ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಯೋಜನೆಯಾದ ಮೇಕ್ ಇನ್ ಇಂಡಿಯಾವನ್ನು ಹಲವು ದೇಶಗಳು ಹೊಗಳಿವೆ. ಇಡೀ ಜಗತ್ತು ಆರ್ಥಿಕ ಕುಸಿತ, ಹಿಂಜರಿತ ಎದುರಿಸುತ್ತಿರುವಾಗ ಭಾರತದ ಆರ್ಥಿಕತೆಗೆ ವೇಗ ಬಂದಿರುವುದೇ ಮೇಕ್ ಇನ್ ಇಂಡಿಯಾದಿಂದ. ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದ ಮೇಕ್ ಇನ್ ಇಂಡಿಯಾವನ್ನು ಹೊಗಳಿದ್ದಾರೆ.
ಮಾಸ್ಕೋದಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟಿನ್
ಭಾರತದಲ್ಲಿನ ನನ್ನ ಸ್ನೇಹಿತ, ಪ್ರಧಾನಿ ನರೇಂದ್ರ ಮೋದಿ, ರಷ್ಯಾಕ್ಕೂ ಅತ್ಯಂತ ಆತ್ಮೀಯ ಸ್ನೇಹಿತ. ಕೆಲ ವರ್ಷಗಳ ಹಿಂದೆ ಅವರೊಂದು ಮೇಕ್ ಇನ್ ಇಂಡಿಯಾ ಎಂಬ ಪರಿಕಲ್ಪನೆಯನ್ನು ಮುಂದಿಟ್ಟಿದ್ದರು. ವಿದೇಶಿ ವಸ್ತುಗಳ ಮೇಲಿನ ಅವಲಂಬನೆ, ವಸ್ತುಗಳ ಆಮದಿನ ಬದಲಾಗಿ ದೇಶೀಯವಾಗಿಯೇ ತನ್ನದೇ ಆದ ಅತ್ಯಾಧುನಿಕ ವಸ್ತುಗಳ ಉತ್ಪಾದನೆ, ಸೇವೆ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆ ಅದಾಗಿತ್ತು. ಆ ಯೋಜನೆಯ ಫಲ ಇದೀಗ ಭಾರತದ ಆರ್ಥಿಕತೆ ಮೂಲಕ ಕಾಣಸಿಗುತ್ತಿದೆ.
ಭಾರತದಂತೆ ನಾವು ಕೂಡಾ ದೇಶೀಯವಾಗಿ ಆಧುನಿಕ ವಸ್ತುಗಳ ಉತ್ಪಾದನೆ, ಸೇವೆ ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸುವ ಆರ್ಥಿಕತೆಯನ್ನು ಸೃಷ್ಟಿಸಬೇಕು ಎಂದು ಪುಟಿನ್ ಕರೆ ಕೊಟ್ಟಿದ್ದಾರೆ.
ಆ ಮೂಲಕ ರಷ್ಯಾದಲ್ಲಿಯೂ ಭಾರತದ ಮಾದರಿಯಲ್ಲಿ ಸ್ವಾವಲಂಬಿ ಯೋಜನೆಗಳು ತಲೆ ಎತ್ತಲಿವೆ. ಮೇಕ್ ಇನ್ ಇಂಡಿಯಾ ಮಾದರಿಯಲ್ಲಿ ಮೇಕ್ ಇನ್ ರಷ್ಯಾ ಶುರುವಾಗಲಿದೆ.



