ಡ್ರೈವರ್, ಕಂಡಕ್ಟರುಗಳಿಗೆ (Driver, Conductor) ಸಂಬಳ (Salary) ಕೊಡಬೇಕು. ಡೀಸೆಲ್(diesel), ನಿರ್ವಹಣೆ ವೆಚ್ಚಕ್ಕೆ ಹಣ ಬೇಕು. 3 ತಿಂಗಳಿಗೊಮ್ಮೆ 48 ಸಾವಿರ ಟ್ಯಾಕ್ಸ್ (Tax) ಕಟ್ಟಬೇಕು. ಇದಕ್ಕೂ ಹಣ ಹುಟ್ಟುತ್ತಿಲ್ಲ. ಖಾಸಗಿ ಬಸ್ಸಿಗೆ (Private Bus) ಜನ ಹತ್ತುತ್ತಿಲ್ಲ. ಹೀಗಾಗಿ ಬಸ್ (Private Bus) ಸ್ಥಗಿತಗೊಳಿಸಿದ್ದಾರೆ ಚಿಕ್ಕಮಗಳೂರಿನ (Chikkamagaluru) ಹಲವಾರು ಖಾಸಗಿ ಬಸ್ ಮಾಲೀಕರು. ಇದರಿಂದಾಗಿ 200ಕ್ಕೂ ಹೆಚ್ಚು ಕುಟುಂಬಗಳು ಕುಟುಂಬ ನಿರ್ವಹಣೆಗೆ ನಂಬಿಕೊಂಡಿದ್ದ ಉದ್ಯೋಗವೂ ಹೋದಂತಾಗಿದೆ. ಚಿಕ್ಕಮಗಳೂರಿನದ್ದೇ ಲೆಕ್ಕ ತೆಗೆದುಕೊಂಡರೆ ಕೇವಲ ಚಿಕ್ಕಮಗಳೂರಿನಲ್ಲಿ ಸ್ಥಗಿತಗೊಂಡಿರುವ ಖಾಸಗಿ ಬಸ್`ಗಳ ಸಂಖ್ಯೆ 20ಕ್ಕೂ ಹೆಚ್ಚು. ಮಂಗಳೂರು, ಉಡುಪಿಯಲ್ಲಿಯೂ (Udupi, Mangalore, Shivamogga) ಇದರ ಎಫೆಕ್ಟ್ ಆಗಿದ್ದು, ಅಲ್ಲಿಯೂ ಸುಮಾರು 50+ ಬಸ್`ಗಳು ಸಂಚಾರ ಸ್ಥಗಿತಗೊಳಿಸಿವೆ.
ಶಕ್ತಿ ಯೋಜನೆಯಿಂದ (Shakthi Scheme) ರಾಜ್ಯಾದ್ಯಂತ ಓಡಾಡಲು ಶಕ್ತಿ ಬಂದಿರೋ (Shakthi Scheme) ರಾಜ್ಯದ ಮಹಿಳೆಯರು ಸರ್ಕಾರಿ ಬಸ್ಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ಪ್ರೈವೇಟ್ ಬಸ್ ಮೆಟ್ಲು ಹತ್ತೋಕು ಜನರಿಲ್ಲ. ಖಾಸಗಿ ಬಸ್ ನಿಲ್ದಾಣದಲ್ಲಿ ಸರದಿ ಸಾಲಲ್ಲಿ ಬಸ್ಗಳು ನಿಂತಿವೆ. ಚಾಲಕರು-ನಿರ್ವಾಹಕರು ಬಸ್ ಓಡ್ಸಲ್ಲ ಅಂತಲ್ಲ. ಬಸ್ ಓಡ್ಸುದ್ರು ಹತ್ತೋಕೆ ಜನ ಇಲ್ಲ. ಚಿಕ್ಕಮಗಳೂರಿನಲ್ಲೇ 400 ಖಾಸಗಿ ಬಸ್ಗಳಲ್ಲಿ 20 ಬಸ್ಗಳ ಸಂಚಾರ ಇದೀಗ ಸ್ಥಗಿತವಾಗಿದೆ. ಶಕ್ತಿ ಯೋಜನೆಯಿಂದ (Shakthi Scheme) ಮಲೆನಾಡಿನ ಜನರು ಸರ್ಕಾರಿ ಬಸ್ಗಳ ಮೊರೆ ಹೋಗಿದ್ದಾರೆ. ಮಲೆನಾಡು, ಕರಾವಳಿಯಲ್ಲಿ ಖಾಸಗಿ ಬಸ್`ಗಳೇ ಹೆಚ್ಚು. ಹಲವು ದಶಕಗಳಿಂದ ಮಲೆನಾಡ ಪ್ರಯಾಣಿಕರನ್ನೇ ನಂಬಿ ಬದುಕ್ತಿದ್ದ ಖಾಸಗಿ ಬಸ್ ಮಾಲೀಕರು ಹಾಗೂ ಸಿಬ್ಬಂದಿಗಳು ಬಹುತೇಕ ಬೀದಿಗೆ ಬಿದ್ದಂತಾಗಿದೆ.
3 ತಿಂಗಳಿಗೆ 48 ಸಾವಿರ ಟ್ಯಾಕ್ಸ್ : ಪ್ರೈವೇಟ್ ಬಸ್ನವರು ಮೂರು ತಿಂಗಳಿಗೊಮ್ಮೆ 48 ಸಾವಿರ ಟ್ಯಾಕ್ಸ್ ಕಟ್ಟಬೇಕು. ಜನರೂ ಇಲ್ಲ. ಪೆಟ್ರೋಲ್/ಡೀಸೆಲ್ ಖರ್ಚು ಕೂಡಾ ಹುಟ್ಟುತ್ತಿಲ್ಲ. ಇನ್ನು ಸಂಬಳ ಕೊಡೋದು ಹೇಗೆ? ಟ್ಯಾಕ್ಸ್ ಕಟ್ಟುವುದು ಹೇಗೆ? 3 ತಿಂಗಳಿಗೆ ಒಮ್ಮೆ ಟ್ಯಾಕ್ಸ್ ಕಟ್ಟುವುದಕ್ಖೂ ಹಣ ಇಲ್ಲ ಎನ್ನುತ್ತಿರುವ ಖಾಸಗಿ ಬಸ್ ಮಾಲೀಕರು, ಬಸ್`ಗಳಿಗೆ ಇದ್ದ ಲೈಸೆನ್ಸ್‍ನ್ನು ಸಾರಿಗೆ ನಿಗಮಕ್ಕೆ ಹಸ್ತಾಂತರಿಸಿದ್ದಾರಂತೆ.
ದೊಡ್ಡ ದೊಡ್ಡ, ನೂರಾರು ಬಸ್`ಗಳಿರುವ ಖಾಸಗಿ ಬಸ್ ಮಾಲೀಕರಿಗೆ ಇದು ದೊಡ್ಡ ನಷ್ಟವೇನಲ್ಲ. ಅಲ್ಲದೆ ದೂರದ ಊರುಗಳಿಗೆ/ಲಾಂಗ್ ಟ್ರಿಪ್ ಓಡಿಸುವವರಿಗೆ ಶಕ್ತಿ ಯೋಜನೆ ಅಷ್ಟೇನೂ ಪರಿಣಾಮ ಬೀರಿಲ್ಲ. ಆದರೆ, ಅಲ್ಲಲ್ಲೇ ಓಡಾಡುತ್ತಿದ್ದ, ಹಳ್ಳಿ ಹಳ್ಳಿಗಳನ್ನು ಸಂಪರ್ಕಿಸುತ್ತಿದ್ದ ಖಾಸಗಿ ಬಸ್ಸಿನವರಿಗೆ, ಒಂದೋ ಎರಡೋ ಬಸ್ ಇಟ್ಟುಕೊಂಡಿರುವವರಿಗೆ ಶಕ್ತಿ ಯೋಜನೆ ನೆಗೆಟಿವ್ ಇಂಪ್ಯಾಕ್ಟ್ ಮಾಡಿದೆ.
ಸರ್ಕಾರದ ಶಕ್ತಿ ಯೋಜನೆಯಿಂದ ಅದೆಷ್ಟೋ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗ್ತಿದೆ. ಆದ್ರೆ, ಅದನ್ನೇ ನಂಬಿ ಬದುಕ್ತಿದ್ದ ಖಾಸಗಿ ಬಸ್ ಮಾಲೀಕರು, ಕಾರ್ಮಿಕರು ಬೀದಿಗೆ ಬೀಳುತ್ತಿರುವುದು ದುರಂತ. ಒಂದು ವೇಳೆ, ಸರ್ಕಾರ ಖಾಸಗಿ ಬಸ್ಸಿನ ಉಳಿವಿಗೆ ದಾರಿ ತೋರಿಸದಿದ್ದರೆ ಎಲ್ಲಾ ಬಸ್ಗಳು ನಿಲ್ಲೋದು ಗ್ಯಾರಂಟಿ.
ಇತ್ತೀಚೆಗೆ ಸರ್ಕಾರದ ಶಕ್ತಿ ಯೋಜನೆ ವಿರೋಧಿಸಿ, ಮುಷ್ಕರಕ್ಕೆ ಕರೆ ನೀಡಿದ್ದ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಜೊತೆ ಸರ್ಕಾರ ಮಾತುಕತೆ ನಡೆಸಿತ್ತು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಹೇಗೋ ಪರಿಸ್ಥಿತಿಯನ್ನು ನಿಭಾಯಿಸಿ, ಗಡುವು ಪಡೆದುಕೊಂಡಿದ್ದರು. ಈಗ ಗಡುವು ಮುಗಿಯುತ್ತಿದೆ. ಪರಿಸ್ಥಿತಿ ಇನ್ನೂ ಹದಗೆಡುತ್ತಿದೆ. ಮುಂದಿನ ತಿಂಗಳಿಂದ ಇನ್ನಷ್ಟು ಬಸ್ಸುಗಳ ಸಂಖ್ಯೆ ಇಳಿಯುವ ಆತಂಕ ಇದೆ. ಏಕೆಂದರೆ ಸೆಪ್ಟೆಂಬರ್ ತಿಂಗಳಲ್ಲಿ 3 ತಿಂಗಳ ಟ್ಯಾಕ್ಸ್ ಕಟ್ಟಬೇಕು. ಟ್ಯಾಕ್ಸ್ ಕಟ್ಟುವ ಬದಲು ಲೈಸೆನ್ಸ್ ವಾಪಸ್ ನೀಡಿ ಬಚಾವ್ ಆಗುವ ಉಪಾಯ ಹೂಡಿದ್ದಾರೆ ಖಾಸಗಿ ಬಸ್ ಮಾಲೀಕರು.



