ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಈಗ ಸತಿಪತಿಗಳು. ರಾಜಸ್ತಾನದಲ್ಲಿ ಕೊಡವ ಶೈಲಿಯಲ್ಲಿ ಒಮ್ಮೆ, ತೆಲುಗು ಶೈಲಿಯಲ್ಲಿ ಒಮ್ಮೆ ಸತಿಪತಿಗಳಾಗಿದ್ದಾರೆ. ಮದುವೆಯನ್ನು ಹೊರಜಗತ್ತಿಗೆ ಸಾರುವ ವೇಳೆ ಇಬ್ಬರೂ ತಮ್ಮ ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡಿದ್ದಾರೆ. ಗೀತಗೋವಿಂದಂ ಚಿತ್ರದ ಚಿತ್ರೀಕರಣ ವೇಳೆ ಇಬ್ಬರಿಗೂ ಪರಿಚಯವಾಯ್ತು. ಸ್ನೇಹವಾಯ್ತು. ಅದಾದ ನಂತರ ಫ್ರೆಂಡ್ಸ್ ಆಗಿ ಕಂಟಿನ್ಯೂ ಆಗಿದ್ದ ವಿಜಯ್ ದೇವರಕೊಂಡಗೆ ಒಂದು ದಿನ ರಶ್ಮಿಕಾ ನೆನಪು ಕಾಡೋಕೆ ಶುರುವಾಗಿದೆ.
ಒಂದು ದಿನ ನನಗೆ ರಶ್ಮಿಕಾ ಮಂದಣ್ಣ ನೆನಪು ವಿಪರೀತವಾಗಿ ಕಾಡೋಕೆ ಶುರುವಾಯ್ತು. ಅವಳು ನನ್ನ ಜೊತೆಯಲ್ಲೇ ಇದ್ದಿದ್ದರೆ ಈ ದಿನ ಇನ್ನೂ ಚೆನ್ನಾಗಿರುತ್ತಿತ್ತು ಅನ್ನಿಸುತ್ತಿತ್ತು. ಅವಳು ನನ್ನ ಎದುರು ಕುಳಿತಿದ್ದರೆ ನನ್ನ ಊಟ ಹೆಚ್ಚು ರುಚಿಯಾಗಿರುತ್ತಿತ್ತು. ನಾನು ಎಲ್ಲೇ ಇರಲಿ, ನನ್ನಲ್ಲಿ ಒಂದು ಶಾಂತಿ ಭಾವನೆ ಮೂಡಲು ಅವಳು ಬೇಕೇ ಬೇಕು. ಅದಕ್ಕಾಗಿಯೇ, ನನ್ನ ಪ್ರಿಯ ಗೆಳತಿಯನ್ನೇ ನನ್ನ ಹೆಂಡತಿಯನ್ನಾಗಿಸಿಕೊಂಡೆ ಎಂದು ವಿಜಯ್ ಬರೆದುಕೊಂಡಿದ್ದಾರೆ.
ಇತ್ತ ರಶ್ಮಿಕಾ ಕೂಡಾ ಪತಿ ವಿಜಯ್ ದೇವರಕೊಂಡ ಅವರ ಬಗ್ಗೆ ದೊಡ್ಡ ಕನಸು ಕಾಣಬೇಕು ಎಂದು ಹೇಳಿಕೊಟ್ಟ ವ್ಯಕ್ತಿ ಎಂದು ಬರೆದುಕೊಂಡಿದ್ದಾರೆ. ನನ್ನ ಗಂಡನನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ಮಿಸ್ಟರ್ ವಿಜಯ್ ದೇವರಕೊಂಡ. ನನಗೆ ನಿಜವಾದ ಪ್ರೀತಿ ಹೇಗಿರುತ್ತದೆ ಎಂಬುದನ್ನು ಕಲಿಸಿದ ವ್ಯಕ್ತಿ. ಶಾಂತಿಯಿಂದ ಇರುವುದು ಹೇಗೆಂದು ಕಲಿಸಿದ ವ್ಯಕ್ತಿ, ದೊಡ್ಡ ಕನಸು ಕಾಣಬೇಕು ಎಂದು ನನಗೆ ಪ್ರತಿದಿನ ಹೇಳುತ್ತಿದ್ದ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ.



