ಹಲಗಲಿ. ಸ್ವಾತಂತ್ರ್ಯ ಹೋರಾಟದಲ್ಲ ಹಲಗಲಿ ಬೇಡರ ಹೋರಾಟಕ್ಕೆ ಒಂದು ವಿಶಿಷ್ಟ ಇತಿಹಾಸವಿದೆ. ಈ ಐತಿಹಾಸಿಕ ಕಥೆಯನ್ನೇ ಹಲಗಲಿ ಅನ್ನೋ ಹೆಸರಲ್ಲಿ ಸಿನಿಮಾ ಮಾಡ್ತಿದ್ದಾರೆ ನಿರ್ಮಾಪಕ ಯುವ ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ. ಸುಕೇಶ್ ಡಿ ಕೆ ನಿರ್ದೇಶನದ ಚಿತ್ರಕ್ಕೆ ಡಾಲಿ ಧನಂಜಯ ಹೀರೋ. ಈಗ ಹೀರೋಯಿನ್ ಆಗಿ ಸಪ್ತಮಿ ಗೌಡ ಆಯ್ಕೆಯಾಗಿದ್ದಾರೆ.
ಎರಡು ಭಾಗಗಳಲ್ಲಿ, ಮೂಡಿ ಬರಲಿರುವ ಈ ಸಿನಿಮಾ ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ. ಕಥೆ ಕನ್ನಡದ ನೆಲದ ಕಥೆಯಾದರೂ, ಭಾರತಕ್ಕೆ ಅಪ್ಲೈ ಆಗುವ ಗುಣಗಳೂ ಇರುವ ಚಿತ್ರ ಐದು ಭಾಷೆಯಲ್ಲಿ ಅದ್ದೂರಿಯಾಗಿ ಸೆಟ್ಟೇರಿದೆ. ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆಗೆ ಪೂರ್ವತಯಾರಿ ನಡೆಯುತ್ತಿದೆ. ಚಿತ್ರಕ್ಕೀಗ ನಾಯಕಿಯಾಗಿ ಆಯ್ಕೆಯಾಗಿರುವ ಸಪ್ತಮಿ ಗೌಡ ಅವರಿಗೆ ಡಾಲಿ ಧನಂಜಯ ಜೊತೆ ಇದು 2ನೇ ಸಿನಿಮಾ.
ಸಪ್ತಮಿ ಗೌಡ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು ಸೂರಿ. ದುನಿಯಾ ಸೂರಿ ನಿರ್ದೇಶನದ ಚಿತ್ರ ಪಾಪ್ ಕಾರ್ನ್ ಮಂಕಿ ಟೈಗರ್ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಸಪ್ತಮಿ ಗೌಡ ಅವರಿಗೆ ಮೊದಲ ಚಿತ್ರದಲ್ಲಿ ಡಾಲಿ ಧನಂಜಯ ಅವರೇ ನಾಯಕ. ಕಾಂತಾರ ಚಿತ್ರದ ನಂತರ ಸಪ್ತಮಿ ಗೌಡ ಅವರೂ ದೇಶಾದ್ಯಂತ ಹೆಸರು ಮಾಡಿದ್ದಾರೆ. ಇನ್ನು ಡಾಲಿ ಧನಂಜಯ ಈಗ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರು. ಇಬ್ಬರ ಸ್ಟಾರ್ ವ್ಯಾಲ್ಯೂ ಬದಲಾಗಿರುವ ಈಗಿನ ಸನ್ನಿವೇಶದಲ್ಲಿ ಹಲಗಲಿ ಚಿತ್ರ ಸಿದ್ಧವಾಗುತ್ತಿದೆ.



