ಸಂಜು ಮತ್ತು ಗೀತಾ..
ಸೇರಬೇಕು ಅಂತಾ..
ಬರೆದಾಗಿದೆ..
ಆ ಬ್ರಹ್ಮನು..
ಹಾಡನ್ನು ಕನ್ನಡಿಗರು ಮರೆಯುವಂತೆಯೇ ಇಲ್ಲ. 2011ರಲ್ಲಿ ರಿಲೀಸ್ ಆಗಿದ್ದ ಸಿನಿಮಾ ರಮ್ಯಾ (Ramya =) ಕೆರಿಯರ್`ನಲ್ಲೇ ದಿ ಬೆಸ್ಟ್ ಸಿನಿಮಾ. ಒಂದೊಂದು ಹಾಡೂ ವಂಡರ್. ಚಿತ್ರದ ಎಲ್ಲ ಹಾಡುಗಳೂ ಹಿಟ್ ಆಗಿದ್ದವು. ಒಂದೊಂದು ದೃಶ್ಯವೂ ದೃಶ್ಯಕಾವ್ಯ. ಸಿನಿಮಾ ಟ್ರ್ಯಾಜಿಡಿ ಎಂಡಿಂಗ್ ಪ್ರೇಕ್ಷಕರ ಎದೆಭಾರ ಮಾಡಿತ್ತು. ಕಣ್ಣಿರು ಹಾಕುವಂತೆ ಮಾಡಿತ್ತು.
ಸಂಜು ವೆಡ್ಸ್ ಗೀತಾ (Sanju weds Geetha) ಚಿತ್ರದ ಸೀಕ್ವೆಲ್ ಬಗ್ಗೆ ಹಲವು ವರ್ಷಗಳಿಂದ ಸುದ್ದಿಯಿತ್ತು. ಅದೀಗ ಅಧಿಕೃತವಾಗಿದೆ. ಅದೂ ಸಿನಿಮಾ ರಿಲೀಸ್ ಆದ 12 ವರ್ಷಗಳ ನಂತರ ಸೀಕ್ವೆಲ್ ಪ್ಲಾನ್ ಅಧಿಕೃತವಾಗಿ ಹೊರಬಿದ್ದಿದೆ. ಅದರಲ್ಲಿಯೂ ಶ್ರೀನಗರ ಕಿಟ್ಟಿ (Srinagara Kitti) ಹಾಗೂ ನಟಿ ರಮ್ಯಾ (Beauty Queen Ramya) ಕಾಂಬಿನೇಷನ್ ಮೊದಲ ಬಾರಿಗೆ ತೆರೆಯ ಮೇಲೆ ಅದ್ಭುತವಾಗಿ ವರ್ಕೌಟ್ ಆಗಿತ್ತು. ನಾಗಶೇಖರ್ ನಿರ್ದೇಶನ, ಸತ್ಯ ಹೆಗಡೆ ಕ್ಯಾಮೆರಾ ವರ್ಕ್, ಜಸ್ಸಿ ಗಿಫ್ಟ್ ಮ್ಯೂಸಿಕ್ ಎಲ್ಲವೂ ಕೂಡ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು.
ಇದೀಗ ನಾಗಶೇಖರ್ ಶ್ರೀನಗರ ಕಿಟ್ಟಿ ಹುಟ್ಟುಹಬ್ಬದ ವಿಶೇಷವಾಗಿ ಸಂಜು ವೆಡ್ಸ್ ಗೀತಾ ಪಾರ್ಟ್ 2 ಸಿನಿಮಾ ಅನೌನ್ಸ್ ಮಾಡಿದ್ದಾರೆ. ನಾಗಶೇಖರ್ ಅವರೇ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಯಾವ ರೀತಿಯ ಲೂಕ್ನಲ್ಲಿ ಇರ್ತಾರೆ ಅನ್ನೋದನ್ನೂ ಫಸ್ಟ್ ಲುಕ್ ಪೋಸ್ಟರ್ ಮೂಲಕ ರಿವಿಲ್ ಮಾಡಿದ್ದಾರೆ. ಪೋಸ್ಟರ್ ನಲ್ಲಿ ನಾಗಶೇಖರ್ ಮೂವೀಸ್ ಪ್ರೆಸೆಂಟ್ ಜೊತೆಗೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ (Divya Spandana) ಪ್ರೆಸೆಂಟ್ ಅನ್ನೋ ಹೆಸರನ್ನು ಕೂಡ ಆಡ್ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ರಮ್ಯಾ ಕೂಡ ಇರ್ತಾರ ಅನ್ನೋ ಕುತೂಹಲ ಅಭಿಮಾನಿಗಳಿಗೆ ಹೆಚ್ಚಾಗಿದೆ.



