ಪವಿತ್ರಾ ಗೌಡ ಅವರಿಗೆ ತಿಂಗಳಿಗೆ 10 ಸಾವಿರ ಕೊಡ್ತೀನಿ.. ಬಾ ಅಂದಿದ್ದ ರೇಣುಕಾಸ್ವಾಮಿ, ರೇಟು ಕೇಳಿ ಸತ್ತನಾ..? ನನ್ ಹೆಂಡ್ತಿಗೇ ಮೆಸೇಜ್ ಮಾಡ್ತೀಯಾ ಎಂದು ಕೆರಳಿದ್ದ ದರ್ಶನ್, ಆ ಸಿಟ್ಟಿನಲ್ಲೇ ಹಿಂಸೆ ಕೊಟ್ಟು ಕೊಂದರಾ..? ರೇಣುಕಾಸ್ವಾಮಿಯ ಮೇಲಿನ ಹಲ್ಲೆ ಮತ್ತು ಕೊಲೆ ಪ್ರಕರಣದ ಸಂಬಂಧ ಚಾರ್ಜ್‌ಶೀಟ್ ಬಯಲಿಗೆ ತರುತ್ತಿರುವ ಸ್ಫೋಟಕ ಮಾಹಿತಿಗಳು ಬೆಚ್ಚಿ ಬೀಳಿಸುತ್ತಿವೆ.
ದರ್ಶನ್, ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಸಿ ಚಿತ್ರದುರ್ಗರದಿಂದ ತಂದು, ಪಟ್ಟಣಗೆರೆ ಶೆಡ್ಡಿನಲ್ಲಿ ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದಾನೆ. ಪವಿತ್ರಾ ಗೌಡಗಾಗಿ ದರ್ಶನ್, ದರ್ಶನ್‌ಗಾಗಿ ಅವರ ಇಡೀ ಗ್ಯಾಂಗ್ ಆಕ್ಟಿವ್ ಆಗಿ ಕೆಲಸ ಮಾಡಿದೆ. ಇಷ್ಟಕ್ಕೂ ರೇಣುಕಾಸ್ವಾಮಿಯ ಮೇಲೆ ದರ್ಶನ್ ಮತ್ತು ಪವಿತ್ರಾ ಗೌಡ ಆ ಪರಿ ಕೆರಳಿದ್ದೇಕೆ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.
ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಏನೋ ಅಚಾನಕ್ ಆಗಿ ಒಂದೆರಡು ಸಲ ಮೆಸೇಜ್ ಮಾಡಿದವನಲ್ಲ. ಹಲವು ಬಾರಿ ಕೆಟ್ಟದಾಗಿ, ಅಸಭ್ಯವಾಗಿ, ಅಶ್ಲೀಲವಾಗಿ ಮೆಸೇಜ್ ಮಾಡಿದ್ದ. ದರ್ಶನ್‌ಗಿಂತ ನಾನು ಸ್ಟ್ರಾಂಗ್ ಇದ್ದೀನಿ ಕಣೆ ಅಂತೆಲ್ಲ ಹೇಳಿದ್ದ. ಇದು ಒಂದೆರಡು ದಿನಗಳ ಕಥೆ ಅಲ್ಲ, ತಿಂಗಳುಗಳ ಹಿಂದಿನ ಕಥೆ.
ರೇಣುಕಾಸ್ವಾಮಿ.. ಇನ್ ಸ್ಟಾದಲ್ಲಿ..
ಹಾಯ್ ಕಣೇ
ನಿನ್ನ ನಂಬರ್ ಸೆಂಡ್ ಮಾಡು
ಎಂದೇ ಮೆಸೇಜ್ ಮಾಡೋಕೆ ಶುರು ಮಾಡಿದ್ದ.
ಪ್ಲೀಸ್ ಕಣೇ
ಗುಡ್ ನೈಟ್ ಸ್ವೀಟ್ ಡ್ರೀಮ್ಸ್ ಕಣೇ
ಎನ್ನುತ್ತಾ ಕ್ಲೋಸ್ ಆಗುವ ಪ್ರಯತ್ನ ಮಾಡಿದ್ದ. ಅದಾದ ಮೇಲೆ..
ವಾಟ್ ಯು ಎಕ್ಸ್ಪೆಕ್ಟ್ ಮಿ?
ಎನ್ನುತ್ತಾ ವಿಷಯಕ್ಕೆ ಎಂಟ್ರಿ ಕೊಟ್ಟಿದ್ದ.
ನೋಡ್ತೀಯಾ ಹೇಳು?
ಕಳಿಸಲಾ ಫೋಟೋ?
ಇದಿಯಾ ಅಂತ ಹೇಳು ಪ್ಲೀಸ್ ಕಣೇ
ಎನ್ನುತ್ತಾ ಮೆಸೇಜ್ ಮಾಡುತ್ತಿದ್ದ. ಅವನು ಏನನ್ನು ತೋರಿಸಲು ಬಯಸಿದ್ದ ಅನ್ನೋದು ಗೊತ್ತಿರೋ ವಿಷಯ.
ವಾವ್ ಸೂಪರ್ಬ್ ಬ್ಯೂಟಿ
ಸಖತ್ ಆಗಿ ಇದ್ದೀಯಾ ಕಣೆ
ಎಂದೆಲ್ಲ ಮೆಸೇಜ್ ಮಾಡುತ್ತಿದ್ದವನು.. ನಂಬರ್ ನಂಬರ್ ಕೊಡುವಂತೆ ದುಂಬಾಲು ಬಿದ್ದಿದ್ದ. ಅವನಿಗೆ ಪವಿತ್ರಾ ಗೌಡ ಬೇಕಾಗಿತ್ತು.
ಪವಿತ್ರಾ ಗೌಡ : ಡ್ರಾಪ್ ಮಿ ಯೂವರ್ ನಂಬರ್
ರೇಣುಕಾಸ್ವಾಮಿ : ನಿನ್ನ ನಂಬರ್ ಸೆಂಡ್ ಮಾಡು, ಪ್ಲೀಸ್ ಕಣೇ.
ಪವಿತ್ರಾ ಗೌಡ : 9XXXXXXXX7. ಪ್ಲೀಸ್ ಕಾಲ್ ಆನ್ ದಿಸ್
ರೇಣುಕಾಸ್ವಾಮಿ : ಓಕೆ ಥ್ಯಾಂಕ್ಸ್ ಕಣೇ. ಅದು ನಿಜವಾಗಿಯೂ ನಿನ್ನ ನಂಬರಾ? ಹೇಳು.
ಪವಿತ್ರಾ ಗೌಡ : ಯೆಸ್ ಕಾಲ್ ಮಿ.
ಹೀಗೆ ಪವನ್ ನಂಬರ್ ಕೊಟ್ಟಿದ್ದ ಪವಿತ್ರಾ, ರೇಣುಕಾಸ್ವಾಮಿಯನ್ನು ಖೆಡ್ಡಾಗೆ ಕೆಡವಿದ್ದರು. ರೇಣುಕಾಸ್ವಾಮಿಯ ಅಶ್ಲೀಲ ಫೋಟೋ ನೋಡಿದ ಮೇಲೆ ಇನ್ನೂ ಉಗ್ರಾವತಾರ ತಾಳಿದ್ದರು ಪವಿತ್ರಾ ಗೌಡ. ಪವಿತ್ರಾ ಗೌಡ ಸಿಟ್ಟಾಗುವುದಕ್ಕೆ ಇನ್ನೂ ಒಂದು ಕಾರಣ ಇತ್ತು. ನನ್ನ ಜೊತೆ ಲಿವ್ ಇನ್ ರಿಲೇಷನ್ ಗೆ ಬಾ, ಪ್ರತಿ ತಿಂಗಳು 10 ಸಾವಿರ ರು. ಕೊಡುತ್ತೇನೆ ಎಂದು ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಸತತವಾಗಿ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದ. ತನ್ನ ಮರ್ಮಾಂಗದ ಫೋಟೋ ಹಾಗೂ ಕಳುಹಿಸುತ್ತಿದ್ದ.ನಿನ್ನ ಪೋಟೋನೋಡಿಕೊಂಡು ಹಸ್ತಮೈಥುನ ಮಾಡಿಕೊಂಡೆ. ಫೋಟೋದಲ್ಲೇ ಇಷ್ಟು ಚೆನ್ನಾಗಿದ್ದೀಯ.. ಇನ್ನು ನಿಜವಾಗಿ ಸಿಕ್ಕರೆ.. ಎಂದು ಮೆಸೇಜುಗಳಲ್ಲಿಯೇ ಜೊಲ್ಲು ಸುರಿಸುತ್ತಿದ್ದ.
ಇದೆಲ್ಲ ಟಾರ್ಚರುಗಳಿಂದ ರೊಚ್ಚಿಗೆದ್ದಿದ್ದ ಪವಿತ್ರಾ ಗೌಡ, ಪಟ್ಟಣಗೆರೆ ಶೆಡ್ಡಿಗೆ ರೇಣುಕಾಸ್ವಾಮಿಯನ್ನು ಕರೆತಂದಾಗ ಹುಚ್ಚಿಯಂತೆಯೇ ಆಡಿದ್ದಳಂತೆ.
ನನ್ ಹೆಂಡ್ತೀಗೇ ಮೆಸೇಜ್ ಕಳಿಸ್ತೀಯ ಎಂದು ಸಿಕ್ಕಸಿಕ್ಕಂತೆ ಹೊಡೆದಿದ್ದ ದರ್ಶನ್ ಕೋಪ ಇನ್ನೂ ಹೆಚ್ಚಾಗಿದ್ದಕ್ಕೆ ಕಾರಣ ಇದೆ. ‘ಕೇಳೋ.. ಕ್ಷಮೆ ಕೇಳೋ, ಮೆಸೇಜ್ ಮಾಡಿದ್ದು ತಪ್ಪಾಯ್ತು ಅಂತ ಕ್ಷಮೆ ಕೇಳೋ.’ ಎಂದು ಹೊಡೆಯುತ್ತಿದ್ದ ದರ್ಶನ್, ನಂತರ ಅವನನ್ನು ಪವಿತ್ರಾ ಗೌಡಳಿಗೆ ಬಿಟ್ಟಿದ್ದಾನೆ. ಪವಿತ್ರಾ ಗೌಡ ಚಪ್ಪಲಿಯಲ್ಲಿ ರೇಣುಕಾಸ್ವಾಮಿಯನ್ನು ಹೊಡೆಯುತ್ತಿದ್ದಾಗ ‘ನಂಗೇ ನಿನ್ ಫೋಟೋ ಕಳುಹಿಸ್ತೀಯಾ. ನಿನ್ನ ಕಥೆ ಮುಗಿಸ್ತೀನಿ.. ಬಿಡಲ್ಲ.. ‘ನನ್ನ ರೇಟ್ ಕೇಳ್ತೀಯೇನೋ?.. ʻ..ʼ ಮಗನೇ..ʼʼ ನನ್ನನ್ನೇ ಮೈಂಟೇನ್ ಮಾಡ್ತಿಯೇನೋ..ʼ ಎಂದು ಹೇಳುತ್ತಾ ರೊಚ್ಚಿಗೆದ್ದಿದ್ದಾರೆ.
ಯಾವಾಗ ಪವಿತ್ರಾ ಗೌಡರ ರೇಟು ಕೇಳಿದ್ದ, ಮೈಂಟೇನ್ ಮಾಡ್ತೀನಿ, ತಿಂಗಳಿಗೊಂದ್ಸಲ ಬಂದು ಹೋಗ್ತೀನಿ ಎಂದು ಹೇಳ್ತಿದ್ದ ಎಂಬ ವಿಷಯ ಗೊತ್ತಾಯಿತೋ.. ಆಗ ದರ್ಶನ್ ಇನ್ನಷ್ಟು ಕೆರಳಿದ್ದಾರೆ. ಅಲ್ಲಿಗೆ ಇಡೀ ದರ್ಶನ್ ಗ್ಯಾಂಗ್ ಸಂಪೂರ್ಣ ಕಂಟ್ರೋಲ್ ತಪ್ಪಿದೆ. ರೇಣುಕಾಸ್ವಾಮಿ ಸತತ 6 ಗಂಟೆಗಳ ನರಕ ನೋಡಿಯೇ ಸತ್ತಿದ್ದಾನೆ.
ಈ ಹಂತದಲ್ಲಿ ರೇಣುಕಾಗೆ ತನ್ನ ಚಪ್ಪಲಿಯಿಂದ ಪವಿತ್ರಾ ಬಾರಿಸಿದ್ದಾಳೆ. ಆಗ ಚಪ್ಪಲಿ ಕಸಿದುಕೊಂಡು ದರ್ಶನ್ ಕೂಡ ಹೊಡೆದಿದ್ದಾರೆ. ಅಲ್ಲದೆ ಆತನ ಎದೆ ಮೇಲೆ ಕಾಲಿಟ್ಟು ಅದುಮಿದ ದರ್ಶನ್, ನನ್ನ ಹೆಂಡ್ತಿಗೆ ನಿನ್ನ ಅಂಗಾಂಗಗಳ ಫೋಟೋ ಕಳುಹಿಸ್ತೀಯಾ ಸೂ… ಮಗನೇ ಎಂದು ನಿಂದಿಸುತ್ತಾರೆ. ಆಗ ತನ್ನ ಸಹಚರ ಪವನ್‌ಗೆ ರೇಣುಕಾಸ್ವಾಮಿ ಬಟ್ಟೆ ಬಿಚ್ಚುವಂತೆ ಹೇಳುವ ದರ್ಶನ್, ಪವಿತ್ರಾಳನ್ನು ವಿನಯ್ ಮೂಲಕ ಮನೆಗೆ ಕಳುಹಿಸುತ್ತಾರೆ. ಬಳಿಕ ರೇಣುಕಾಸ್ವಾಮಿ ಮೊಬೈಲ್ ಕಸಿದು ಕೊಳ್ಳುವಂತೆ ಪ್ರದೂಷ್‌ಗೆ ದರ್ಶನ್ ಹೇಳುತ್ತಾರೆ. ಆಗ ಪವಿತ್ರಾಳಂತೆ ಇನ್‌ಸ್ಟಾಗ್ರಾಂನಲ್ಲಿ ಗೌತಮ್ ಹೆಸರಿನ ಖಾತೆಯಿಂದ ಹಲವು ಸ್ತ್ರೀಯರಿಗೆ ರೇಣುಕಾ ಅಶ್ಲೀಲ ಸಂದೇಶ ಕಳಿಸಿ ದ್ದು ಗೊತ್ತಾಗುತ್ತದೆ. ಆಗ ಮತ್ತಷ್ಟು ಕೆರಳಿದ ದರ್ಶನ್, ಆ ಮೆಸೇಜ್ ಓದುತ್ತಲೇ ಏನೋ ‘ಕಾಮಿಷ್ಟ’ ಎಂದು ಕಪಾಳ, ಎದೆ, ಮರ್ಮಾಂಗ.. ಎಲ್ಲ ಕಡೆ ಸಿಕ್ಕಸಿಕ್ಕಲ್ಲಿ ಹೊಡೆಯುತ್ತಾರೆ. ಕೊನೆಗೆ ಸಹಚರರು ರೇಣುಕಾನನ್ನು ಭೀಕರ ಹತ್ಯೆ ಮಾಡುತ್ತಾರೆ.



