ಉಚಿತಗಳನ್ನು ಕೊಡುವ ಪದ್ಧತಿ ಸಿನಿಮಾಗಳಲ್ಲಿ ಆ ಕಾಲದಲ್ಲೂ ಇದೆ. ಇದೂ ಕೂಡಾ ಪ್ರಚಾರದ ಒಂದು ತಂತ್ರ. ಹಾಗಂತ ಇದು ಗ್ಯಾರಂಟಿ ಸ್ಕೀಮ್ ಅಲ್ಲ. ಸಲಾರ್ ಸಿನಿಮಾ ಇದೇ ಡಿಸೆಂಬರ್ ೨೨ಕ್ಕೆ ರಿಲೀಸ್ ಆಗುತ್ತಿದೆ. ಪ್ರಭಾಸ್, ಶೃತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಅಭಿನಯದ ಸಿನಿಮಾಗೆ ಪ್ರಶಾಂತ್ ನೀಲ್ ಡೈರೆಕ್ಟರ್. ಹೊಂಬಾಳೆ ಬ್ಯಾನರಿನ ಈ ಸಿನಿಮಾ ಕನ್ನಡದಲ್ಲಿಯೂ ನಿರ್ಮಾಣವಾಗಿದೆ. ಇದೀಗ ಈ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರಿಗೆ ಒಂದೊಳ್ಳೆ ಆಫರ್ ನೀಡಿದೆ ಹೊಂಬಾಳೆ.
ಪ್ರಭಾಸ್ ಮೊಬೈಲ್‌ನಲ್ಲಿ ಪ್ರಶಾಂತ್ ನೀಲ್‌ಗೆ ಏನನ್ನೋ ತೋರಿಸುತ್ತಿರುವ ಫೋಟೊ ಶೇರ್ ಮಾಡಿ ಹೊಂಬಾಳೆ ಸಂಸ್ಥೆ ಅಭಿಮಾನಿಗಳಿಗೆ ಒಂದು ಚಾಲೆಂಜ್ ಕೊಟ್ಟಿದೆ. ಫೋಟೊಗೆ ಒಳ್ಳೆ ಕ್ಯಾಪ್ಷನ್ ಕೊಡಿ. ಉತ್ತಮವಾದ ಕ್ಯಾಪ್ಷನ್‌ಗಳನ್ನು ನೀಡುವ 5 ಜನಕ್ಕೆ ‘ಸಲಾರ್’ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಉಚಿತ ಎಂದು ಹೇಳಿದೆ.
200 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ‘ಸಲಾರ್’ ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ಜಗಪತಿ ಬಾಬು, ಈಶ್ವರಿ ರಾವ್, ರಾಮಚಂದ್ರ ರಾಜು, ಜಾನ್ಸಿ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಭುವನ್ ಗೌಡ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಸಂಗೀತ ನೀಡಿದ್ದಾರೆ.



