ಕಿರುತೆರೆ ನಟಿ ಕಾವ್ಯಗೌಡ ಕುಟುಂಬದ ಕಲಹ ಈಗ ಬೀದಿಗೆ ಬಂದಿದೆ. ಕಾವ್ಯ ಗೌಡ ಅವರು ರಾಧಾ ರಮಣ, ಗಾಂಧಾರಿಯಂತಹ ಧಾರವಾಹಿಗಳಲ್ಲಿ ಪ್ರಮುಖ ಪಾತ್ರ ಮಾಡಿ ಫೇಮಸ್ ಆಗಿರುವ ಕಲಾವಿದೆ. ಅವರು ಉದ್ಯಮಿ ಸೋಮಶೇಖರ್ ಅವರನ್ನು ಮದುವೆಯಾಗಿದ್ದರು. ಸೋಮಶೇಖರ್ ಗೆ ನಂದೀಶ್ ಎಂಬ ಓರ್ವ ಸೋದರ ಇದ್ದು, ಅವರ ಪತ್ನಿಯ ಹೆಸರು ಪ್ರೇಮಾ. ಇವರ ಮನೆ ಜಗಳ, ಓರಗಿತ್ತಿಯ ಕಿತ್ತಾಟ ಬೀದಿಗೆ ಬಂದಿದೆ. ಕಾರಣ ಏನೆಂದು ನೋಡಿದರೆ ಅಚ್ಚರಿಯಾಗುವುದು ಖಂಡಿತಾ.
ಕಾವ್ಯ ಗೌಡ ಅವರ ಪುಟ್ಟ ಮಗುವನ್ನು ನೋಡಿಕೊಳ್ಳಲು ಚಿಕ್ಕ ವಯಸ್ಸಿನ ಹುಡುಗಿಯನ್ನು ಕೇರ್ ಟೇಕರ್ ಆಗಿಟ್ಟುಕೊಂಡಿದ್ದಾರೆ. ಆಕೆಯನ್ನು ಕಳ್ಳಿ ಕಳ್ಳಿ ಎಂದು ಕರೆಯುತ್ತಿದ್ದರಂತೆ ಓರಗಿತ್ತಿ ಮನೆಯವರು. ಅವರ ಮಗಳನ್ನೂ ಕೆಲವು ಬಾರಿ ಹಾಗೆಯೇ ಕರೆಯುತ್ತಿದ್ದರಂತೆ. ಇತ್ತೀಚೆಗೆ ಮಗಳು ಅಡುಗೆ ಮನೆಯಿಂದ ದ್ರಾಕ್ಷಿ ಹಣ್ಣು ತೆಗೆದುಕೊಂಡು ಬಂದಾಗ ಪ್ರೇಮಾ ಅವರು ಕಳ್ಳಿ. ಕಳ್ಳಿ ಎಂದು ಕೂಗಿದ್ರಂತೆ. ಮಗಳನ್ನು ಕಳ್ಳಿ ಎಂದಿದ್ದಕ್ಕೆ ರೊಚ್ಚಿಗೆದ್ದ ಕಾವ್ಯ, ಜಗಳಕ್ಕೆ ನಿಂತಿದ್ದಾರೆ. ಜಗಳ ಎಲ್ಲೆಲ್ಲಿಗೋ ಹೋಗಿದೆ.. ಕುಟುಂಬಗಳು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿವೆ.
ಕಾವ್ಯಾ ಗೌಡ ಅವರ ಪ್ರಕಾರ : ಕಾವ್ಯಾ ಗೌಡ ಹಾಗೂ ಪತಿ ಸೋಮಶೇಖರ್ ಮೇಲೆ ಹಲ್ಲೆಯಾಗಿದೆ. ಚಾಕು ಹಾಕಿದ್ದಾರೆ. ಸೋಮಶೇಖರ್ ಐಸಿಯುನಲ್ಲಿದ್ದಾರೆ. ಪತಿಯ ಅತ್ತಿಗೆಯ ತಂದೆ ಅಂದರೆ ಓರಗಿತ್ತಿಯ ತಂದೆ ರವಿಕುಮಾರ್ ರೇಪ್ ಮಾಡ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಆಕೆಯ ಸಹೋದರನೂ ಹೊಡೆದಿದ್ದಾರೆ.
ಕಾವ್ಯ ಗೌಡರ ಓರಗಿತ್ತಿ ಪ್ರೇಮಾ ಪ್ರಕಾರ : ಕಾವ್ಯ ಗೌಡ ಮತ್ತವರ ಕಡೆಯವರೇ ಹಲ್ಲೆ ನಡೆಸಿ ಮಾಂಗಲ್ಯ ಸರ ಕಸಿದುಕೊಂಡಿದ್ದಾರೆ. ಇದು ನಮ್ಮ ಮನೆ. ನೀವು ಹೊರಗೆ ಹೋಗಿ ಎಂದು ಕಾವ್ಯ ಹೇಳ್ತಾರೆ. ಅದು ಆಕೆಯ ಮನೆ ಅಲ್ಲ, ನಮ್ಮ ಮನೆಯೂ ಅಲ್ಲ. ಮಾವ ಕಟ್ಟಿಸಿದ ಮನೆ. ಕಾವ್ಯ ಸಹೋದರಿ ಭವ್ಯ, ಪ್ರೇಮಾ ದಂಪತಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ.
ಕಾವ್ಯ ಅವರ ಮಾವ ಒಂದು ಕಾಲಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದವರು. ಕಾರ್ಪೊರೇಟರ್ ಕೂಡಾ ಆಗಿದ್ದವರು. ಬೆಂಗಳೂರಿನಲ್ಲಿ ಭೂಮಿಗೆ ಚಿನ್ನದ ಬೆಲೆ ಬರುವ ಕಾಲಕ್ಕೆ, ಪಿತ್ರಾರ್ಜಿತ ಆಸ್ತಿಗೆ ಕೋಟಿ ಕೋಟಿಗಳ ಬೆಲೆ ಬಂದಿತ್ತು. ಅವರು ಕೋಟ್ಯಧಿಪತಿ. ಅವರ ಮನೆಯ ಮೌಲ್ಯವೇ ಸುಮಾರು ಕೋಟಿಗಳಂತೆ. ಈಗ ಆ ಆಸ್ತಿಗಾಗಿಯೇ ಮನೆ ಮಕ್ಕಳು, ಸೊಸೆಯಂದಿರು ಜಗಳವಾಡಿ ಬೀದಿಗೆ ಬಂದಿದ್ದಾರೆ ಎನ್ನುವ ಸ್ಟೋರಿಯೂ ಇದೆ.



