ದರ್ಶನ್ ಮಾಡಿದ್ದು ತಪ್ಪಾ..? ರೇಣುಕಾಸ್ವಾಮಿ ಮಾಡಿದ್ದು ತಪ್ಪಾ..? ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಆ ರೀತಿಯ ಅಶ್ಲೀಲ ಮೆಸೇಜ್ ಕಳಿಸಿದ್ದು ತಪ್ಪಲ್ವಾ..? ಇಂತಾದ್ದೊಂದು ಮಾತು ಹೇಳುವ ದರ್ಶನ್ ಅಭಿಮಾನಿಗಳಿಗೆ ರೇಣುಕಾಸ್ವಾಮಿಯವರ ತಾಯಿಯ ಮಾತಿನಲ್ಲಿ ಉತ್ತರ ಇದೆ. ನನ್ನ ಮಗ ತಪ್ಪು ಮಾಡಿದ್ದ, ಅದನ್ನೇನೂ ಸರಿ ಅಂತಾ ಹೇಳೋದಿಲ್ಲ, ಆದರೆ ಒಂದು ವಾರ್ನಿಂಗ್ ಕೊಟ್ಟು ಬಿಡಬಹುದಾಗಿದ್ದ ತಪ್ಪಿಗೆ, ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಬೇಕಿತ್ತಾ ಅನ್ನೋದು ಆ ತಾಯಿಯ ಪ್ರಶ್ನೆ. ಅದಕ್ಕೆ ಉತ್ತರ ಇಲ್ಲ. ದರ್ಶನ್, ಪವಿತ್ರಾ ಗೌಡ ಯಾರೊಬ್ಬರ ಮೇಲೆಯೂ ಆ ತಾಯಿಯ ಕೋಪ ತಣ್ಣಗಾಗಿಲ್ಲ.
ʻಈಗ ಸ್ವಲ್ಪ ಸಮಾಧಾನ ಆಗಿದೆ. ನನ್ನ ಮಗ ಹೇಗೆ ಅಯ್ಯೋ ಅಂದ್ನೋ.. ಅದಕ್ಕಿಂತ ಅವರುಗಳು ಡಬಲ್ ಅಯ್ಯೋ ಅನ್ನಬೇಕು. ನನಗೆ ಅದೇ ಬೇಕಾಗಿರೋದು. ನನ್ನ ಮಗನ ಆತ್ಮಕ್ಕೆ ಶಾಂತಿ ಸಿಗಬೇಕು ಅಂದ್ರೆ ಅವರುಗಳು ಇನ್ನೂ ಅನುಭವಿಸಬೇಕು. ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಜೀವನದಲ್ಲಿ ಆಟವಾಡಿದ್ದಾಳಲ್ಲಾ.. ಅವಳನ್ನ ಖಂಡಿತ ಬಿಡುಗಡೆ ಮಾಡಬಾರದುʼ..
ಎಂದು ಆಕ್ರೋಶ ಹೊರಹಾಕಿದ್ದಾಋಎ ದರ್ಶನ್ & ಗ್ಯಾಂಗ್ʻನಿಂದ ಕೊಲೆಯಾಗಿರುವ ರೇಣುಕಾಸ್ವಾಮಿ ಅವರ ತಾಯಿ. ʻನನ್ನ ಮಗನಿಗೆ ಆದ ಗತಿಯೇ ಬರಬೇಕು. ಹೆಣ ಕೂಡ ಸಿಗಬಾರದು. ನರಕ ಅನುಭವಿಸಬೇಕು.ನಮಗೆ ಕಾನೂನಿನ ಮೇಲೆ ಭರವಸೆ ಇದೆ. ಸರ್ಕಾರದ ಮೇಲೂ ಭರವಸೆ ಇದೆ. ಅವರುಗಳನ್ನ ಹೊರಗೆ ಬರೋಕೆ ಬಿಡಬಾರದು. ಇದಕ್ಕಿಂತಲೂ ಹೆಚ್ಚಿನ ಶಿಕ್ಷೆ ಕೊಡಬೇಕು. ನಾವು ಯಾಕಾದರೂ ಕೊಲೆ ಮಾಡಿದ್ವೋ.. ಜೀವನನೇ ಬೇಡ ಅಂತ ನರಕ ಅನುಭವಿಸಬೇಕು. ಆ ರೀತಿ ಅವರುಗಳಿಗೆ ಶಿಕ್ಷೆ ಕೊಡಬೇಕುʼ ಎಂದಿದ್ದಾರೆ.
ರೇಣುಕಾಸ್ವಾಮಿ ತಮ್ಮ ಮಗ ಮಾಡಿದ್ದನ್ನು ಸಮರ್ಥನೆಯನ್ನೇನೂ ಮಾಡಿಕೊಳ್ಳೋದಿಲ್ಲ, ನನ್ನ ಮಗನಿಗೆ ವಾರ್ನ್ ಮಾಡಬಹುದಿತ್ತು. ಇಷ್ಟು ಕ್ರೂರವಾಗಿ ಹತ್ಯೆ ಮಾಡುವ ಅವಶ್ಯಕತೆ ಇರಲಿಲ್ಲ. ನಿಜವಾಗಿಯೂ ಅವರುಗಳು ಮನುಷ್ಯರೇ ಅಲ್ಲ. ಅವರುಗಳಿಗೂ ಅದೇ ಗತಿ ಬರಬೇಕು. ಪೊಲೀಸರೇ ಚೆನ್ನಾಗಿ ಹೊಡೆದು ಎಲ್ಲಾದರೂ ಬಿಸಾಕಬೇಕು. ಅವರ ಬಾಡಿ ಕೂಡ ಯಾರಿಗೂ ಸಿಗಬಾರದು. ಅಷ್ಟು ಹೊಟ್ಟೆ ಉರಿಯುತ್ತಿದೆ ನಮಗೆ ಮಗನನ್ನ ಕಳೆದುಕೊಂಡು ಎಂದು ಕಣ್ಣೀರಿಟ್ಟಿದ್ದಾರೆ.
ದರ್ಶನ್, ಅವರ ಗೆಳತಿ ಪವಿತ್ರಾ ಗೌಡ ಸೇರಿದಂತೆ ಮತ್ತವರ ಕಂಪ್ಲೀಟ್ ಗ್ಯಾಂಗ್ ಈಗ ಪರಪ್ಪನ ಅಗ್ರಹಾರ ಜೈಲು ಸೇರಿದೆ.



