ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇದೀಗ ಸಪ್ತಪದಿ ತುಳಿಯುತ್ತಿದ್ದಾರೆ. ನಿಶ್ಚಿತಾರ್ಥವನ್ನು ಇಬ್ಬರೂ ಅಧಿಕೃತವಾಗಿ ಬಹಿರಂಗಪಡಿಸಿರಲಿಲ್ಲ. ಮದುವೆಗೆ ಕೆಲವೇ ದಿನಗಳ ಮುನ್ನ ಮದುವೆ ವಿಚಾರವನ್ನು ಹೇಳಿಕೊಂಡಿದ್ದ ಇಬ್ಬರೂ ರಾಜಸ್ತಾನದಲ್ಲಿ ಮದುವೆ ಆಗ್ತಿದ್ದಾರೆ. ವಿಶೇಷ ಎಂದರೆ ಈ ಮದುವೆಗೆ ಅವರು ಚಿತ್ರರಂಗಕ್ಕೆ ತಮ್ಮನ್ನು ಕರೆತಂದವರನ್ನೇ ಕರೆದಿಲ್ಲ
ರಶ್ಮಿಕಾ ಮಂದಣ್ಣ ಅವರು ತಮ್ಮ ಮದುವೆಯ ಆಹ್ವಾನವನ್ನು ಕನ್ನಡ ಚಿತ್ರರಂಗದ ಕೆಲವೇ ಕೆಲವು ಮಂದಿಗೆ ಮಾತ್ರ ನೀಡಿದ್ದಾರೆ.ರಶ್ಮಿಕಾ ಮದುವೆಗೆ ಅತ್ಯಾಪ್ತರು, ಸ್ನೇಹಿತರು ಸೇರಿ 100 ಮಂದಿಗಷ್ಟೇ ಆಹ್ವಾನ ನೀಡಲಾಗಿದೆಯಂತೆ. ವಿಜಯ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ ಪೆಳ್ಳಿ ಚೂಪುಲು ಚಿತ್ರದ ನಿರ್ದೇಶಕ ತರುಣ್ ಭಾಸ್ಕರ್ ಮದುವೆಗೆ ಬರುತ್ತಿದ್ದಾರೆ. ಆದರೆ ರಶ್ಮಿಕಾ ಅವರನ್ನು ಪರಿಚಯಿಸಿದ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಆಹ್ವಾನ ಇಲ್ಲ. ನಟರಾದ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್, ಧ್ರುವ ಸರ್ಜಾ, ಗಣೇಶ್, ರವಿಚಂದ್ರನ್, ನಿರ್ದೇಶಕರಾದ ಎ ಹರ್ಷ, ನಂದ ಕಿಶೋರ್, ಸಿಂಪಲ್ ಸುನಿ ಅವರಿಗೆ ಆಹ್ವಾನ ನೀಡಲಾಗಿದೆ.
ರಶ್ಮಿಕಾ ತಮ್ಮ ಕಿರಿಕ್ ಪಾರ್ಟಿ ಚಿತ್ರತಂಡವನ್ನು ಹೊರತುಪಡಿಸಿ, ಮಿಕ್ಕೆಲ್ಲರಿಗೂ ಆಹ್ವಾನ ನೀಡಿದ್ದಾರೆ ಎನ್ನುವುದು ವಿಶೇಷ. ಒಂದು ಬಾರಿ ಕೊಡವರ ಶೈಲಿಯಲ್ಲಿ, ಇನ್ನೊಂದು ಬಾರಿ ಹೈದರಾಬಾದಿ ಶೈಲಿಯಲ್ಲಿ ಮದುವೆ ನಡೆಯಲಿದೆ. ಆನಂತರ ಹೈದರಾಬಾದಿನಲ್ಲಿ ಒಮ್ಮೆ ಹಾಗೂ ಕೊಡಗಿನಲ್ಲಿ ಒಮ್ಮೆ ಆರತಕ್ಷತೆಯೂ ನಡೆಯಲಿದೆ.



