ಈ ರೈಸ್ ಪುಲ್ಲಿಂಗ್ ಅನ್ನೋ ಮೋಸದ ಕಥೆಗಳು ಹೊಸದಲ್ಲ. ಈ ರೈಸ್ ಪುಲ್ಲಿಂಗ್ ಮೆಷಿನ್ ಇದ್ದರೆ, ಕೋಟಿ ಕೋಟಿ ಸಿಗುತ್ತೆ. ಕೋಟ್ಯಧಿಪತಿಗಳಾಗಬಹುದು. ಬಯಸಿದ್ದೆಲ್ಲ ಕೈಗೂಡುತ್ತೆ ಅನ್ನೋ ಮೌಢ್ಯವನ್ನು ಅದ್ಯಾವನು ಬಿತ್ತಿದನೋ.. ಗೊತ್ತಿಲ್ಲ. ಆರಂಭ ಮಾಡಿದವನು ದಂಧೆ ಕೈಬಿಟ್ಟಿದ್ದರೂ.. ಹೊಸ ಹೊಸ ಮೋಸಗಾರರು, ಹೊಸ ಹೊಸದಾದಗಿ ಮೋಸ ಹೋಗೋವ್ರು ಸಿಗ್ತಾನೇ ಇರ್ತಾರೆ. ಈಗ ಬೆಂಗಳೂರಿನಲ್ಲಿ ಮತ್ತೊಂದು ಅಂಥಹುದೇ ಘಟನೆ ನಡೆದಿದೆ.
ಕಚ್ಚಾತೈಲ, ರಿಫೈನರಿ ಪ್ಲಾಂಟ್ ಮಾಡಿಸಿಕೊಡ್ತೇನೆ, ನನಗೆ ಪಿಎಂ ಆಫೀಸಿನಲ್ಲಿ ಅವರು ಗೊತ್ತು, ಇವರು ಗೊತ್ತು, ಅಶ್ವತ್ಥ್ ನಾರಾಯಣ್, ಶ್ರೀರಾಮುಲು ತುಂಬಾ ಕ್ಲೋಸು ಎಂದು ಕನೆಕ್ಟ್ ಆದವರು, ಕೊನೆಗೆ ಅದೃಷ್ಟದ ಚೊಂಬಿನ ಆಸೆ ತೋರಿಸಿ, ಮನೆ, ಮಠ, ಜಮೀನು ಆಸ್ತಿಯನ್ನೆಲ್ಲ ತಮ್ಮ ಹೆಸರಿಗೆ ಬರೆಸಿಕೊಂಡು ನಾಮ ಇಟ್ಟಿದ್ದಾರೆ. ಮೋಸ ಮಾಡಿದವರ ಹೆಸರು ಹಾಸನದ ಚನ್ನರಾಯ ಪಟ್ಟಣದ ನಾಗರತ್ನ, ಹೊಳೆ ನರಸೀಪುರದ ರಾಮಚಂದ್ರ, ಬೆಂಗಳೂರಿನ ಸುಕುಮಾರನ್, ನಟೇಶ ಅಲಿಯಾಸ್ ವೆಂಕಟರಮಣನ್. ಮೋಸ ಹೋದವನ ಹೆಸರು ಹೆಣ್ಣೂರಿನ ಪ್ರಕೃತಿ ಲೇಔಟ್ ನಿವಾಸಿ ವಿ.ಕಾಂತರಾಜು. ಪೆಟ್ರೋಲ್ ಬಂಕ್ ಮತ್ತು ರಿಫೈನರಿ ಪ್ಲಾಂಟ್ ಮಾಡೋಕೆ ಓಡಾಡ್ತಿದ್ದ ಕಾಂತರಾಜು ಅವರಿಗೆ ಕೋಟಿ ಕೋಟಿ ಸುರಿಮಳೆಯ ಆಸೆ ತೋರಿಸಿ ಯಾಮಾರಿಸಿದ್ದಾರೆ.
ರೈಸ್ ಪುಲ್ಲಿಂಗ್ ಮೋಸ.. ಅದೇ ಕತೆ.. ಅದೇ ಹಾಡು..:
ಇವರೂ ಅಷ್ಟೆ, ರೈಸ್ ಪುಲ್ಲಿಂಗ್ ಮೆಷಿನಿನ ಕಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸ್ಯಾಟಲೈಟ್ʻಗಳನ್ನೂ ಕಂಟ್ರೋಲ್ ಮಾಡುವ 5 ರೈಸ್ ಪುಲ್ಲಿಂಗ್ ಮೆಷಿನ್ನುಗಳಿವೆ. ಒಂದೊಂದು ರೈಸ್ ಪುಲ್ಲಿಂಗ್ ಮೆಷಿನ್ನಿನ ಬೆಲೆಯೂ ತಲಾ 5 ಕೋಟಿ ಎಂದು ನಂಬಿಸಿದ್ದಾರೆ. ಹಾಗೆ ನಂಬಿಸಿದವರು ನಾಗರತ್ನ ಮತ್ತು ರಾಮಚಂದ್ರಪ್ಪ.
ಅವರು ತಮ್ಮ ಗ್ಯಾಂಗಿನ ಇನ್ನಿಬ್ಬರು ಮೆಂಬರುಗಳಾದ ನಟೇಶ್ ಮತ್ತು ಸುಕುಮಾರ್ ಅವರು ತಾವು ರೇಡಿಯಸ್ ಕಂಪೆನಿಯ ಸಿಇಓಗಳು ಎಂದು ಪರಿಚಯ ಮಾಡಿಕೊಂಡು ಯಾಮಾರಿಸಿದ್ದಾರೆ. ರೇಡಿಯಸ್ ಕಂಪೆನಿ ಸಿಇಓಗಳೇ ಹೇಳ್ತಿರಬೇಕಾದರೆ, ರೈಸ್ ಪುಲ್ಲಿಂಗ್ ಮೆಷಿನ್ ಸತ್ಯ ಎಂದು ನಂಬಿಕೊಂಡಿದ್ದಾರೆ ಕಾಂತರಾಜು.
ರೈಸ್ ಪುಲ್ಲಿಂಗ್ ಯಂತ್ರವನ್ನು ಮಾರಿ ಹಣ ಕೊಡ್ತೇವೆ. ಆದರೆ,ನೀವು ನಿಮ್ಮ ಜಮೀನನ್ನು ನಮಗೆ ಬರೆದುಕೊಡಬೇಕು ಎಂದು ಹೇಳಿದ್ಧಾರೆ. ಕಾಂತರಾಜು, ಕನಕಪುರದ ಅತ್ತಿಗುಪ್ಪೆ ಗ್ರಾಮದಲ್ಲಿದ್ದ 4 ಎಕರೆ, 18 ಗುಂಟೆ ಜಮೀನನ್ನು ಬರೆದೂ ಕೊಟ್ಟಿದ್ದಾರೆ. ಸುಕುಮಾರ್ನ ಅವರ ಪತ್ನಿ ಸವಿತಾ ಅವರಿಗೆ ಕ್ರಯವಾಗಿದೆ. 2021ರಲ್ಲಿ. ಅಷ್ಟೇ ಅಲ್ಲ, 60 ಲಕ್ಷ ರೂ.ಗಳನ್ನು ಚೆಕ್ ಮೂಲಕ ಕೊಟ್ಟು, ಆ 60 ಲಕ್ಷವನ್ನು ಮತ್ತೆ ವಾಪಸ್ ತೆಗೆದುಕೊಂಡಿದ್ದಾರೆ. ಅದಾದ ಮೇಲೆ ರೈಸ್ ಪುಲ್ಲಿಂಗ್ ಮೆಷಿನ್ ಸೇಲ್ ಮಾಡೋಕೆ 1 ಕೋಟಿ ಡೆಪಾಸಿಟ್ ಇಡಬೇಕು ಎಂದು ಯಾಮಾರಿಸಿ ಒಂದು ಕೋಟಿ, 60 ಲಕ್ಷ ಈಸ್ಕೊಂಡಿದ್ಧಾರೆ. ಆಗ ಕಾಂತರಾಜು ಮನೆಯನ್ನೂ ಸವಿತಾ ಹೆಸರಿಗೆ ಕ್ರಯ ಮಾಡಿಕೊಟ್ಟಿದ್ದಾನೆ. ಇದಾದ ಮೇಲೆ ರೈಸ್ ಪುಲ್ಲಿಂಗ್ ಮೆಷಿನ್ 100 ಕೋಟಿಗೆ ಸೇಲ್ ಆಗಿವೆ ಅಂತ ಹೇಳಿ, ಮತ್ತೆ 2 ಎಕರೆ, 4 ಗುಂಟೆ ಜಾಗವನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
ಆರೋಪಿಗಳನ್ನು ಎಷ್ಟರ ಮಟ್ಟಿಗೆ ನಂಬಿದ್ದರೆಂದರೆ.. ಆರೋಪಿಗಳ ಮೊಬೈಲ್ ಫೋನ್ ನಾಟ್ ರೀಚಬಲ್ ಆಗುವವರೆಗೆ ನಂಬಿದ್ದರು. ಈಗ ಕಂಪ್ಲೇಂಟ್ ಹೋಗಿದೆ. ಮುಂದೇನಾಗುತ್ತೋ.. ನೋಡಬೇಕು.



