ಪುನೀತ್ ರಾಜ್ ಕುಮಾರ್ ಅವರ ಅಪ್ಪು ಚಿತ್ರ ಈಗ ಎಲ್ಲೆಡೆ ತುಂಬಿದ ಗೃಹಗಳಲ್ಲಿ ಪ್ರದರ್ಶನವಾಗುತ್ತಿದೆ. ಪುನೀತ್ ರಾಜ್ ಕುಮಾರ್ ಅವರು ನಾಯಕರಾಗಿ ನಟಿಸಿದ ಮೊದಲ ಚಿತ್ರ ಅಪ್ಪು. ಬದುಕಿದ್ದರೆ 50 ವರ್ಷವಾಗುತ್ತಿತ್ತು. ಅಪ್ಪು ಚಿತ್ರ ರೀ-ರಿಲೀಸ್ ಆಗಿದೆ. ಚಿತ್ರವನ್ನು ಬಹುತೇಕ ಅಪ್ಪು ಚಿತ್ರತಂಡ ಸ್ವಾಗತಿಸಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರೊಂದಿಗೆ ಕುಳಿತು ನೋಡಿ ಆನಂದಿಸಿದೆ. ಇದೀಗ ಅಪ್ಪು ಅವರ ಸೂಪರ್ ಹಿಟ್ ಜೋಡಿಗಳಲ್ಲಿ ಒಬ್ಬರಾಗಿದ್ದ ರಮ್ಯಾ ಕೂಡಾ ಚಿತ್ರಮಂದಿರಕ್ಕೆ ಬಂದು ಅಪ್ಪು ಸಿನಿಮಾ ನೋಡಿದ್ದಾರೆ. ರಮ್ಯಾ ಅವರೊಂದಿಗೆ ಯುವರಾಜ್ ಕುಮಾರ್, ವಿನಯ್ ಕೂಡಾ ಸಿನಿಮಾ ನೋಡಿರುವುದು ವಿಶೇಷ.
ಅಪ್ಪು ಚಿತ್ರಕ್ಕೆ ನಾಯಕ ನಟಿ ರಕ್ಷಿತಾ. ಆರಂಭದಲ್ಲಿ ರಮ್ಯಾ ಅವರೇ ನಾಯಕಿಯಾಗಬೇಕಿತ್ತಂತೆ. ಆದರೆ ಪಾರ್ವತಮ್ಮನವರ ಕಮಿಟ್ʻಮೆಂಟ್ ರಕ್ಷಿತಾ ನಾಯಕಿಯಾದರು. 2ನೇ ಚಿತ್ರ ಅಭಿ ಮೂಲಕ ಮತ್ತೆ ಪುನೀತ್ ಅವರ ಚಿತ್ರದಿಂದಲೇ ರಮ್ಯಾ ನಾಯಕಿಯಾಗಿ ಎಂಟ್ರಿ ಕೊಟ್ಟರು. ಅಪ್ಪು ರಕ್ಷಿತಾ ಜೋಡಿಯನ್ನು ನೋಡಿ ರಮ್ಯಾಭಾವುಕರಾಗಿದ್ದಾರೆ.
ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕುಳಿತು ಅಪ್ಪು ಸಿನಿಮಾ ನೋಡಿದ ರಮ್ಯಾ‘23 ವರ್ಷಗಳ ಹಿಂದೆ ಅಪ್ಪು ಸಿನಿಮಾ ರಿಲೀಸ್ ಆದಾಗ ನಾನು ಥಿಯೇಟರ್ಗೆ ಬಂದಿದ್ದೆ. ಈಗ ಮತ್ತೆ 23 ವರ್ಷ ಆದ ಮೇಲೆ ಅಪ್ಪು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದೇನೆ. ಆ ದಿನಗಳೆಲ್ಲ ನೆನಪಾಗುತ್ತಿವೆ. ತುಂಬ ಖುಷಿ ಆಗುತ್ತಿದೆ. ಆಗ ಫ್ಯಾನ್ಸ್ ಜೊತೆ ಸಿನಿಮಾ ನೋಡಿದಾಗಲೂ ಇದೇ ರೀತಿ ಎನರ್ಜಿ ಇತ್ತು. ತಾಲಿಬಾನ್ ಅಲ್ಲ ಅಲ್ಲ ಹಾಡಿಗೆ ಆಗಲೂ ಇದೇ ರೀತಿ ಡ್ಯಾನ್ಸ್ ಮಾಡುತ್ತಿದ್ದರು. ನಾನು ಕೂಡ ಆಗ ಓರ್ವ ಅಭಿಮಾನಿಯಾಗಿ ಕುಳಿತು ಸಿನಿಮಾ ನೋಡಿದ್ದೆ. ಈಗಲೂ ಅಭಿಮಾನಿಗಳಲ್ಲಿ ಅದೇ ಉತ್ಸಾಹ ಕಾಣಿಸುತ್ತಿದೆ’ ಎಂದು ಹೇಳಿದ್ದಾರೆ.
ರಕ್ಷಿತಾ ಅವರನ್ನು ಹೊಗಳಿದ ರಮ್ಯಾ ಆಗ ನನ್ನ ಮತ್ತು ರಕ್ಷಿತಾ ನಡುವೆ ಆರೋಗ್ಯಕರ ಸ್ಪರ್ಧೆ ಇತ್ತು ಎಂದ ರಮ್ಯಾ ʻಈ ರೀತಿಯ ಅಭಿಮಾನಿಗಳನ್ನು ಪಡೆಯುವುದಕ್ಕೆ ನಿಜಕ್ಕೂ ಅಪ್ಪು ಪುಣ್ಯ ಮಾಡಿದ್ದರು. ಅಪ್ಪು ಅಭಿಮಾನಿಗಳ ಪ್ರೀತಿ, ಅಭಿಮಾನ, ನಿಯತ್ತು ಬದಲಾಗಿಲ್ಲʼ ಎಂದು ಹೊಗಳಿದ್ದಾರೆ.
ರಮ್ಯಾ ಅವರ ಜೊತೆ ಯುವ ರಾಜ್ ಕುಮಾರ್ ಹಾಗೂ ವಿನಯ್ ರಾಜ್ ಕುಮಾರ್ ಕೂಡಾ ಅಪ್ಪು ಸಿನಿಮಾವನ್ನು ವೀರೇಶ್ ಚಿತ್ರಮಂದಿರದಲ್ಲಿಯೇ ನೋಡಿದ್ದಾರೆ. ಇದೂ ಕೂಡಾ ಅಭಿಮಾನಿಗಳನ್ನು ಪುಳಕಗೊಳಿಸಿದೆ. ಮಾರ್ಚ್ 18, ಪುನೀತ್ ಹುಟ್ಟುಹಬ್ಬವಾದರೆ, ಮಾರ್ಚ್ 14, ಅಶ್ವಿನಿ ಅವರ ಹುಟ್ಟುಹಬ್ಬ.
ಇನ್ನು ನಟಿ ರಮ್ಯಾ 23 ವರ್ಷಗಳ ಹಿಂದೆ ನಾನು ಅಪ್ಪು ಸಿನಿಮಾ ನೋಡಿದಾಗ ಇದ್ದ ಕ್ರೇಜ್ ಈಗಲೂ ಹಾಗೇ ಇದೆ. ನನಗೆ ಅಭಿಮಾನಿಗಳ ಜೊತೆಗೆ ಕುಳಿತುಕೊಂಡು ಸಿನಿಮಾ ನೋಡಿದ್ದು ಬಹಳ ಖುಷಿ ಕೊಟ್ಟಿದೆ. ಫ್ಯಾನ್ಸ್ಗಳಲ್ಲಿ ಇರೋ ಒಂದು ಎನರ್ಜಿ, ಅವರು ತೋರಿಸುವಂತಹ ಪ್ರೀತಿ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಅಭಿಮಾನಿಗಳ ಕ್ರೇಜ್ ನೋಡಿ ನನಗೆ ನಿಜಕ್ಕೂ ಶಾಕ್ ಆಯ್ತು. ಆದ್ರೆ ಅಪ್ಪುನ ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ ಎಂದು ಹೇಳಿದ್ದಾರೆ.



