ವಿನಯ್ ರಾಜ್ ಕುಮಾರ್ ಮತ್ತು ರಮ್ಯಾ ಪ್ರೀತಿಯಲ್ಲಿದ್ದಾರಾ..? ಅವರಿಬ್ಬರೂ ಹಾಗೆ ಹೇಳಿಕೊಳ್ಳದೇ ಇದ್ದರೂ.. ಕಲ್ಪನೆ, ಗಾಸಿಪ್ಪುಗಳಂತೂ ಶುರುವಾಗಿವೆ. ರಮ್ಯಾ ಮತ್ತು ವಿನಯ್ ರಾಜ್ ಕುಮಾರ್ ಅಮೆರಿಕ ಪ್ರವಾಸದಲ್ಲಿದ್ದಾರೆ. ರಮ್ಯಾ ಅವರೇ ತಾವಿಬ್ಬರೂ ಜೊತೆಯಲ್ಲಿರುವ ಫೋಟೋ ಶೇರ್ ಮಾಡಿದ್ದಾರೆ. ಇಷ್ಟಾಗುತ್ತಿದ್ದಂತೆಯೇ ಒಂದಿಷ್ಟು ಫ್ಯಾನ್ಸ್ ಕಲ್ಪನೆಯ ಲೋಕಕ್ಕೆ ತೇಲಿ ಹೋದರು.
ಇತ್ತೀಚೆಗೆ ರಮ್ಯಾ ಮತ್ತು ವಿನಯ್.. ಇಬ್ಬರೂ ಕೆಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರು. ಅದಾದ ನಂತರ ಈಗ ಪ್ರವಾಸದಲ್ಲಿ ಒಟ್ಟಿಗೇ ಕಾಣಿಸಿದ್ದಾರೆ. ಅಷ್ಟಾಗಿದ್ದೇ ತಡ.. ಸೋಷಿಯಲ್ ಮೀಡಿಯಾ ಸೃಷ್ಟಿಕರ್ತರ ಕಲ್ಪನೆ ಮೇರೆ ಮೀರಿ ಹೋಯ್ತು. ವಿನಯ್ ಮತ್ತು ರಮ್ಯಾ ಇಬ್ಬರೂ ಲವ್ ಮಾಡ್ತಿದ್ದಾರೆ. ಡೇಟಿಂಗ್ ಮಾಡ್ತಿದ್ದಾರೆ ಅಂತೆಲ್ಲ ಪುಕಾರು ಹುಟ್ಟಿಕೊಂಡವು. ಅದಕ್ಕೆ ತಕ್ಕಂತೆ ರಮ್ಯಾ ಅವರು ದೊಡ್ಮನೆಯವರ ಜೊತೆ ತುಂಬಾ ಕ್ಲೋಸ್. ಅವರ ಕುಟುಂಬದ ಯಾವ ಕಾರ್ಯಕ್ರಮಗಳನ್ನೂ ರಮ್ಯಾ ಮಿಸ್ ಮಾಡಿಕೊಳ್ಳೋವ್ರಲ್ಲ. ಅಷ್ಟೇ ಯಾಕೆ.. ಇತ್ತೀಚೆಗೆ ರಮ್ಯಾ ಅವರ ವಿರುದ್ಧ ದರ್ಶನ್ ಫ್ಯಾನ್ಸ್ ಅಶ್ಲೀಲ ಕಮೆಂಟ್ ಹಾಕಿದಾಗ… ಶಿವಣ್ಣ, ವಿನಯ್, ಯುವ.. ಎಲ್ಲರೂ ರಮ್ಯಾ ಸಪೋರ್ಟಿಗೆ ನಿಂತಿದ್ದರು. ಜೊತೆಗೆ ಇಷ್ಟೆಲ್ಲ ಪುಕಾರುಗಳಿಗೆ ಕಾರಣ ಇಷ್ಟೇ. ರಮ್ಯಾ ವಯಸ್ಸು 42 ದಾಟಿದೆ. ಅನ್ ಮ್ಯಾರೀಡ್. ವಿನಯ್ ಕೂಡಾ 36 ವರ್ಷ. ಅವರೂ ಅವಿವಾಹಿತರೇ. ಇಬ್ಬರ ಮಧ್ಯೆ ಬರೋಬ್ಬರಿ 8 ವರ್ಷಗಳ ಗ್ಯಾಪ್ ಇದ್ದರೂ.. ಇಂತಾದ್ದೊಂದು ಗಾಸಿಪ್ ಸೃಷ್ಟಿಯಾಗಿದ್ದಂತೂ ನಿಜ.
ವಿಶೇಷ ಗೊತ್ತಿರಲಿ.. ರಮ್ಯಾ ನಟಿಸಿದ ಮೊದಲ ಸಿನಿಮಾ ಅಭಿ. ಪುನೀತ್ ರಾಜ್ ಕುಮಾರ್ ಹೀರೋ. ಆ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿದ್ದಾಗ ವಿನಯ್ ರಾಜ್ ಕುಮಾರ್ 9ನೇ ಕ್ಲಾಸ್ ಓದುತ್ತಿದ್ದರಂತೆ. ಪುನೀತ್ ಅವರು ವಿನಯ್ ಅವರಿಗೆ ಚಿಕ್ಕಪ್ಪ. ರಮ್ಯಾ ಅವರು ಪುನೀತ್ ಜೊತೆಯಲ್ಲಷ್ಟೇ ಅಲ್ಲ, ಶಿವಣ್ಣನ ಜೊತೆಯಲ್ಲೂ ಜೋಡಿಯಾಗಿ ನಟಿಸಿದ್ದಾರೆ. ಚಿಕ್ಕಪ್ಪ, ದೊಡ್ಡಪ್ಪನ ಜೊತೆ ನಟಿಸಿದ್ದವರು ಜೊತೆ ವಿನಯ್ ಮದುವೆಯಾಗ್ತಾರಾ ಎಂದೆಲ್ಲ ಕಥೆ ಹುಟ್ಟಿದ್ದವು.
ಇದಕ್ಕೆಲ್ಲ ರಮ್ಯಾ ಫುಲ್ ಸ್ಟಾಪ್ ಇಟ್ಟಿದ್ದಾರೆ.
ʻʻನಿಮ್ಮ ಕಲ್ಪನೆಗಳನ್ನು ನೋಡುತ್ತಿದ್ದರೆ ಸಿಕ್ಕಾಪಟ್ಟೆ ಫನ್ನಿಯಾಗಿರುತ್ತದೆ. ಅಷ್ಟೆಲ್ಲ ಕಲ್ಪನೆಗೆ ಬ್ರೇಕ್ ಹಾಕಿ. ವಿನಯ್ ರಾಜ್‌ಕುಮಾರ್ ನನಗೆ ತಮ್ಮನಿದ್ದಂತೆ. ಏನೇನೋ ಕಲ್ಪಿಸಬೇಡಿʼʼ ಎಂದು ಪೋಸ್ಟ್ ಹಾಕಿದ್ದಾರೆ.
ರಮ್ಯಾ ಅವರು ದೊಡ್ಮನೆಯವರ ಜೊತೆ ಅಂದಿನಿಂದಲೂ ಆತ್ಮೀಯವಾಗಿಯೇ ಇದ್ದಾರೆ. ಆದರೆ.. ಇತ್ತೀಚೆಗೆರಮ್ಯಾ ಮತ್ತು ವಿನಯ್ ರಾಜ್‌ಕುಮಾರ್ ಜತೆಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿದ್ದು, ಕೆಲವು ಸಿನಿಮಾ ಪ್ರೀಮಿಯರ್ʻಗಳಲ್ಲಿ ಜೊತೆಯಾಗಿದ್ದು.. ಅದಾದ ಮೇಲೆ ಫಾರಿನ್ ಟೂರ್ ಹೊರಟಿದ್ದು.. ಎಲ್ಲವೂ ಕಲ್ಪನೆಗೆ ಕಾರಣವಾಗಿತ್ತು. ರಮ್ಯಾ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದೇ ದೊಡ್ಮನೆ. ಪುನೀತ್ ಅವರ ಜೊತೆ ಕೊನೆಯ ದಿನಗಳವರೆಗೂ ಆತ್ಮೀಯರಾಗಿಯೇ ಇದ್ದ ರಮ್ಯಾ, ಪುನೀತ್ ನಿಧನದ ನಂತರವೂ ಆ ಕುಟುಂಬದ ಜೊತೆ ಬಾಂಧವ್ಯವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.



