ಈತನ ಮಾತುಗಳನ್ನು ಕೇಳುವುದಕ್ಕೆ ಆಗುವುದಿಲ್ಲ. ಕರ್ಣ ಕಠೋರವಾಗಿದೆ. ಈತ ಹೇಳೋದೇನು ಗೊತ್ತೇ..
ಶಿವಲಿಂಗ ಅಂದ್ರೆ ಶಿವನದ್ದು ಲಿಂಗ, ಶಿವನ ಪ್ರೈವೇಟ್ ಪಾರ್ಟ್. ಶಿವ ಪಾರ್ವತಿಯ ಖಾಸಗಿ ಭಾಗ ಶಿವಲಿಂಗ. ಶಿವ ತಲೆ ಮೇಲೆ ಒಂದು ಹೆಂಡತಿ, ತೊಡೆ ಮೇಲೆ ಒಂದು ಹೆಂಡತಿ ಇಟ್ಟುಕೊಂಡಿದ್ದಾನೆ, ಆದ್ರೆ ಏಸು ಹಾಗಲ್ಲ. ತಾನು ಸೃಷ್ಠಿ ಮಾಡಿದ ಮಗಳನ್ನು ಬ್ರಹ್ಮ ತೊಡೆ ಮೇಲೆ ಕೂರಿಸಿದ್ದಾನೆ. ಶ್ರೀಕೃಷ್ಣ ಪರಮಾತ್ಮ ಸಾವಿರಾರು ಹೆಣ್ಣುಮಕ್ಕಳ ಜತೆ ಮಜಾ ಮಾಡಿದ, ಆದ್ರೆ ಏಸು ಹಾಗೆ ಮಾಡಿಲ್ಲ. ಪ್ರಪಂಚದ ಜನರ ಪಾಪವನ್ನು ರಕ್ತದಿಂದ ಪರಿಹಾರ ಮಾಡಲು ಏಸು ಸ್ವಾಮಿ ಭೂಮಿಯಲ್ಲಿ ಹುಟ್ಟಿದ ಎಂದು ಹೇಳಿರುವ ಈ ಅಸಾಮಿ, ಹಿಜಡಾಗಳಿಗೆ ಅಧ್ಯಕ್ಷನಾಗಿದ್ದ ಶ್ರೀರಾಮನ ಜತೆ ವನವಾಸದಲ್ಲಿದ್ದವರು ಹಿಜಡಾಗಳೇ. ಶ್ರೀರಾಮನ ಜತೆಯಲ್ಲಿದ್ದ ಕಾರಣ ಮುಂದೆ ನೀವೇ ದೇಶವನ್ನು ಆಳ್ತೀರಿ ಎಂದು ಶ್ರೀರಾಮ ಆಶೀರ್ವಾದ ಮಾಡಿದ್ದ. ಆ ಹಿಜಡಾಗಳೇ ಇಂದು ದೇಶವನ್ನು ಆಳ್ತಿದ್ದಾರೆ.
ಹೀಗೆ ಹೇಳಿರುವವ ಹೆಸರು ಎಲಿಷಾ ಎಲಕಪಾಟಿ. ಕ್ರಿಶ್ಚಿಯನ್ (Christian). ಮತಾಂತರವಾಗಿರುವ ಕ್ರಿಶ್ಚಿಯನ್ (Converted Christian) . ಈತ ದಲಿತ ರಕ್ಷಣಾ ವೇದಿಕೆ (Dalitha Rakshana Vedike) ಮುಖಂಡನಂತೆ. ಉತ್ತರಕನ್ನಡ ಜಿಲ್ಲೆಯ ಕಾರವಾರದ ಹರಿದೇವ ನಗರದ ನಿವಾಸಿಯಾಗಿರುವ ಎಲಿಷಾ ಎಲಕಪಾಟಿ ದೂರು ದಾಖಲಿಸಿಕೊಳ್ಳುವಂತೆ ದಲಿತರೇ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈತ ಹಿಂದೂ ದೇವತೆಗಳ ಬಗ್ಗೆ ನಾಲಿಗೆ ಹರಿಯಬಿಟ್ಟು ವಿಕೃತಿ ಮೆರೆದಿದ್ದು, ಏಸುವನ್ನು ಹೊಗಳಿ ಹಿಂದೂಗಳ ದೇವಾನುದೇವತೆಗಳ ಬಗ್ಗೆ ಅತ್ಯಂತ ನಿಕೃಷ್ಟ ಪದ ಪ್ರಯೋಗ ಮಾಡಿದ್ದಾನೆ.


ಸಾಮಾಜಿಕ ಜಾಲತಾಣದಲ್ಲಿ ಈ ಅಸಾಮಿಯ ವಿಡಿಯೋ ವೈರಲ್ ಆಗುತ್ತಿದ್ದಂತೇ, ಈತ ಮೊಸಳೆ ಕಣ್ಣೀರು ಹಾಕಿ ಹಿಂದೂಗಳಲ್ಲಿ (Hindu) ಕ್ಷಮೆ ಕೇಳಿದ್ದಾನೆ. ಈ ವಿಡಿಯೋ ದುರುದ್ದೇಶಪೂರಕವಾಗಿ ಮಾಡಿದ್ದಾರೆ. ನಾನು ತಮಾಷೆಗಾಗಿ ಹೇಳಿದ್ದೇ ಹೊರತು, ಉದ್ದೇಶ ಪೂರ್ವಕವಾಗಿ ಈ ಮಾತಗಳನ್ನು ಆಡಿಲ್ಲ. ನನ್ನ ಮಾತುಗಳಿಂದ ಹಿಂದೂ (Hindoo) ಸಮಾಜಕ್ಕೆ ನೋವಾಗಿದೆ. ನನ್ನನ್ನು ಕ್ಷಮಿಸಿ ಎಂದಿದ್ದಾನೆ.
ಇನ್ನು ಈತ ದಲಿತರನ್ನು ಹಿಂದೂ ಧರ್ಮದಿಂದ ಕ್ರಿಶ್ಚಿಯನ್ (Converted Christian) ಧರ್ಮಕ್ಕೆ ಮತಾಂತರ ನಡೆಸುವ ಪ್ರಯತ್ನ ಕೂಡಾ ನಡೆಸುತ್ತಿದ್ದು, ಸಹಾಯದ ನೆಪದಲ್ಲಿ, ಅಧಿಕಾರಿಗಳ ಹೆಸರಿನಲ್ಲಿ ದಲಿತರಿಂದ ಹಣ ವಸೂಲಿ ಮಾಡುತ್ತಿರುವ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿ ಈತನ ವಿರುದ್ಧ ಕಠಿಣ ಕ್ರಮ ಕೈಗೊಂಡು ಗಡಿಪಾರು ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ



