ಶ್ರೀರಾಮ ಚಂದ್ರನಿಗೆ ರಾವಣ ಕೊಟ್ಟ ಕಾಟಕ್ಕಿಂತಲೂ ಹೆಚ್ಚು ಕಂಟಕಗಳು ಆಗುತ್ತಿವೆ. ಒಂದಲ್ಲ.. ಎರಡಲ್ಲ.. 500 ವರ್ಷಕ್ಕೂ ಹೆಚ್ಚು ಬೀದಿಯಲ್ಲಿದ್ದ ರಾಮಲಲ್ಲನಿಗೆ ಅಂತೂ ಇಂತೂ ಒಂದು ಗುಡಿಯಾಗಿದೆ. ಅದು ಕೇವಲ ಗುಡಿಯಲ್ಲ, ಇಡೀ ಭಾರತವೇ ಸಂಭ್ರಮಿಸುತ್ತಿದೆ. ಆದರೆ.. ವಿಘ್ನಗಳು ಮುಗಿಯುತ್ತಿಲ್ಲ.
ಅಯೋಧ್ಯೆಯಲ್ಲಿ ವೈಭವವಾಗಿ ನಿರ್ಮಾಣ ಮಾಡಲಾಗಿರುವ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜನವರಿ 22ಕ್ಕೆ ನಿಗದಿಯಾಗಿದೆ. ಇದರ ನಡುವೆ ಈ ಸಮಾರಂಭಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿ ಅಲಹಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ. ಅದೂ ಒಂದಲ್ಲ.. ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು.
ಒಂದು ಅರ್ಜಿಯ ಕಥೆ ಇದು :
ಉತ್ತರ ಪ್ರದೇಶದ ಗಾಜಿಯಾಬಾದ್‌ನ ನಿವಾಸಿ ಭೋಲಾದಾಸ್ ಈ ಅರ್ಜಿಯನ್ನು ದಾಖಲು ಮಾಡಿದ್ದಾರೆ. ಇವರು ಸಲ್ಲಿಸಿರುವ ಅರ್ಜಿಯ ಪ್ರಕಾರ, ಹಿಂದು ಕ್ಯಾಲೆಂಡರ್‌ನ ಪ್ರಕಾರ, ಪುಷ್ಯಮಾಸದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಇದನ್ನು ಮೀರಿ ಇಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಶಂಕರಾಚಾರ್ಯ ಪೀಠಗಳ ಸ್ವಾಮೀಜಿಗಳು ಕೂಡ ಇದೇ ಅಭಿಪ್ರಾಯ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಶ್ರೀರಾಮ ಮಂದಿರದ ನಿರ್ಮಾಣ ಕಾಮಗಾರಿ ಇನ್ನೂ ನಡೆಯುತ್ತಿದೆ. ಅಪೂರ್ಣ ಮಂದಿರದಲ್ಲಿ ಯಾವುದೇ ದೇವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವಂತಿಲ್ಲ. ಇದು ಸನಾತನ ಸಂಪ್ರದಾಯಕ್ಕೆ ವಿರುದ್ಧ ಎನ್ನುವುದು ಅವರ ವಾದ.


ಎರಡನೇ ಅರ್ಜಿಯ ಕಥೆ ಇನ್ನೂ ವಿಭಿನ್ನ :
ಈ ಅರ್ಜಿ ಸಲ್ಲಿಸಿರೋದು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ (ಎಐಎಲ್ʻಯು). ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಉತ್ತರ ಪ್ರದೇಶದ ಎಲ್ಲ ದೇವಸ್ಥಾನಗಳಲ್ಲಿ ರಾಮಕಥೆ, ರಾಮ ಭಜನೆ, ರಾಮಾಯಣದ ಮರುಸೃಷ್ಟಿ ಮಾಡಿಸಿ ಅಂದರೆ ನಾಟಕ ಇತ್ಯಾದಿಗಳ ಮೂಲಕ ಜನರಿಗೆ ಹೇಳಬೇಕು ಎಂದು ಅದೇಶ ಹೊರಡಿಸಿತ್ತು. ಅಷ್ಟೇ ಅಲ್ಲ, ಉತ್ತರ ಪ್ರದೇಶದ ಎಲ್ಲ ರಾಮ, ಸೀತೆ, ಹನುಮ.. ಮೊದಲಾದ ರಾಮಾಯಣದ ದೇವರುಗಳ ಎಲ್ಲ ದೇವಸ್ಥಾನಗಳಿಂದ ಅಯೋಧ್ಯೆಗೆ ಕಳಶ ತರುವಂತೆ ಸೂಚಿಸಲಾಗಿತ್ತು. ಇದೆಲ್ಲವನ್ನೂ ಯೋಗಿ ಅಧಿಕೃತವಾಗಿಯೇ ಮಾಡಿದ್ದರು. ಇದಕ್ಕಾಗಿ ಸರ್ಕಾರದಿಂದ 590 ಲಕ್ಷ (5 ಕೋಟಿ 90 ಲಕ್ಷ) ರಿಲೀಸ್ ಮಾಡಿದ್ದರು.


ಎರಡೂ ಅರ್ಜಿಗಳ ವಿಚಾರಣೆಗೆ ದಿನಾಂಕ ನಿಗದಿಯಾಗಿಲ್ಲ.



