ಮನೆಯಲ್ಲಿ ಚಿನ್ನ ಇದ್ದರೆ ಕಷ್ಟ ಬಂದಾಗ ಅಡ ಆದ್ರೂ ಸಾಲ ತಗೋಬಹುದು.. ಮಾರಬಹುದು ಅಂತಾ ಅಂದ್ಕೋತೀವಿ. ಚಿನ್ನ ಅಂದ್ರೆ ಆಪತ್ಕಾಲದ ಬ್ಯಾಂಕು ಅಂತಾ ನಂಬಿಕೊಂಡಿದ್ದೀವಿ. ಇದು ನಮ್ಮ ನಂಬಿಕೆನೂ ಹೌದು. ಮತ್ತೂಟ್ ಫೈನಾನ್ಸ್, ಟಾಟಾ ಕ್ಯಾಪಿಟಲ್ಸ್, ಬಜಾಜ್ ಫೈನಾನ್ಸು, ಮಣಪ್ಪುರಂ ಗೋಲ್ಡ್ ಲೋನ್ಸ್… ಒಂದಾ ಎರಡಾ..
ಮನೆಯಲಿ ಇದ್ದರೆ ಚಿನ್ನ.. ಚಿಂತೆಯೂ ಏತಕೆ ಇನ್ನ.. ಅಂತಾ ಸ್ಟಾರ್ ನಟರೆಲ್ಲ ಬಂದು ಚಿನ್ನ ಇದ್ರೆ ಮಾರ್ಬಿಡಿ, ದುಡ್ಡು ಸಿಗುತ್ತೆ ಅಂತಾರೆ. ಒಬ್ಬ ಸ್ಟಾರ್ ಚಿನ್ನ ತಗೋಳಿ ಅಂದ್ರೆ, ಇನ್ನೊಬ್ಬ ಹೀರೋ ಬಂದು ಚಿನ್ನ ಮಾರ್ಬಿಡಿ ಅಂತಾರೆ. ಫೈನಾನ್ಸ್ ಕಂಪೆನಿಗಳ ಪ್ರಚಾರ ಹೀಗಿದ್ರೆ, ಇನ್ಮೇಲೆ ಹಾಗಾಗೋದು ಡೌಟು.
ಯಾಕಂದ್ರೆ ಚಿನ್ನವನ್ನ ಅಡಮಾನ ಇಟ್ಟುಕೊಳ್ಳೋಕೆ ಇರೋ ರೂಲ್ಸ್ ಬದಲಾಗ್ತಾ ಇದೆ. ಆರ್ಬಿಐ ಹೊಸ ರೂಲ್ಸ್ ರೆಡಿ ಮಾಡಿದೆ. ಚಿನ್ನದ ಒಡವೆ ಇಟ್ಟರೆ ಶೇ. 90 ದುಡ್ಡು ಸಿಕ್ಕೋ ಚಾನ್ಸ್ ಕಡಿಮೆ. ಶೇ. 75ರಷ್ಟು ಸಾಲ ಸಿಕ್ಕೋದು ಕಷ್ಟ ಆಗುತ್ತೆ. ಅದಕ್ಕೆ ಮುಂಚೆ ನಿಮಗೆ LTV ವಿಷ್ಯ ಅರ್ಥ ಆಗಬೇಕು.
ಅಂದ್ರೆ ಚಿನ್ನದ ಒಡವೆನೋ.. ಚಿನ್ನದ ಬಿಸ್ಕೆಟ್, ನಾಣ್ಯಗಳನ್ನೋ ಒತ್ತೆ ಇಡ್ತೀವಲ್ಲ, ಆಗ ಈ LTV ಅನ್ನೋ ಪದ ಬಳಸ್ತಾರೆ. LTV ಅಂದ್ರೆ, ಲೋನ್ ಟು ವ್ಯಾಲ್ಯೂ ಅಂತಾ ಅರ್ಥ. ಅಂದ್ರೆ, ಚಿನ್ನದ ಮೌಲ್ಯ ಎಷ್ಟಿದೆಯೋ.. ಅಷ್ಟು ಅಂತಾ ಅರ್ಥ. ಸದ್ಯಕ್ಕೆ ಚಿನ್ನವನ್ನ ಅಡ ಇಟ್ರೆ, ಚಿನ್ನದ ಮೌಲ್ಯದ ಶೇ.90ರಷ್ಟು ಹಣವನ್ನ ಬ್ಯಾಂಕು ಅಥವಾ ಫೈನಾನ್ಸ್ ಕಂಪೆನಿಗಳು ಕೊಡ್ತಾ ಇದ್ವು. ಕೋವಿಡ್ ಸಂದರ್ಭದಲ್ಲಿ ಈ LTV ಯನ್ನ ಶೇ.75ರಿಂದ ಶೇ.90ಕ್ಕೆ ಹೆಚ್ಚು ಮಾಡಿದ್ರು. ಈಗ ಮತ್ತೆ ಶೇ.75ಕ್ಕೆ ಇಳಿಸುವ ಪ್ರಸ್ತಾಪ ಆರ್ಬಿಐ ಮುಂದೆ ಬಂದಿದೆ.
ಹೊಸ ರೂಲ್ಸ್ ಬಂದರೆ ಏನಾಗುತ್ತೆ.. ಮೊದಲು ಕೂಡಾ ಶೇ.75ರಷ್ಟೇ ಸಾಲ ಕೊಡ್ತಿದ್ರು. ಅದೇ ಮತ್ತೆ ರಿಪೀಟ್ ಆಗುತ್ತೆ.. ಅಷ್ಟೇ ಅಲ್ವಾ ಅನ್ನೋ ಹಾಗಿಲ್ಲ. ಹೊಸ ರೂಲ್ಸ್ ಬಂದ್ರೆ..
ಸಾಲ ಮತ್ತು ಬಡ್ಡಿ ಶೇ.75 ಮಿತಿ ದಾಟೋ ಹಂಗಿಲ್ಲ. ಶೇ.75ರ ಮಿತಿ ದಾಟಿದರೆ ಬಡ್ಡಿಯನ್ನಾದರೂ ಕಟ್ಟಬೇಕು. ಒಂದು ವರ್ಷದ ಒಳಗೆ ತೀರಿಸಬೇಕು. ಅಥವಾ ರೀನ್ಯೂವಲ್ ಮಾಡಿಸಬೇಕು. ಹೊಸ ರೂಲ್ಸ್ ಪ್ರಕಾರ ಚಿನ್ನವನ್ನ ಅಡ ಇಟ್ಟವರು ಸಾಲದ ಬಡ್ಡಿ ಲಿಮಿಟ್ ದಾಟಿದ್ರೆ ಕಷ್ಟ ಆಗುತ್ತೆ. ಒಂದು ವರ್ಷದ ಒಳಗೆ ಸಾಲ ಕಟ್ಟಬೇಕು ಅಥವಾ ಪೂರ್ತಿ ಬಡ್ಡಿಯನ್ನು ಕಟ್ಟಿ ರಿನ್ಯೂಯಲ್ ಮಾಡಿಸಿಕೊಳ್ಳಲೇಬೇಕು. ಸಾಲ ಮತ್ತು ಬಡ್ಡಿಯ ಮೊತ್ತ ಶೇ.75 ದಾಟುವುದಕ್ಕೆ ಅವಕಾಶ ಕೊಡಬಾರದು. ಸಾಲ ಕೊಡುವಾಗ ಸಾಲಗಾರನ ಪರಿಸ್ಥಿತಿ ತಿಳಿದು ಸಾಲ ಕೊಡಬೇಕು.
ಆದರೆ ಇದು ಬ್ಯಾಂಕುಗಳು ಕೊಡುವ ಸಾಲಕ್ಕೆ ಅಪ್ಲೈ ಆಗಲ್ಲ. ಇದು ಅನ್ವಯವಾಗುವುದು ಫೈನಾನ್ಸ್ ಕಂಪೆನಿಗಳಿಗೆ ಮಾತ್ರ. ಒಬ್ಬ ವ್ಯಕ್ತಿ ಗರಿಷ್ಠ ಒಂದು ಕೆಜಿ ಚಿನ್ನವನ್ನಷ್ಟೇ ಅಡಮಾನ ಇಡಬಹುದು. ಒಂದ್ ಕೆಜೀನಾ.. ಅಷ್ಟ್ ಚಿನ್ನ ಖರೀದಿ ಮಾಡೋ ತಾಕತ್ತಿದ್ರೆ ನಾವ್ಯಾಕ್ ಗೋಲ್ಡ್ ಲೋನ್ ತಗೋತೀವಿ ಅಂತೀರಾ.. ಇದು ರೂಲ್ಸ್ ವಿಷ್ಯ.
ಇನ್ನು ಸಹಕಾರಿ ಬ್ಯಾಂಕುಗಳು ಅಂದ್ರೆ ಕೋ ಆಪರೇಟಿವ್ ಬ್ಯಾಂಕ್ಸ್, ಗ್ರಾಮೀಣ ಬ್ಯಾಂಕುಗಳು ಕೊಡೋ ರೀಪೇಮೆಂಟ್ ಲೋನ್ ಲಿಮಿಟ್ 5 ಲಕ್ಷ ದಾಟುವಂತಿಲ್ಲ. ಹೀಗೆ ಹಲವು ಪ್ರಸ್ತಾಪಗಳು ಆರ್ಬಿಐ ಹೊಸ ನೀತಿಯಲ್ಲಿವೆ. ಇವಿನ್ನೂ ಜಾರಿಗೆ ಬಂದಿಲ್ಲ. ಆರ್ಬಿಐ ವೆಬ್ಸೈಟಿಗೆ ಹೋದರೆ, ಅಲ್ಲಿ ಸಲಹೆಗಳನ್ನೂ ಕೊಡುವುದಕ್ಕೆ ಅವಕಾಶ ಇದೆ. ಆದರೆ, ಬಹುತೇಕ ಫೈನಾನ್ಸ್ ಕಂಪೆನಿಗಳು ಈ ಹೊಸ ನೀತಿಗೆ ಒಪ್ಪಿಗೆ ಸೂಚಿಸುವ ಸಾಧ್ಯತೆಗಳಿವೆ.