ನಮಗೆಲ್ಲ ಡಾ.ರಾಜ್ ಕುಮಾರ್ (Dr. Rajkumar) ಅವರ ಮನೆಯೇ ದೊಡ್ಡಮನೆ. ಅವರ ತೀರ್ಮಾನ ಯಾವತ್ತಿಗೂ ಫೈನಲ್. ವಿವಾದವನ್ನು ಶಿವಣ್ಣ (Shiva Rajkumar) ಬಗೆಹರಿಸ್ತಾರೆ. ಹಾಗಂತ ಹೇಳಿದ್ದು ರವಿಚಂದ್ರನ್(Ravichandran). ಡಾ.ರಾಜ್ ಅವರೇ ರವಿಚಂದ್ರನ್ ಅವರನ್ನು ಸಾಹುಕಾರರು ಎಂದು ಕರೆಯುತ್ತಿದ್ದರು. ವೀರಸ್ವಾಮಿ ಅವರ ಮಗ ಎಂಬ ಅಭಿಮಾನವೂ ಇತ್ತು. ಅದಕ್ಕಿಂತ ಮಿಗಿಲಾಗಿ ಬಾಂಧವ್ಯವಿತ್ತು.
ರವಿಚಂದ್ರನ್ (Ravichandran)ಹಾಗೆ ಹೇಳಿದ್ದು ಅವರ ದೊಡ್ಡತನ. ಸುದೀಪ್ (Kichcha Sudeep) ನಮ್ಮ ಫ್ಯಾಮಿಲಿ ಫ್ರೆಂಡ್. ದುಡ್ಡು ಕಾಸಿನ ಲೆಕ್ಕಾಚಾರ ನನಗೂ ಗೊತ್ತಾಗಲ್ಲ. ಅವರೂ ನಟ, ನಾನೂ ಒಬ್ಬ ನಟ. ರವಿಚಂದ್ರನ್ ಸರ್ ಏನ್ ಹೇಳ್ತಾರೋ.. ಹಾಗೆ ಕೇಳೋಣ. ಅವರು ನನಗಿಂತ ಸೀನಿಯರ್.. ಈ ಮಾತು ಹೇಳಿದ್ದು ಡಾ.ರಾಜ್ ಮನೆತನದ ದೊಡ್ಡ ಮಗನೂ ಆಗಿರುವ ಡಾ.ಶಿವರಾಜ್ ಕುಮಾರ್. ರವಿಚಂದ್ರನ್ (Ravichandran) ಮತ್ತು ಶಿವಣ್ಣ (Shiva Rajkumar) ಇಬ್ಬರೂ ಬಾಲ್ಯದಿಂದಲೂ ಸ್ನೇಹಿತರು.
ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎನ್.ಕುಮಾರ್ ನಡುವಿನ ಸಂಘರ್ಷ ಈಗ ಮತ್ತೆ ರವಿಚಂದ್ರನ್ ಅವರ ಬಳಿಗೇ ವಾಪಸ್ ಬರುತ್ತಿದೆ. ರವಿಚಂದ್ರನ್ ಭೇಟಿಯ ನಂತರ ಶಿವಣ್ಣ ಮನೆಗೆ ಭೇಟಿ ನೀಡಿದ್ದ ಕುಮಾರ್ ಅವರಿಗೆ ಸಿಕ್ಕಿರುವುದು ಶಿವಣ್ಣ ಅವರ ಭರವಸೆಯ ಮಾತುಗಳಷ್ಟೆ. ಕಿಚ್ಚ ಸುದೀಪ್ ನಾನು ಒಳ್ಳೆಯ ಸ್ನೇಹಿತರು. ಸುದೀಪ್ ನಮ್ಮ ಫ್ಯಾಮಿಲಿ ಸದಸ್ಯರು ಎಂದರೆ ತಪ್ಪಿಲ್ಲ. ನನಗಿಂತ ರವಿಚಂದ್ರನ್ ಅವರೇ ಸೀನಿಯರ್. ನನಗಿಂತ ನಾಲ್ಕು ವರ್ಷ ಮುಂಚೆ ರವಿ ಅವರು ಚಿತ್ರರಂಗಕ್ಕೆ ಬಂದಿದ್ದಾರೆ. ರವಿ ಸರ್ ಏನು ಹೇಳ್ತಾರೆ ಅಂತ ಕೇಳಬೇಕು. ನಾನು ಏನು ಹೇಳೋಕೆ ಆಗಲ್ಲ ಎಂದಿದ್ದಾರೆ ರವಿಚಂದ್ರನ್.
ಅಲ್ಲಿಗೆ ವಿವಾದ ಎಲ್ಲಿಂದ ಶುರುವಾಗಿತ್ತೋ ಅಲ್ಲಿಗೇ ಬಂದು ನಿಂತಿದೆ. ವಿವಾದವನ್ನು ರವಿಚಂದ್ರನ್ ಅವರ ಮನೆಗೆ ಕೊಂಡೊಯ್ದಾಗ ರವಿಚಂದ್ರನ್ ಅವರೂ ಕೂಡಾ ದೊಡ್ಮನೆ ಏನು ಹೇಳುತ್ತೋ ಅದೇ ಫೈನಲ್ ಎಂದಿದ್ದರು. ನಮಗೆಲ್ಲ ಯಾವತ್ತೂ ರಾಜ್ ಮನೆಯವರ ತೀರ್ಮಾನವೇ ಅಂತಿಮ. ಶಿವಣ್ಣ ಬಗೆಹರಿಸ್ತಾರೆ ಎಂದಿದ್ದರು. ಸುದೀಪ್ ನನಗೆ ಮಗನಂತೆ ಎಂದಿದ್ದರು. ಈಗ ಮತ್ತೆ ಅವರ ಬಳಿಗೇ ವಾಪಸ್ ಬಂದಿದೆ ವಿವಾದ.
ಕಿಚ್ಚ ಸುದೀಪ್ ಅವರು 8 ವರ್ಷಗಳ ಹಿಂದೆ ದುಡ್ಡು ಪಡೆದು ಸಿನಿಮಾ ಮಾಡಿಕೊಟ್ಟಿಲ್ಲ, ಫೋನ್ ಕಾಲ್ಗೂ ಸಿಗುತ್ತಿಲ್ಲ ಎಂದು ನಿರ್ಮಾಪಕ ಎಂ ಎನ್ ಕುಮಾರ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ದೂರು ಹೇಳಿಕೊಂಡಿದ್ದರು. ಆ ನಂತರ ಕಿಚ್ಚ ಸುದೀಪ್ ಅವರು ಕುಮಾರ್ ವಿರುದ್ಧ 10 ಕೋಟಿ ರೂ ಮಾನನಷ್ಟ ಮೊಕದ್ದಮೆ ಹಾಕಿದ್ದರು. ನಿರ್ಮಾಪಕ ಕುಮಾರ್ ಅವರು ಮೊದಲು ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಅವರನ್ನೂ ಭೇಟಿ ಮಾಡಿದ್ದಾರೆ.
ನನಗೆ ಎಲ್ಲವನ್ನೂ ಲಿಖಿತ ರೂಪದಲ್ಲಿಯೇ ನೀಡಬೇಕು. ಆರೋಪಗಳು ಮತ್ತು ದಾಖಲೆ ಎರಡೂ ರೈಟಿಂಗ್`ನಲ್ಲಿಯೇ ಇರಬೇಕು. ಮೊದಲು ಪ್ರತಿಭಟನೆ ಕೈಬಿಟ್ಟು ಎದ್ದೇಳಬೇಕು. ಸುದೀಪ್ ಅವರನ್ನು ಕರೆಸಿಕೊಳ್ಳುವುದಿಲ್ಲ, ನಾನೇ ಅವರ ಮನೆಗೆ ಹೋಗಿ ಮಾತನಾಡುತ್ತೇನೆ. ಮಾಧ್ಯಮಗಳಲ್ಲಿ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ರವಿಚಂದ್ರನ್ ಹೇಳಿದ್ದಾರಂತೆ. ಸುದೀಪ್ ನನ್ನ ಮಗನಿದ್ದಂತೆ. ಹಾಗಂತ ಚಿತ್ರರಂಗದವರ ಒಟ್ಟಿಗೆ ನಿಲ್ಲಲ್ಲ ಎನ್ನುವುದಿಲ್ಲ. ಸುದೀಪ್ ತಪ್ಪು ಮಾಡಿದ್ದರೆ ಆತನಿಗೂ ಬುದ್ದಿ ಹೇಳುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರಂತೆ ರವಿಚಂದ್ರನ್. ಕುಮಾರ್ ಅವರೂ ಕೂಡಾ ರವಿಚಂದ್ರನ್ ಅವರಿಗೆ ಎಲ್ಲ ದಾಖಲೆಗಳನ್ನೂ ತೋರಿಸಿದ್ದಾರಂತೆ.
ಇಲ್ಲಿ ಏನೇನು ಆಗಿದೆ ಅಂತ ಸುದೀಪ್ಗೂ ಕುಮಾರ್ಗೂ ಗೊತ್ತಿರತ್ತೆ. ಏನು ನಡೆದಿದೆ ಅಂತ ಅವರಿಬ್ಬರಿಗೆ ಗೊತ್ತಿದೆ. ಇದು ಈಗ ಕೋರ್ಟ್ಗೆ ಹೋಗಿದೆ. ನಿರ್ಮಾಪಕರು, ನಟರು ಚಿತ್ರರಂಗಕ್ಕೆ ಕಂಬಗಳ ರೀತಿ ತರ. ರವಿಚಂದ್ರನ್ ಅವರು ನನ್ನ ಜೊತೆ ಮಾತನಾಡಿ ಅಂತ ಹೇಳಿರೋದು ಅವರ ದೊಡ್ಡತನ. . ನಾವು ಎಲ್ಲರಿಗೂ ಗೌರವ ಕೊಡಬೇಕು, ಮಾತನಾಡಿ ಇದನ್ನು ಬಗೆಹರಿಸಿಕೊಳ್ಳೋಣ. ರವಿ ಸರ್ ಏನು ಹೇಳ್ತಾರೆ ಅಂತ ಕೇಳಬೇಕು. ನಾನು ಏನು ಹೇಳೋಕೆ ಆಗಲ್ಲ ಎಂದಿದ್ದಾರೆ ಶಿವರಾಜ್ಕುಮಾರ್ ವಿವಾದವನ್ನೀಗ ಯಾರು ಇತ್ಯರ್ಥ ಮಾಡುತ್ತಾರೆ ಎನ್ನುವುದೇ ಕುತೂಹಲ.
ವಿಚಿತ್ರ ಎನಿಸಿರುವುದು ಇಷ್ಟೇ. ಸುದೀಪ್ ರವಿಚಂದ್ರನ್ ಅವರಿಗೆ ಮಗನಿದ್ದಂತೆ. ಸುದೀಪ್ ಅವರೂ ತಂದೆಗೆ ಕೊಡುವ ಗೌರವವನ್ನೇ ರವಿಚಂದ್ರನ್ ಅವರಿಗೆ ಕೊಡ್ತಾರೆ. ಇನ್ನು ಶಿವಣ್ಣ ಅವರ ಜೊತೆ ಸ್ನೇಹ ಇಟ್ಟುಕೊಂಡಿರುವ ಸುದೀಪ್, ಗೀತಾ ಅವರನ್ನು ಬಾಯ್ತುಂಬಾ ಕರೆಯೋದು ಗೀತಕ್ಕ ಎಂತಲೇ. ಹೀಗಿರುವ ಬಾಂಧವ್ಯದ ಮಧ್ಯೆ ಕುಮಾರ್ ವಿವಾದ ಬಂದಿದೆ.



