ನಟಿ ರಮ್ಯಾ ಅವರು ಅದೇಕೋ ಏನೋ ಮದುವೆ ಆಗಿಲ್ಲ. ರಮ್ಯಾ ಅವರಿಗೀಗ 42 ವರ್ಷ. ಹೀಗಾಗಿಯೇ ನಟಿ ರಮ್ಯಾ ಅವರು ಸಿಕ್ಕಾಗಲೆಲ್ಲ ಪತ್ರಕರ್ತರು ಮದುವೆ ಯಾವಾಗ ಮೇಡಂ ಅಂತಾ ಕೇಳ್ತಾನೇ ಇರ್ತಾರೆ. ನೋಡೋಣ.. ಅಂತ ಹೇಳಿ ಸಾಗಹಾಕುತ್ತಿದ್ದ ರಮ್ಯಾಗೂ ಈಗ ವಯಸ್ಸಾಗಿದೆ. ಮದುವೆ ಆಗಿಲ್ಲ. ಸಿಂಗಲ್.
ಅಂತಹರಿಗೆ ಈಗ ಅವರಿಗೆ ಮದುವೆ ಆಗಬೇಕು ಅನ್ನಿಸಿದೆಯಂತೆ. ನಾನೂ ಈಗ ಪ್ರೀತಿಯಲ್ಲಿ ಬೀಳಬೇಕು.. ನನಗೂ ಒಂದು ಮದುವೆ ಬೇಕು ಅನ್ನಿಸೋಕೆ ಶುರುವಾಗಿದೆ. ವಿದೇಶವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ರಮ್ಯಾ ಮದುವೆ ಆಗುವ ಆಸೆ ಹೇಳಿಕೊಂಡಿದ್ದಾರೆ. ಅದಕ್ಕೆ ಕಾರಣ ಶಿವಣ್ಣ ಗೀತಾ ಎನ್ನುವುದು ವಿಶೇಷ.
ಅಂದಹಾಗೆ ರಮ್ಯಾ ಡಿಸ್ಟರ್ಬ್ ಫ್ಯಾಮಿಲಿಯ ಹುಡುಗಿ. ಜನ್ಮ ಕೊಟ್ಟ ತಂದೆ ರಮ್ಯಾ ಅವರನ್ನು, ಅವರ ತಾಯಿಯನ್ನೂ ನಡುನೀರಿನಲ್ಲಿ ಕೈಬಿಟ್ಟರು. ರಮ್ಯಾ ಅವರ ತಾಯಿ ಏಕಾಂಗಿಯಾಗಿಯೇ ಮಗಳನ್ನು ಸಾಕಿದರು. ಹೀಗಾಗಿ ರಮ್ಯಾ ಅವರಿಗೆ ಗಂಡ ಹೆಂಡತಿ ಸಂಸಾರದ ಬಗ್ಗೆ ಬೇಸರ ಮೂಡಿದ್ದರೆ ಆಶ್ಚರ್ಯ ಇಲ್ಲ. ಆದರೆ.. ಅದು ಬದಲಾಗಿರುವುದು ಗೀತಾ ಶಿವರಾಜ್ ಕುಮಾರ್ ದಾಂಪತ್ಯ ನೋಡಿ.
ʻʻಕೆಲವು ಗಂಡ ಹೆಂಡತಿಯರನ್ನು ನೋಡಿದಾಗ ಸಿಂಗಲ್ ಆಗಿರೋದೇ ಒಳ್ಳೆಯದು ಅನ್ನಿಸುತ್ತೆ. ಆದರೆ ಶಿವಣ್ಣ-ಗೀತಕ್ಕ ದಂಪತಿಯನ್ನು ನೋಡಿದಾಗ.. ನನ್ನ ಅಭಿಪ್ರಾಯ ಬದಲಾಯಿತು. ಅವರಿಬ್ಬರೂ ಸುಖ ದುಃಖ ಹಂಚಿಕೊಳ್ಳುವ ರೀತಿ, ಒಡನಾಟ, ತಮಾಷೆ, ಸ್ನೇಹಿತರಂತೆ ಇರುವುದನ್ನು ನೋಡಿ ಮನಸ್ಸು ಬದಲಾಯ್ತುʼʼ ಎಂದಿರುವ ರಮ್ಯಾ ʻಸ್ನೇಹಮಯಿ ವ್ಯಕ್ತಿತ್ವದ ಹುಡುಗ ಸಿಕ್ಕರೆ ಮದುವೆಯಾಗುವ ಮನಸ್ಸಿದೆʼ ಎಂದಿದ್ದಾರೆ ರಮ್ಯಾ.
ರಮ್ಯಾ ಈ ಮೊದಲು ಪೋರ್ಚುಗಲ್ ಹುಡುಗನೊಬ್ಬನ ಜೊತೆ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ಕೆಲವೊಂದು ಕಡೆ ಜೊತೆಯಾಗಿ ಕಾಣಿಸಿಕೊಂಡಿದ್ದರು ಕೂಡಾ. ಅದೇನಾಯ್ತೋ ಏನೋ.. ರಮ್ಯಾ ಅವರು ಆ ಹುಡುಗನ ಬಗ್ಗೆ ಈಗ ಮಾತೇ ಆಡೋದಿಲ್ಲ. ಅದಾದ ಮೇಲೆ ರಮ್ಯಾ ನಟನೆ, ರಾಜಕೀಯಗಳಲ್ಲಿ 100% ಬ್ಯುಸಿಯಾಗಿಬಿಟ್ಟರು.
ಅಂದಹಾಗೆ ರಮ್ಯಾ ಮತ್ತು ಶಿವಣ್ಣ ಒಟ್ಟಿಗೇ ನಟಿಸಿರುವುದು ಒಂದೇ ಒಂದು ಸಿನಿಮಾದಲ್ಲಿ. ಆರ್ಯನ್. ರಾಜಕೀಯಕ್ಕೆ ಬರುವ ಮುನ್ನ ರಮ್ಯಾ ನಟಿಸಿದ್ದ ಸಿನಿಮಾ. ಆದರೆ ರಮ್ಯಾ ಅವರಿಗೆ ಶಿವಣ್ಣ ಏನೂ ಹೊಸಬರಲ್ಲ. ಪುನೀತ್ ಚಿತ್ರದ ಮೂಲಕ, ಡಾ.ರಾಜ್ ಬ್ಯಾನರ್ ಮೂಲಕವೇ ಚಿತ್ರರಂಗ ಪ್ರವೇಶಿಸಿದ ರಮ್ಯಾ, ಶಿವಣ್ಣಗೆ ಪರಿಚಿತರೇ. ಒಟ್ಟಿಗೇ ನಟಿಸಿರಲಿಲ್ಲ.. ಅಷ್ಟೆ. ಅದು ಈಡೇರಿದ್ದು ರಮ್ಯಾ ರಾಜಕೀಯಕ್ಕೆ ಹೊರಟು ನಿಂತಾಗ.
ಎಲ್ಲರೂ ಶಿವಣ್ಣನ ಸರಳತೆಯ ಬಗ್ಗೆ ಹೊಗಳುತ್ತಿದ್ದರೆ.. ಇತ್ತ ರಮ್ಯಾ ಶಿವಣ್ಣ-ಗೀತಾ ದಾಂಪತ್ಯ ನೋಡಿ ಮೆಚ್ಚಿಕೊಂಡಿದ್ದಾರೆ. ಅವರಂತೆಯೇ ಬದುಕಬೇಕು ಎಂದು ಕನಸು ಕಂಡಿದ್ದಾರೆ. ಎಲ್ಲ ಓಕೆ..ರಮ್ಯಾಗೆ ಸ್ನೇಹಮಯಿ ವ್ಯಕ್ತಿತ್ವದ ಹುಡುಗ ಎಲ್ಲಿ ಸಿಗ್ತಾನೇ.. ಅದೇ ಗೊತ್ತಾಗ್ತಾ ಇಲ್ಲ. ರಮ್ಯಾಗೆ ಈಗ 42 ವರ್ಷ. ಯಾವಾಗ ಮದುವೆ ಆಗ್ತಾರೋ.. ಏನೋ..



