ನಟಿ ರಮ್ಯಾಗೆ (Ramya) ವಯಸ್ಸೇ ಆಗಲ್ವಾ.. ಇಲ್ಲ ಇಲ್ಲ ಅಂತಾರೆ ಫ್ಯಾನ್ಸ್. ಸ್ವಲ್ಪ ದಪ್ಪಗಾಗಿದ್ದಾರೆ.. ಆದರೂ.. ಬ್ಯೂಟಿಫುಲ್. ಆಕೆಯ ನಗುವಿಗೆ ಮರುಳಾದವರೆಷ್ಟೋ.. ಶರಣಾದವರೆಷ್ಟೋ.. ಜನ. ನಟಿ ರಮ್ಯಾ (Ramya) ಕನ್ನಡಿಗರ ಮೋಹಕತಾರೆ. ಸ್ಯಾಂಡಲ್`ವುಡ್ ಕ್ವೀನ್. ವಯಸ್ಸು 40 ವರ್ಷ. ಆದರೆ, ಯಾರ್ರೀ ಅದು, ರಮ್ಯಾ 40 ಅಂದವರು ಎನ್ನುವಂತೆ ರಮ್ಯಾ ಬ್ಯೂಟಿ ಮೈಂಟೇನ್ ಮಾಡಿದ್ದಾರೆ. ಇದೀಗ ಶಿವಣ್ಣ-ಡಾಲಿ ನಟನೆಯ ಚಿತ್ರವೊಂದರಲ್ಲಿ ನಟಿಸುತ್ತಿರೋ ರಮ್ಯಾ, ಸದ್ಯಕ್ಕೆ ಯೂರೋಪ್ ಪ್ರವಾಸದಲ್ಲಿದ್ದರೆ.
ಯೂರೋಪ್`ನಲ್ಲಿರುವಾಗಲೇ ಅಪ್`ಲೋಡ್ ಮಾಡಿರುವ ಒಂದು ಫೋಟೋ ಹಾಟ್ ಸೆನ್ಸೇಷನ್ ಸೃಷ್ಟಿಸಿದೆ. ಲಾಂಗ್ ಶಾರ್ಟ್ ಮಾತ್ರ ಧರಿಸಿ ರಮ್ಯಾ (DivyaSpandana) ಕೊಟ್ಟಿರುವ ಪೋಸ್ ಹದಿಹರೆಯದವರ ಎದೆ ಬಡಿತ ಹೆಚ್ಚಿಸಿದೆ. ವಾರೆ ಮೇರಾ ಲಡ್ಕಿ.. ಎಂದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಫ್ಯಾನ್ಸ್ ಪ್ರಕಾರ ರಮ್ಯಾ ನಂತರ ಕನ್ನಡದಲ್ಲಿ ಇನ್ನೊಬ್ಬ ಸ್ಟಾರ್ ಹೀರೋಯಿನ್ ಸೃಷ್ಟಿಯಾಗಿಲ್ಲ. ಕಟ್ಟರ್ ಅಭಿಮಾನಿಗಳ ಪ್ರಕಾರ ರಮ್ಯಾ ನಂತರ ಇನ್ನೊಬ್ಬ ಸುಂದರಿಯೇ ಕನ್ನಡ ಚಿತ್ರರಂಗಕ್ಕೆ ಬಂದಿಲ್ಲ. ಅಂತಹವರಿಗೆ ರಮ್ಯಾರ ಈ ಫೋಟೋ ಥ್ರಿಲ್ ಕೊಟ್ಟಿರುವುದಂತೂ ನಿಜ.
ರಮ್ಯಾ ಹಾಟ್ ಆಗಿ ಕಾಣಿಸಿಕೊಂಡಿರೋದು ಹೊಸದೇನಲ್ಲ. ಆದರೆ ರಾಜಕೀಯಕ್ಕೆ ಹೋದ ಮೇಲೆ ರಮ್ಯಾ ಇಷ್ಟೊಂದು ಹಾಟ್ ಆಗಿ ಕಾಣಿಸಿರುವುದು ಇದೇ ಮೊದಲು. ಸಂಸದೆಯೂ ಆಗಿದ್ದ ರಮ್ಯಾ, ಸ್ಥಾನಮಾನಕ್ಕೆ ತಕ್ಕ ಘನತೆ ಕಾಪಾಡಿಕೊಂಡಿದ್ದರು. ಆ ಘನತೆಗೆ ತಕ್ಕಂತೆಯೇ ವಸ್ತ್ರ ವಿನ್ಯಾಸದಲ್ಲೂ ಇದ್ದ ರಮ್ಯಾ, ರಾಜಕೀಯಕ್ಕೆ ಸೇರಿದ ನಂತರ ಇದೇ ಮೊದಲ ಬಾರಿಗೆ ಇಷ್ಟು ಹಾಟ್ ಆಗಿದ್ದಾರೆ.



