ಇತ್ತೀಚೆಗಷ್ಟೇ ತಮ್ಮ 20ನೇ ಹುಟ್ಟುಹಬ್ಬವನ್ನ ಸಾನ್ವಿ ಸ್ಪೆಷಲ್ ಆಗಿ ಆಚರಿಸಿಕೊಂಡಿರುವ ಸಾನ್ವಿ, ‘ಜಿಮ್ಮಿ’ ಚಿತ್ರಕ್ಕಾಗಿ ಹಾಡನ್ನು ಬರೆದು, ಗಾಯಕಿಯೂ ಆಗಿದ್ಧಾರೆ. ಈ ಹಿಂದೆ ‘ವಿಕ್ರಾಂತ್ ರೋಣ’ ಚಿತ್ರದ ‘ರಾ ರಾ ರಕ್ಕಮ್ಮ’ ಹಾಡಿನ ಟ್ರ್ಯಾಕ್ ಸಾಂಗ್ ಅನ್ನು ಸಾನ್ವಿ ಸುದೀಪ್ ಹಾಡಿದ್ದರು. ಸಾನ್ವಿ, ನಟನೆಗಿಂತ ಹೆಚ್ಚು ಸಂಗೀತ, ಹಾಡುಗಳಲ್ಲಿ ಇಂಟ್ರೆಸ್ಟ್ ತೋರಿಸುತ್ತಿದ್ದಾರೆ. ಅಂತಹ ಸಾನ್ವಿ ಹಾಕಿಸಿಕೊಂಡಿರೋ ಒಂದು ಟ್ಯಾಟೂ.. ಅಂದ್ರೆ ಹಚ್ಚೆ.. ಈಗ ಸಖತ್ ಸೌಂಡ್ ಮಾಡ್ತಿದೆ.
PIKU.
ಇದು ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಹಾಕಿಕೊಂಡಿರೋ ಟ್ಯಾಟೂ. ಸಾನ್ವಿ, ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿಯ ಏಕೈಕ ಪುತ್ರಿ. ಇತ್ತೀಚೆಗಷ್ಟೇ ಭರ್ಜರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಸಾನ್ವಿ, ಕುತ್ತಿಗೆ ಭಾಗದಲ್ಲಿ ಕಿವಿಗಳ ಹತ್ತಿರ PIKU ಎಂದು ಹಚ್ಚೆ ಹಾಕಿಸಿಕೊಂಡಿದ್ಧಾರೆ.
PIKU ಅಂದ್ರೆ ಏನು..?
ಸುದೀಪ್ ಫ್ಯಾನ್ಸ್ ಏನೇನೆಲ್ಲ ತಲೆ ಕೆಡಿಸಿಕೊಂಡ್ರೂ ಅಂದ್ರೆ.. ಅವರೇ ಒಂದು ಸಂಶೋಧನೆಯನ್ನೂ ಮಾಡಿಬಿಟ್ಟರು.
P ಅಂದ್ರೆ ಪ್ರಿಯಾ, I ಅಂದ್ರೆ ನಾನು, A ಅಂದ್ರೆ ಕಿಚ್ಚ ಸುದೀಪ್, U ಅಂದ್ರೆ ನೀನು. ಅರ್ಥಾತ್ ಪ್ರಿಯಾ ನಾನು ಕಿಚ್ಚ ನೀನು.. ಅನ್ನೋದು ಕೆಲವರ ಕಲ್ಪನೆಯಾದರೆ..
PIKU ಅನ್ನೋದು ಸಾನ್ವಿಯವರ ಪೆಟ್ ನೇಮ್ ಇರಬಹುದು ಎಂದು ಕೆಲವರು ಊಹೆ ಮಾಡಿದರು.
ಈ ಎಲ್ಲ ಊಹೆ, ಕಲ್ಪನೆಗಳನ್ನು ಕಂಡು ಕೊನೆಗೆ ಸಾನ್ವಿಯೇ ಉತ್ತರ ಕೊಟ್ಟರು. PIKU ಅಂದ್ರೆ… ಪ್ರಿಯಾ ಸುದೀಪ್. ಸಾನ್ವಿಯ ಅಮ್ಮ. ಅಮ್ಮನ ಮುದ್ದು ಹೆಸರನ್ನೇ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಅಂದ್ರು ಸಾನ್ವಿ. PIKU ಅನ್ನೋದನ್ನ ಸಾನ್ವಿಯವರ ತಾತ ಅಂದ್ರೆ.. ಪ್ರಿಯಾ ಅವರ ತಂದೆ ಕರೆಯುತ್ತಿದ್ದ ಮುದ್ದು ಹೆಸರಂತೆ. ಅದನ್ನೇ ಟ್ಯಾಟೂ ಹಾಕಿಸಿಕೊಂಡಿದ್ಧಾರೆ ಸಾನ್ವಿ ಸುದೀಪ್.
ಒಟ್ಟಿನಲ್ಲಿ ಅಮ್ಮ ಅಂದ್ರೆ ತಮಗೆಷ್ಟು ಅಭಿಮಾನ, ಪ್ರೀತಿ ಅನ್ನೋದನ್ನು ಜಗಜ್ಜಾಹೀರು ಮಾಡಿದ್ದಾರೆ ಸಾನ್ವಿ ಸುದೀಪ್.



