ಧರ್ಮಸ್ಥಳದಲ್ಲಿ ಸಾವಿರಾರು ಅತ್ಯಾಚಾರ ನಡೆದಿವೆ. ಕೊಲೆ ನಡೆದಿವೆ. ಜಸ್ಟಿಸ್ ಫಾರ್ ಸೌಜನ್ಯ ಎನ್ನುತ್ತಾ.. ಧರ್ಮಸ್ಥಳದ ವಿರುದ್ಧ ಜನ ದಂಗೆಯೇಳಬೇಕು, ರೊಚ್ಚಿಗೇಳಬೇಕು. ಶಿವತಾಂಡವ ಶುರುವಾಗಬೇಕು ಎಂದೆಲ್ಲ AI ವಿಡಿಯೋ ಮಾಡಿ ಸಂಚಲನ ಸೃಷ್ಟಿಸಿದ್ದ ಸಮೀರ್ ಎಂಡಿ, ಈಗ ವಿಕ್ಟಿಂ ಕಾರ್ಡ್ ಪ್ಲೇ ಮಾಡುತ್ತಿದ್ದು, ಎಲ್ಲಿಯೂ ಬಾಡಿಗೆ ಮನೆ ಸಿಗುತ್ತಿಲ್ಲ ಎಂದು ಹೊಸ ವಿಡಿಯೋ ಮಾಡಿದ್ದಾನೆ.
ಸಮೀರ್ ಎಂಡಿಗೆ ಮನೆ ಸಿಗುತ್ತಿಲ್ಲ :
ಈ ಹಿಂದೆ ಕಣ್ಣಿಗೆ ಕಟ್ಟಿದಂತೆ ಸುಜಾತಾ ಭಟ್, ಧರ್ಮಸ್ಥಳ ಹಾರರ್, ಚಿನ್ನಯ್ಯನ ಕತೆ ಕಟ್ಟಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ. ಈಗ ಮತ್ತೊಂದು ವಿಡಿಯೋ ಮಾಡಿದ್ದಾನೆ. ಸಮೀರ್ ಹೇಳಿದ್ದ ಕಥೆಗಳೆಲ್ಲ ಕಟ್ಟುಕಥೆ ಎನ್ನುವುದು ಸಾಬೀತಾಗುತ್ತಿದ್ದಂತೆ, ಈಗ ತನ್ನದೇ ಕಣ್ಣೀರ ಕಥೆ ಹೇಳಿಕೊಂಡಿದ್ದಾನೆ. ಹೊಸ ವಿಡಿಯೋ ಪ್ರಕಾರ ಸಮೀರ್‌ಗೆ ಯಾರೂ ಬಾಡಿಗೆಗೆ ಮನೆ ಕೊಡ್ತಾ ಇಲ್ವಂತೆ. ಇದ್ದ ಮನೆಯವರು ಸಮೀರ್ ಎಂಡಿಯನ್ನು ಆಚೆ ಹಾಕಿದ್ದಾರಂತೆ.
ನಂಬಿದವರು ಕೈಕೊಟ್ಟರು :
ಎಸ್‌ಐಟಿ ವಿಚಾರಣೆ ನಂತರ ನಾನು ಮನೆ ಕಳೆದುಕೊಂಡೆ. ಇರಲು ಮನೆಯೂ ಇಲ್ಲದೆ ಅನಾಥನಾದೆ. ನಾನು ನಂಬಿದವರು ನನ್ನ ಕೈಬಿಟ್ಟಿದ್ದು, ನಾನೀಗ ಒಬ್ಬಂಟಿಯಾಗಿದ್ದೇನೆ ಎಂದು ಎಂದಿನಂತೆ ಗೋಳಾಡಿದ್ದಾನೆ ಸಮೀರ್. ಅಂದಹಾಗೆ ಈ ವಿಡಿಯೋದಲ್ಲಿ ಸುಜಾತಾ ಭಟ್ ಸಂದರ್ಶನ, ಅವರ ಕಣ್ಣೀರು ನೋಡಿ ಅವರ ಬಗ್ಗೆ ವಿಡಿಯೋ ಮಾಡಿದ್ದೆ. ಆದರೆ, ಈಗ ಆ ಕಣ್ಣೀರೇ ಸುಳ್ಳು ಅಂದರೆ ನಾನು ಏನು ಮಾಡಲಿ.. ಎಂದಿರುವ ಸಮೀರ್, ಅಪ್ಪಿತಪ್ಪಿಯೂ ತಾನು ಹೇಳಿದ್ದು ತಪ್ಪು, ತಪ್ಪು ಮಾಹಿತಿ ನೀಡಿದ್ದೆ. ಕ್ಷಮಿಸಿ ಎಂಬ ಒಂದು ಮಾತನ್ನೂ ಹೇಳಿಲ್ಲ. ಆದರೆ ವಿಕ್ಟಿಂ ಕಾರ್ಡ್ ಮಾತ್ರ ಪ್ಲೇ ಮಾಡಿದ್ದಾನೆ.
ನನ್ನ ವಿರುದ್ಧ ಅಪಪ್ರಚಾರ :
ಕಳೆದ ಒಂದೂವರೆ ತಿಂಗಳಿಂದ ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ನನಗೆ ಯಾವುದೇ ಫಂಡ್ ಬಂದಿಲ್ಲ. ಹಣ ತೆಗೆದುಕೊಂಡಿದ್ದರೆ ತನಿಖೆಯಿಂದ ಹೊರ ಬರುತ್ತಿತ್ತು. ಪೊಲೀಸರಿಗೆ ನನ್ನ ಎಲ್ಲಾ ಬ್ಯಾಂಕ್ ದಾಖಲೆ ನೀಡಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆದರೆ, ನನ್ನ ವಿರುದ್ಧ ಸುಳ್ಳು ಆರೋಪ ಮಾಡುವವರನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ಮುಸ್ಲಿಂ ಎಂಬ ಕಾರಣಕ್ಕೆ ಅಪಪ್ರಚಾರ ನಡೆಯುತ್ತಿದೆ ಎನ್ನುತ್ತಿರುವ ಸಮೀರ್, ತಾನು ಸುಳ್ಳು ಕಥೆ ಹೇಳಿ ಧರ್ಮಸ್ಥಳದ್ದ ಅಪಪ್ರಚಾರ ಮಾಡಿದೆ ಎನ್ನುವುದನ್ನು ಹೇಳುತ್ತಿಲ್ಲ.
ಸಮೀರ್ ನ್ಯಾಯದ ಪರ ಹೋರಾಡಿದ್ದನಂತೆ..!
ಇಲ್ಲಿ ಗಟ್ಟಿಯಾಗಿ ನ್ಯಾಯದ ಪರ ನಿಂತರೆ ಎಲ್ಲರಿಗೂ ಇದೇ ಪರಿಸ್ಥಿತಿ ಬರುತ್ತದೆ. ನಾನು ಸತ್ಯ, ನ್ಯಾಯದ ಪರವಾಗಿ ಹೋರಾಟ ಮಾಡಿದ್ದೇನೆ. ಹೆಣ್ಣು ಮಕ್ಕಳಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಲಿ ಎಂದು ಶಕ್ತಿ ಮೀರಿ ಪ್ರಯತ್ನ ಪಟ್ಟಿದ್ದೇನೆ ಎಂದಿರುವ ಸಮೀರ್, ತಾನು ಭೂಮಿಯಲ್ಲಿ ಹುಟ್ಟಿಯೇ ಇಲ್ಲದ ಅನನ್ಯಾ ಭಟ್ ಕಥೆ ಕಟ್ಟಿದ್ದು, ಚಿನ್ನಯ್ಯ ಎಂಬ ಬುರುಡೆ ಸ್ವಾಮಿಯ ಕಥೆ ಹೇಳಿ ಯಾರಿಗೆ ನ್ಯಾಯ ಕೇಳಿದ್ದ ಅನ್ನೋದು ಪ್ರಶ್ನೆ. ಆದರೆ.. ಸಮೀರ್ ಈ ಯಾವ ಪ್ರಶ್ನೆಗಳಿಗೂ ಉತ್ತರ ಕೊಟ್ಟಿಲ್ಲ.
ಇನ್ನೊಂದು ಸ್ವಲ್ಪ ದಿನಗಳಲ್ಲಿ ಜಸ್ಟಿಸ್ ಫಾರ್ ಸಮೀರ್ ಎಂಬ ಅಭಿಯಾನ ಶುರುವಾದರೂ ಆಶ್ಚರ್ಯ ಇಲ್ಲ.



