ಬಜೆಟ್ ಅಧಿವೇಶನದಲ್ಲಿ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) (Motor Veheicle tax) ಮಸೂದೆ 2023ಕ್ಕೆ ಅನುಮೋದನೆ ನೀಡಿ, ಅದನ್ನು ಜಾರಿಗೊಳಿಸಲಾಗಿದೆ. ಈ ತಿಂಗಳಾಂತ್ಯಕ್ಕೆ ತೆರಿಗೆ ವಸೂಲಿಗೆ (Motor Veheicle tax) ಸಂಬಂಧಿಸಿದ ಪ್ರಕ್ರಿಯೆಗಳನ್ನೂ ಸಾರಿಗೆ ಇಲಾಖೆ ಆರಂಭಿಸಲಿದೆ. ರಾಜ್ಯ ಸರ್ಕಾರವು ಈ ಬಾರಿ ಹಲವು ವಿಧದಲ್ಲಿ ತೆರಿಗೆ ಹೆಚ್ಚಳ ಮಾಡಿದೆ. ಶಾಲಾ-ಕಾಲೇಜು ವಾಹನಗಳು, ಅತಿ ಭಾರದ ಸರಕು ಸಾಗಣೆ ವಾಹನಗಳು, ಮೋಟಾರು ಕ್ಯಾಬ್ಗಳ ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ. ಯಾವ್ಯಾವುದಕ್ಕೆ ಎಷ್ಟೆಷ್ಟು ತೆರಿಗೆ ಎನ್ನುವ ಮಾಹಿತಿ ಇಲ್ಲಿದೆ.
ಸ್ಕೂಲ್ ಬಸ್ ತೆರಿಗೆ :
ಶಾಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಸಂಚಾರಕ್ಕೆ ಬಳಸುವ ವಾಹನಗಳ (School Bus) ಪ್ರತಿ ಚದರ ಮೀಟರ್ಗೆ ತೆರಿಗೆಯನ್ನು 20 ರು.ನಿಂದ 100 ರು.ಗೆ ಹೆಚ್ಚಿಸಲಾಗಿದೆ.
ಇತರ ಸಂಸ್ಥೆಗಳ ಒಡೆತನದಲ್ಲಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸಂಚಾರಕ್ಕೆ ಬಳಸುವ ವಾಹನಗಳ (School Bus) ಪ್ರತಿ ಚದರ ಮೀಟರ್ ವಿಸ್ತೀರ್ಣದ ತೆರಿಗೆಯನ್ನು 80ರಿಂದ 200 ರು.ಗೆ ಹೆಚ್ಚಿಸಲಾಗಿದೆ.
ಟ್ರಕ್`ಗಳ ಮೇಲಿನ ತೆರಿಗೆ ಒಂದೇ ಸಾರಿ ಕಟ್ಟಬೇಕು :
ಇದನ್ನು ಪೂರ್ಣಾವಧಿ ಟ್ಯಾಕ್ಸ್ ಎನ್ನಲಾಗುತ್ತದೆ. ಲಘು ತೂಕದ ಹಾಗೂ ಭಾರೀ ತೂಕದ ಟ್ರಕ್, ಟಿಪ್ಪರ್, ಟೆಂಪೋ.. (Truck, lorry, tempo) ಮೊದಲಾದ ವಾಹನಗಳು ಕಟ್ಟುವ ಟ್ಯಾಕ್ಸ್. ಇವರು ಪ್ರತಿ 3 ತಿಂಗಳಿಗೊಮ್ಮೆ ಟ್ಯಾಕ್ಸ್ ಕಟ್ಟುತ್ತಾರೆ. ಈ ತೆರಿಗೆಯನ್ನು ಪೂರ್ಣಾವಧಿಗೆ ಕಟ್ಟಬೇಕು. ಒಂದೂವರೆ ಟನ್ ತೂಕದಿಂದ ಐದೂವರೆ ಟನ್ ತೂಕದವರೆಗಿನ ವಾಹನಗಳಿಗೆ ಇದ್ದ ಪೂರ್ಣಾವಧಿ ತೆರಿಗೆ ಪಡೆಯುವ ನೀತಿಯನ್ನು ಈಗ 12 ಟನ್`ವರೆಗಿನ ವಾಹನಗಳಿಗೂ ಹೆಚ್ಚಿಸಲಾಗಿದೆ. ಇದರ ನೇರ ಪರಿಣಾಮ ಎದುರಾಗುವುದು ಭಾರೀ ತೂಕ ಸರಕು, ಸಾಗಣೆ ವಾಹನಗಳಿಗೆ. ಟ್ರಕ್, ಲಾರಿಗಳಿಗೆ. 3 ತಿಂಗಳಿಗೊಮ್ಮೆ ಸುಮಾರು 50-60 ಸಾವಿರ ಟ್ಯಾಕ್ಸ್ ಕಟ್ಟುತ್ತಿದ್ದವರು ಈಗ ಏನಿಲ್ಲವೆಂದರೂ ಒಂದೇ ಸಾರಿ 15ರಿಂದ 17 ಲಕ್ಷ ಕಟ್ಟಬೇಕು. ಇದರ ಬಗ್ಗೆ ಲಾರೀ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದು, ಮುಷ್ಕರದ ಎಚ್ಚರಿಕೆ ಕೊಟ್ಟಿದ್ದಾರೆ. ಸರ್ಕಾರ ಒಂದು ಹೆಜ್ಜೆ ಹಿಂದಿಟ್ಟು, ಕಂತಿನಲ್ಲಿ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತರುವ ಮಾತುಗಳನ್ನಾಡುತ್ತಿದೆ.
ಟ್ಯಾಕ್ಸಿ, ಕ್ಯಾಬ್‍ಗಳ ಶುಲ್ಕ ಏರಿಕೆ :
ಇದು ಟ್ಯಾಕ್ಸಿ, ಕ್ಯಾಬ್`ಗಳ (Taxy cab) ಮೇಲಿನ ಟ್ಯಾಕ್ಸ್ ಲೆಕ್ಕಾಚಾರವೂ ಬದಲಾಗಿದೆ. 15 ಲಕ್ಷ ರು.ಗಿಂತ ಹೆಚ್ಚಿನ ಬೆಲೆಯ ಕ್ಯಾಬ್ಗಳಿಗೆ ಮಾತ್ರ ಆ ವಾಹನದ ಮೌಲ್ಯದ ಶೇ.15ರಷ್ಟುತೆರಿಗೆ ವಿಧಿಸಲಾಗುತ್ತಿತ್ತು. ಆದರೀಗ 10 ಲಕ್ಷ ರು.ನಿಂದ 15 ಲಕ್ಷ ರು.ವರೆಗಿನ ಕ್ಯಾಬ್ಗಳಿಗೆ ಅವುಗಳ ಮೌಲ್ಯದ ಶೇ.9ರಷ್ಟುತೆರಿಗೆ ಹಾಗೂ ಶೇ.1 ಸೆಸ್ ಸೇರಿ ಶೇ.10ರಷ್ಟುತೆರಿಗೆ ವಿಧಿಸಲಾಗುತ್ತಿದೆ. 15 ಲಕ್ಷ ರು.ಗಿಂತ ಹೆಚ್ಚಿನ ಬೆಲೆಯ ಕ್ಯಾಬ್ಗಳಿಗೆ ಈ ಹಿಂದಿನಂತೆಯೇ ಅವುಗಳ ಮೌಲ್ಯದ ಶೇ.15ರಷ್ಟುತೆರಿಗೆ ವಿಧಿಸಲಾಗುತ್ತದೆ.



