ಯಾರೋ ಹುಡುಗಿ.. ಆ ಹುಡುಗಿ ಏನೋ ವಿಡಿಯೋ ರೀಲ್ಸ್ ಮಾಡಿಕೊಂಡು ಇದ್ದಾಳೆ. ಆಕೆಯ ಮುಖಕ್ಕೆ ಖ್ಯಾತ ನಟಿಯ ಫೋಟೋ ಅಟ್ಯಾಚ್ ಮಾಡಿಬಿಟ್ಟರೆ.. ಆಯ್ತಲ್ಲ, ಮಾನ ಮರ್ಯಾದೆ ಮೂರಾಬಟ್ಟೆ ಮಾಡಿಹಾಕ್ತಾರೆ. ಅಂತದ್ದೇ ಈಗ ರಶ್ಮಿಕಾ ಮಂದಣ್ಣ (Rashmika mandanna) ಅವರಿಗೂ ಎದುರಾಗಿದೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ಮಾರ್ಫಿಂಗ್ ಮಾಡಿದ ನಕಲಿ ವಿಡಿಯೋವೊಂದು (marfing video) ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ರಶ್ಮಿಕಾ ಅವರನ್ನು ಸಖತ್ ಬೋಲ್ಡ್ ಆಗಿ ಕಾಣಿಸುವಂತೆ ತೋರಿಸಲಾಗಿದೆ.ಆದರೆ ಏನೂ ಗೊತ್ತಿಲ್ಲದವರು ಅದು ರಶ್ಮಿಕಾ ಮಂದಣ್ಣ ಅವರದ್ದೇ ವಿಡಿಯೋ ಎಂದು ನಂಬಿಕೊಂಡಿದ್ದಾರೆ. ಆದರೆ ಇದು ರಶ್ಮಿಕಾಗೆ ಸಂಬಂಧಿಸಿದ ವಿಡಿಯೋ ಅಲ್ಲ. ಅದು ನಕಲಿ ವಿಡಿಯೋ.
ಈಗ ಏನಿದ್ರೂ ಎಲ್ಲರ ಎಐ ಜಗತ್ತು (artificial inteligence). ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ಮೂಲಕ ಈಗ ಬಹಳ ಪರಿಣಾಮಕಾರಿಯಾಗಿ ಸೈಬರ್ ಜಗತ್ತಿನಲ್ಲಿ ದಾಪುಗಾಲು ಇಡುತ್ತಿದೆ. ಅದಕ್ಕೆ ತುತ್ತಾಗಿರುವ ನಟಿ ರಶ್ಮಿಕಾ ಮಂದಣ್ಣ. ಸದ್ಯ ಈಗ ವೈರಲ್ ಆಗಿರುವ ರಶ್ಮಿಕಾರ ವಿಡಿಯೋದ ಅಸಲಿಯತ್ತೇನೂ ಅಂದರೆ, ಆ ವಿಡಿಯೋದಲ್ಲಿ ಇರುವುದು ರಶ್ಮಿಕಾ ಅಲ್ಲ. ಆಂಗ್ಲೋಇಂಡಿಯನ್ ಆಗಿರುವ, ವಿದೇಶದಲ್ಲಿ ವಾಸ ಮಾಡ್ತಿರುವ ಝಾರಾ ಪಟೇಲ್ (Zara patel) ಎಂಬ ಮಹಿಳೆ. ಕಳೆದ ತಿಂಗಳು ಲಿಫ್ಟ್‌ನೊಳಗೆ ಎಂಟ್ರಿ ನೀಡುತ್ತಿರುವ ಈ ವಿಡಿಯೋವನ್ನು ಝಾರಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ರು. ಆದರೆ ಡೀಪ್‌ಫೇಕ್ ಎಡಿಟಿಂಗ್ ಮೂಲಕ ಝಾರಾ ಮುಖಕ್ಕೆ ರಶ್ಮಿಕಾ ಅವರ ಫೇಸ್ ಅನ್ನು ಬಳಸಲಾಗಿದೆ. ‘ಆರ್ಟಿಫಿಷಿಯಲ್ ಇಂಟಲಿಜೆನ್ಸ್’ ತಂತ್ರಜ್ಞಾನದಿಂದಾಗಿ ಮುಖದ ಹಾವಭಾವ ಎಲ್ಲವನ್ನೂ ಈಗ ಬದಲಾಯಿಸಬಹುದಾಗಿದೆ.
ಈ ವಿಡಿಯೋವನ್ನು ರೀ-ಟ್ವೀಟ್ ಮಾಡಿರುವ ಬಾಲಿವುಡ್ ಬಿಗ್‌ಬಿ ಅಮಿತಾಭ್ ಬಚ್ಚನ್ (amithabh bachchan) ಅವರು ಕೂಡ ಸಖತ್ ಗರಂ ಆಗಿದ್ದಾರೆ. ‘ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅಮಿತಾಭ್ ಬಚ್ಚನ್ ಆಗ್ರಹಿಸಿದ್ದಾರೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ.
ನನ್ನ ಫೇಕ್ ವಿಡಿಯೋ ಆನ್‌ಲೈನ್‌ನಲ್ಲಿ (fake video viral) ವೈರಲ್ ಆಗಿರುವ ಬಗ್ಗೆ ನನಗೆ ನಿಜವಾಗಿಯೂ ಹರ್ಟ್ ಆಗಿದೆ. ಈ ಬಗ್ಗೆ ನಾನು ಮಾತನಾಡಲೇಬೇಕಾಗಿದೆ. ಇಂದು ನಾನೊಬ್ಬಳೇ ಅಲ್ಲ, ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಎಲ್ಲರೂ ಕೂಡ ಇಂದಿನ ತಂತ್ರಜ್ಞಾನ ಮಿಸ್ ಯೂಸ್ ಆಗುವ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿಜವಾಗಿಯೂ ಬಂದಿದೆ. ನಮಗೆ ಯಾರಿಂದ, ಎಲ್ಲಿಂದ ತೊಂದರೆಗಳು ಸೃಷ್ಟಿಯಾಗಬಹುದು ಎಂಬುದನ್ನು ಈ ತಂತ್ರಜ್ಞಾನದ ಯುಗದಲ್ಲಿ ಹೇಳುವುದೇ ಕಷ್ಟಕರವಾಗಿದೆ. ಇಂದು ನಾನೊಬ್ಬಳು ಮಹಿಳೆಯಾಗಿ, ಒಬ್ಬಳು ನಟಿಯಾಗಿ ಈ ಬಗ್ಗೆ ನನ್ನ ಫ್ಯಾಮಿಲಿ, ಫ್ರಂಡ್ಸ್ ಹಾಗೂ ನಿನ್ನ ಹಿತೈಷಿಗಳಿಗೆ ನನ್ನ ಪರವಾಗಿ, ನನ್ನ ರಕ್ಷಣೆಗೆ ನಿಂತಿರುವುದಕ್ಕೆ ಥ್ಯಾಂಕ್ಸ್ ಹೇಳುತ್ತೇನೆ. ಆದರೆ, ಈ ಘಟನೆ ನನ್ನ ಸ್ಕೂಲ್ ಅಥವಾ ಕಾಲೇಜಿನಲ್ಲಿ ನಡೆದಿದ್ದರೆ ನಾನು ಆಗ ಇಂತಹ ಮಾನ ಹರಾಜಿನ ಘಟನೆಯನ್ನು ಹೇಗೆ ತೆಗೆದುಕೊಳ್ಳುತ್ತಿದ್ದೆ ಎಂದು ಯೋಚಿಸಿದರೆ ಅದನ್ನೀಗ ನಾನು ಊಹಿಸಲೂ ಅಸಾಧ್ಯ. ಆದರೆ, ನಾವೆಲ್ಲರೂ ಸೇರಿ ಇಂಥಹ ವೈಯಕ್ತಿಕ ತೇಜೋವಧೆಯ ಕೃತ್ಯ ಹಾಗೂ ದುಃಷ್ಪರಿಣಾಮಗಳನ್ನು ಸಾಮೂಹಿಕವಾಗಿ ಖಂಡಿಸಬೇಕಿದೆ’ ಎಂದು ನಟಿ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ, ನಟಿ ರಶ್ಮಿಕಾ ಮಂದಣ್ಣ ತಮ್ಮ ವಿರುದ್ಧ ನಡೆದಿರುವ ಮಾನ ಹರಾಜು ಮಾಡುವ ಸಂಚಿನಿಂದ ಬಚಾವ್ ಆಗಿದ್ದಾರೆ.



