ಹೆಚ್ ಡಿ ರೇವಣ್ಣ, ದೈವಭಕ್ತರು. ಸದಾ ಯಾವುದಾದರೊಂದು ದೇವಸ್ಥಾನದ ಪ್ರಸಾದ, ನಿಂಬೆಹಣ್ಣು, ಹೂವು.. ಇಟ್ಟುಕೊಂಡೇ ಓಡಾಡುತ್ತಿದ್ದವರು. ತಿಂಗಳಿಗೊಂದಾದರೂ ಯಾಗ, ವಿಶೇಷ ಪೂಜೆ ನೆರವೇರಿಸುತ್ತಿದ್ದ ರೇವಣ್ಣ, ರಾಹುಕಾಲ, ಯಮಗಂಡ ಕಾಲ, ಗುಳಿ ಕಾಲಗಳನ್ನೂ ನಂಬಿದವರು. ಜ್ಯೋತಿಷ್ಯವನ್ನು ಓದಿದವರೇನಲ್ಲ. ಆದರೆ.. ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಕೇಳಿದರೆ.. ಇವರು ಸ್ವಲ್ಪ ತಿಳಿದುಕೊಂಡಿದ್ದಾರೆ ಎಂದು ಅನಿಸದೇ ಇರದು. ಅಂತಹ ರೇವಣ್ಣ ಅವರಿಗೆ ಸುಮಾರು ಒಂದು ವರ್ಷದಿಂದ ಸಂಕಷ್ಟಗಳು ಮಾತ್ರವೇ ಎದುರಾಗುತ್ತಿವೆ. ಅದರ ಪರಿಣಾಮ, ನಾನ್ ವೆಜ್ ತಿನ್ನುವುದು ಬಿಟ್ಟಿದ್ದಾರೆ ಹೆಚ್ ಡಿ ರೇವಣ್ಣ ಮತ್ತು ಅವರ ಪತ್ನಿ ಭವಾನಿ.
ಹಲವು ಲೈಂಗಿಕ ದೌರ್ಜನ್ಯ ಕೇಸುಗಳಲ್ಲಿ ಪ್ರಜ್ವಲ್ ರೇವಣ್ಣ ಜೈಲು ಸೇರಿ ಒಂದು ವರ್ಷವೇ ಕಳೆದುಹೋಗಿದೆ. ಜಾಮೀನು ಸಿಕ್ಕಿಲ್ಲ. ಇನ್ನೊಬ್ಬ ಮಗ ಸೂರಜ್ ರೇವಣ್ಣ ಕೂಡಾ ಜೈಲಿಗೆ ಹೋಗಿ ಬಂದಿದ್ದಾರೆ. ಜೈಲು ಸೇರಿದ ಮೊದಲಿಗ ಹೆಚ್ ಡಿ ರೇವಣ್ಣ. ಅದೂ ರೇಪ್ ಕೇಸಿನಲ್ಲಿ. ಅದಾದ ಮೇಲೆ.. ಪ್ರಜ್ವಲ್, ಅದಾದ ಮೇಲೆ ಸೂರಜ್. ಭವಾನಿ ರೇವಣ್ಣ ಕೂಡಾ ಜೈಲಿನ ಬಾಗಿಲು ತಟ್ಟಿ ಬಂದರು. ಮನೆ ಕೆಲಸದಾಕೆಯನ್ನು ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ಪ್ರಜ್ವಲ್ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೋಗುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಹೀಗಾಗಿ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಸರ್ಕಾರಿ ವಕೀಲರಿಗೆ ನೋಟಿಸ್ ನೀಡಿದೆ. ಅಲ್ಲದೇ ಕೆಲವೊಂದು ಸರ್ಟಿಫೈ ದಾಖಲೆಗಳನ್ನು ಸಲ್ಲಿಸಲು ನ್ಯಾಯಾಲಯ ಆಕ್ಷೇಪಣೆ ಎತ್ತಿದೆ. ಮುಂದಿನ ವಿಚಾರಣೆ ವೇಳೆ ದಾಖಲೆಗಳನ್ನು ಸಲ್ಲಿಸುವುದಾಗಿ ಪ್ರಜ್ವಲ್ ಪರ ವಕೀಲರು ಮಾಹಿತಿ ನೀಡಿದ್ದಾರೆ. ಜಾಮೀನು ಅರ್ಜಿ ವಿಚಾರಣೆ ಜುಲೈ 18ಕ್ಕೆ ಮುಂದೂಡಿಕೆಯಾಗಿದೆ. ಸದ್ಯ 10 ದಿನದಲ್ಲೇ ಅರ್ಜಿಯ ಇತ್ಯರ್ಥಕ್ಕೆ ಹೈಕೋರ್ಟ್ ಕೆಳಹಂತದ ನ್ಯಾಯಾಲಯಕ್ಕೆ ಡೆಡ್‌ಲೈನ್ ನೀಡಿದೆ. ಇದೆಲ್ಲದರ ಮಧ್ಯೆ ಪ್ರಜ್ವಲ್ ಬರುವಿಕೆಯ ನಿರೀಕ್ಷೆಯಲ್ಲಿ ರೇವಣ್ಣ ಇದ್ದಾರೆ.
ಹೀಗಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪುತ್ರನಿಗಾಗಿ ದೇವರ ಹರಕೆ ಹೊತ್ತಿದ್ದಾರೆ. ತಮ್ಮ ಇಷ್ಟದ ತಿನಿಸನ್ನೇ ಪುತ್ರನಿಗಾಗಿ ತ್ಯಾಗ ಮಾಡಿದ್ದಾರೆ. ಪುತ್ರನ ಬಿಡುಗಡೆಗಾಗಿ ಹೆಚ್.ಡಿ.ರೇವಣ್ಣ ದೇವರ ಮುಂದೆ ಸಂಕಲ್ಪ ಮಾಡಿದ್ದಾರೆ. ಪ್ರಜ್ವಲ್ ಬಿಡುಗಡೆ ಆಗುವವರೆಗೆ ನಾನ್ ವೆಜ್ ತಿನ್ನೋದಿಲ್ಲ ಅಂತ ಹರಕೆ ಹೊತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಾಂಸಹಾರ ತ್ಯಜಿಸಿದ್ದಾರಂತೆ.
ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣ ಜೈಲುವಾಸ ಅನುಭವಿಸ್ತಿದ್ದಾರೆ. ತಂದೆ ಹೆಚ್.ಡಿ. ರೇವಣ್ಣ ತಮ್ಮ ಪುತ್ರನಿಗಾಗಿ ಶಪಥವೊಂದನ್ನ ಮಾಡಿದ್ದಾರೆ. ತಮ್ಮಿಷ್ಟದ ನಾನ್ ವೆಜ್ ಬಿಟ್ಟು ಮಗನ ಬರುವಿಕೆಗೆ ಕಾಯುತ್ತಿದ್ದಾರೆ. ರೇವಣ್ಣ ಅವರಷ್ಟೇ ಅಲ್ಲ, ಪತ್ನಿ ಭವಾನಿ ಕೂಡಾ ಮಗನಿಗಾಗಿ ನಾನ್ ವೆಜ್ ಬಿಟ್ಟಿದ್ದಾರಂತೆ.



