ರಾಕ್`ಲೈನ್ ವೆಂಕಟೇಶ್ (Rockline Venkatesh) ನಿರ್ಮಾಪಕರಾಗಿದ್ದು ಬೆಳ್ಳಿ ಮೋಡಗಳು (Belli Modagalu) ಚಿತ್ರದಿಂದ. ರಮೇಶ್ (Ramesh Aravind), ಮಾಲಾಶ್ರೀ (actress Malashree) ಹಾಗೂ ದೊಡ್ಡಣ್ಣ (Actor Doddanna) ಅಭಿನಯಿಸಿದ್ದ ಆ ಚಿತ್ರ ಆಗಿನ ಕಾಲಕ್ಕೆ ಸೂಪರ್ ಹಿಟ್. 1992ರಲ್ಲಿ ರಿಲೀಸ್ ಆದ ರಾಕ್`ಲೈನ್ ವೆಂಕಟೇಶ್ ಅವರ ಬ್ಯಾನರ್`ನ ಮೊದಲ ಸಿನಿಮಾ ಬೆಳ್ಳಿ ಮೋಡಗಳು. ವಿಶೇಷವೆಂದರೆ ಅದೇ ಮೊದಲು, ಆನಂತರ ಅದೆಷ್ಟೇ ಸ್ನೇಹ, ಪ್ರೀತಿ ಇದ್ದರೂ ಮಾಲಾಶ್ರೀ ರಾಕ್`ಲೈನ್ ವೆಂಕಟೇಶ್ ಚಿತ್ರದಲ್ಲಿ ನಟಿಸೋಕೆ ಆಗಿರಲಿಲ್ಲ.
ಅದನ್ನು ರಾಕ್`ಲೈನ್ ವೆಂಕಟೇಶ್ ನೆನಪಿಸಿಕೊಂಡರು. ಜೊತೆಗೆ ಮಾಲಾಶ್ರೀ ಮಗಳು (Actress Aradhana) ತಮ್ಮ (Katera) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದನ್ನೂ ಹೆಮ್ಮೆಯಿಂದ ಹೇಳಿಕೊಂಡರು. ಹೀಗಾಗಿಯೇ ಕಾಟೇರ ಸುದ್ದಿಗೋಷ್ಟಿಯಲ್ಲಿ ನಿರ್ಮಾಪಕ ರಾಕ್`ಲೈನ್ ವೆಂಕಟೇಶ್ ಅವರು ಮಾಲಾಶ್ರೀಗೆ, ಮಾಲಾಶ್ರೀ, ಮಗಳು ಆರಾಧನಾ ರಾಕ್`ಲೈನ್ ವೆಂಕಟೇಶ್ ಅವರಿಗೆ ಥ್ಯಾಂಕ್ಯೂ ಥ್ಯಾಂಕ್ಯೂ ಎನ್ನುವುದೇ ದೊಡ್ಡ ಸುದ್ದಿಯಾಯ್ತು.
ರಾಕ್`ಲೈನ್ ವೆಂಕಟೇಶ್ “ಮಾಲಾಶ್ರೀ (Malashree) ಅವರ ಮಗಳು ಆರಾಧನಾ ರಾಮ್ ಅವರ ಮೊದಲನೇ ಚಿತ್ರ ಕಾಟೇರ (katera) . ನಮ್ಮ ಚಿತ್ರಕ್ಕಾಗಿ ಅವರು ನಮಗೆ ಡೇಟ್ಸ್ ಕೊಟ್ಟಿದ್ದಾರೆ. ಅವರಿಗೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದರೂ ಕಮ್ಮಿನೇ. ಯಾಕಂದ್ರೆ, ನಾನೊಬ್ಬ ನಿರ್ಮಾಪಕ ಆಗಬೇಕು ಅಂದುಕೊಂಡಿದ್ದಾಗ, ನನಗೆ ಒಂದು ಲಿಫ್ಟ್ ಕೊಟ್ಟಿದ್ದೇ ಮಾಲಾಶ್ರೀ. ಥ್ಯಾಂಕ್ಯು ಮಾಲಾಶ್ರೀ ಅವರೇ. ನನಗೆ ಮಾತ್ರ ಅಲ್ಲ.. ಚಿತ್ರರಂಗದಲ್ಲಿ ಎಷ್ಟೋ ಜನರಿಗೆ ನೀವು ಲಿಫ್ಟ್ ಕೊಟ್ಟಿದ್ದೀರಾ. ಅವರೆಲ್ಲಾ ಈಗ ಚಿತ್ರರಂಗದಲ್ಲಿ ಒಳ್ಳೊಳ್ಳೆ ಸ್ಥಾನಮಾನ ಪಡೆದಿದ್ದಾರೆ. ಥ್ಯಾಂಕ್ಯು ಎಂದರು. ಮಾಲಾಶ್ರೀ ಅವರ ಜಾಗವನ್ನ ಇದುವರೆಗೂ ಇಂಡಸ್ಟ್ರಿಯಲ್ಲಿ ಯಾರೂ ತುಂಬಿಲ್ಲ. ಅವರ ಜಾಗವನ್ನ ಮಗಳು ಆರಾಧನಾ ತುಂಬಲಿ. ಆರಾಧನಾ (Actress Aradhana) ಯಶಸ್ವಿಯಾಗಲಿ ಅಂತ ಹಾರೈಸಿದರು ರಾಕ್ಲೈನ್ ವೆಂಕಟೇಶ್.
ಇದಕ್ಕೆ ಪ್ರತಿಯಾಗಿ ಮಾಲಾಶ್ರೀ ರಾಕ್`ಲೈನ್`ಗೆ ಥ್ಯಾಂಕ್ಸ್ ಹೇಳೋ ಸಮಯ ಬಂದಿತ್ತು. ’ರಾಕ್ ಲೈನ್ ವೆಂಕಟೇಶ್ ಅವರಿಗೆ ಥ್ಯಾಂಕ್ಸ್. ನಾನು ಅವರಿಗೆ ಲಿಫ್ಟ್ ಕೊಟ್ಟೆ. ಆದರೆ, ಆಮೇಲೆ ಎಂತೆಂಥ ಒಳ್ಳೆಯ ಸಿನಿಮಾಗಳನ್ನ ಮಾಡಿದ್ರಿ. ನಿಮ್ಮಂಥ ನಿರ್ಮಾಪಕರ ಸಿನಿಮಾದ ಮೂಲಕ ನನ್ನ ಮಗಳು ಲಾಂಚ್ ಆಗ್ತಿರೋದು ತುಂಬಾ ಖುಷಿ ಅನಿಸುತ್ತದೆ ಎಂದ ಮಾಲಾಶ್ರೀ ಕಾಟೇರದಲ್ಲಿ ಮಗಳು ನಟಿಸುವುದಕ್ಕೆ ಅವಕಾಶ ಮಾಡಿಕೊಟ್ಟ, ಸಹಕಾರ ನೀಡಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿದರು.
ಆರಾಧನಾ ಹೇಗೆ ಮಾಡ್ತಾಳೋ ಅಂತ ನನಗೆ ತುಂಬಾ ಟೆನ್ಷನ್ ಆಗುತ್ತಿತ್ತು. ಆದರೆ, ಅವಳು ನೋಡಿದರೆ ಮೊದಲ ದಿನವೇ ಆರಾಮಾಗಿ ಆಕ್ಟಿಂಗ್ ಮಾಡಿದ್ದಾಳೆ. ಅದಕ್ಕೆ ಕಾರಣ ದರ್ಶನ್ ಸರ್. ಆರಾಧನಾಗೆ ದರ್ಶನ್ (Actor Darshan) ಕಮ್ಫರ್ಟ್ ಝೋನ್ ಕೊಟ್ಟಿದ್ದಾರೆ. ನಿರ್ದೇಶಕ ತರುಣ್ ಕೂಡ ಫ್ರೆಂಡ್ಲಿಯಾಗಿ ಹೇಳಿಕೊಟ್ಟಿದ್ದಾರೆ. ನನಗೆ ತುಂಬಾ ಖುಷಿಯಾಯಿತು. ಇಂತಹ ಒಳ್ಳೆಯ ತಂಡದಲ್ಲಿ ಕೆಲಸ ಮಾಡಲು ಅವಳಿಗೆ ಅವಕಾಶ ಕೊಟ್ಟ ರಾಕ್ಲೈನ್, ತರುಣ್, ದರ್ಶನ್ ದರ್ಶನ್ (Actor Darshan) ಅವರಿಗೆ ನನ್ನ ಧನ್ಯವಾದಗಳು. ಒಳ್ಳೆ ಚಿತ್ರದಿಂದ ನನ್ನ ಮಗಳು ಲಾಂಚ್ ಆಗ್ತಿರೋದಕ್ಕೆ ನನಗೆ ಹೆಮ್ಮೆ ಇದೆ ಎಂದರು ನಟಿ ಮಾಲಾಶ್ರೀ.
ನನಗೆ ಈಗಲೂ ದರ್ಶನ್ ದರ್ಶನ್ (Actor Darshan) ಅವರ ಜೊತೆಗೆ ನಟಿಸಿದ್ದೇನೆ ಅನ್ನೋದು ನಂಬೋದಕ್ಕೆ ಆಗ್ತಿಲ್ಲ ಎಂದ ಆರಾಧನಾ ರಾಕ್ಲೈನ್ , ತರುಣ್ ದರ್ಶನ್ (Tarun Sudheer) ಅವರಿಗೆ ಧನ್ಯವಾದ ತಿಳಿಸಿದ್ರು.



