್, ಸರಾಸರಿ 19
ರಾಹುಲ್ ದ್ರಾವಿಡ್ : 4 ಟೆಸ್ಟ್, 194 ರನ್, ಸರಾಸರಿ 24
ಅನಿಲ್ ಕುಂಬ್ಳೆ : 2 ಟೆಸ್ಟ್, 3 ವಿಕೆಟ್