ಸತೀಶ್ ಜಾರಕಿಹೊಳಿ KPCC ಅಧ್ಯಕ್ಷ ಹುದ್ದೆ ರೇಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಹೈಕಮಾಂಡ್ ಎದುರು ಮೊದಲ ಅಧ್ಯಕ್ಷನಾಗುವುದಕ್ಕೆ ನಾನ್ ಸಿದ್ಧ ಎಂದು ಹೇಳಿಕೊಂಡಿದ್ದಾರೆ. ಆದರೆ, ಅಧ್ಯಕ್ಷ ಹುದ್ದೆ ಹೆಸರಲ್ಲಿ ಸತೀಶ್ ಜಾರಕಿಹೊಳಿ ಹಿಡಿದ ಜಾಡು ಮಾತ್ರ ಬೇರೆಯದ್ದೇ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಎದುರು ಬೇಡಿಕೆ ಇಟ್ಟಿರುವ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹೊಸಬರನ್ನು ತರುವಾಗ ತಮ್ಮನ್ನು ಪರಿಗಣಿಸಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಉತ್ತರ ಕೊಟ್ಟಿರುವ ಸುರ್ಜೇವಾಲ ʻʻಬಜೆಟ್ ಮುಗಿಯುವವರೆಗೆ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚಿಂತನೆ ಇಲ್ಲʼʼ ಎಂದಿದ್ದಾರೆ. ನೋ ಪ್ರಾಬ್ಲಂ.. ಸಮಸ್ಯೆ ಏನಿಲ್ಲ, ಆದರೆ ಹೊಸಬರ ನೇಮಕ ಮಾಡುವಾಗ ನನ್ನನ್ನು ಮರೆಯಬೇಡಿ, ಐ ಆಮ್ ಇಂಟ್ರೆಸ್ಟೆಡ್ ಎಂದಿದ್ದಾರೆ.
ವಿಷಯ ಇದೂ ಅಲ್ಲ, ಹೈಕಮಾಂಡ್ ಚಿಂತನೆ ಶುರುವಾದಾಗಲೇ ಪರಿಗಣಿಸಿ ಎಂದಿರುವ ಸತೀಶ್ ಜಾರಕಿಹೊಳಿ, ಅದರ ಜೊತೆಯಲ್ಲೇ ತಮಗೆ 50ಕ್ಕೂ ಹೆಚ್ಚು ಶಾಸಕರು ಕೆಪಿಸಿಸಿ ಅಧ್ಯಕ್ಷರಾಗಿ ಎಂದು ಒತ್ತಡ ತರುತ್ತಿದ್ದಾರೆ ಎಂದಿದ್ಧಾರೆ. ಆ ಮೂಲಕ ಸತೀಶ್ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟು, ತಮ್ಮೊಂದಿಗೆ 50+ ಶಾಸಕರಿದ್ಧಾರೆ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಪರೋಕ್ಷವಾಗಿ ತಮ್ಮ ಸಂಖ್ಯಾಬಲ ತಿಳಿಸಿ ಒತ್ತಡ ತಂದಿರುವ ಸತೀಶ್ ಜಾರಕಿಹೊಳಿ, ಸಿಎಂ ಬದಲಾವಣೆ ಚರ್ಚೆಗೆ ಸತೀಶ್ ಜಾರಕಿಹೊಳಿ ಲೆಕ್ಕಾಚಾರದ ತಂತ್ರಗಾರಿಕೆಯ ಹೊಡೆತ ಕೊಟ್ಟಿದ್ದಾರೆ.
ಅಧ್ಯಕ್ಷನಾಗುವುದಕ್ಕೆ ರೆಡಿ ಇದ್ದೇನೆ ಎನ್ನುವುದೇ ಬೇರೆ.. ನನಗೆ ೫೦+ ಶಾಸಕರು ಫೋರ್ಸ್ ಮಾಡ್ತಿದ್ದಾರೆ ಎನ್ನುವುದರ ಅರ್ಥವೇ ಬೇರೆ.ಅದು ಹೈಕಮಾಂಡಿಗೆ ಅರ್ಥವಾಗದ ವಿಚಾರ ಏನಲ್ಲ. ಈ ಸಭೆಗೂ ಮೊದಲು ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಪಾರ್ಟಿ ನಡೆದಿತ್ತು. ಅದಾದ ಮೇಲೆ ಪರಮೇಶ್ವರ್ ಮನೆಯಲ್ಲೂ ಮೀಟಿಂಗ್ ಮಾಡೋದಕ್ಕೆ ಹೊರಟಾಗ, ಡಿಕೆ ಬ್ರೇಕ್ ಹಾಕಿಸಿದ್ದರು. ಹೈಕಮಾಂಡ್ ಮೂಲಕವೇ ಅದಕ್ಕೆ ಬ್ರೇಕ್ ಬಿದ್ದಿತ್ತು. ಹಾಗೆ ಬ್ರೇಕ್ ಬಿದ್ದ ನಂತರ ಸತೀಶ್ ಜಾರಕಿಹೊಳಿ ಇನ್ ಡೈರೆಕ್ಟ್ ಆಗಿ ತಮ್ಮ ಸಂಖ್ಯಾಬಲ ಎಷ್ಟಿದೆ ಅನ್ನೋದನ್ನ ತಿಳಿಸಿದ್ದಾರೆ.
ಈ ಗೇಮ್ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು. ಸಿದ್ದರಾಮಯ್ಯ ಕೂಡಾ ಪಳಗಿದ ರಾಜಕಾರಣಿ. ಅಲ್ಲಿ ತ್ಯಾಗದ ಮಾತನ್ನಾಡಿದ ಸಿದ್ದರಾಮಯ್ಯ, ಇತ್ತ ತಮ್ಮ ಆಪ್ತರ ಮೂಲಕ ತಮಗೆ ಬೆಂಬಲ ಎಷ್ಟಿದೆ ಅನ್ನೋ ಸಂದೇಶವನ್ನೂ ಕೊಡ್ತಿದ್ಧಾರೆ. ರಾಜಕೀಯ ಅನ್ನೋದು ಚದುರಂಗ ಅನ್ನೋದಾದರೆ, ಅದನ್ನು ಆಡುತ್ತಿದ್ದೇನೆ ಎಂದು ಹೇಳಿ ಆಡುವುದು ಬೇರೆ. ಅದು ನೇರಾನೇರ ಚದುರಂಗ. ಆದರೆ ಚದುರಂಗದಲ್ಲಿ ರಾಜನಾದವನು ಆಡುವುದೇ ಇಲ್ಲ. ರಾಜನ ರಕ್ಷಣೆಗೆ ಆತನ ಸುತ್ತ ಮುತ್ತ ಇರುವ ಮಂತ್ರಿ, ಆನೆ, ಒಂಟೆ, ಕುದುರೆ, ಸೈನಿಕರೇ ರಕ್ಷಣೆ ಮಾಡ್ತಾರೆ. ಆಕ್ಚುಯಲಿ ಇದು ಚದುರಂಗ. ಸಿದ್ದರಾಮಯ್ಯ ಚದುರಂಗ.



