ರಾಮ್ ಚರಣ್ ತೇಜ ಮತ್ತು ಉಪಾಸನ ಅವರ ಮಗಳು. ಹೆಸರು ಕ್ಲಿನ್ ಕ್ಲಾರಾ. ಮೆಗಾಸ್ಟಾರ್ ಚಿರಂಜೀವಿ ಮೊಮ್ಮಗಳಿಗೆ ಹೆಸರಿಟ್ಟಿದ್ದಾರೆ. ರಾಮ್ ಚರಣ್ ತೇಜ ಮತ್ತು ಉಪಾಸನಾ ಅವರ ಮೊದಲ ಮಗಳು ಕ್ಲಿನ್ ಕಾರಾ. ಏಕೋ ಹೆಸರು ಕೇಳ್ತಿದ್ರೆ, ಕ್ರಿಶ್ಚಿಯನ್ ರೀತಿ ಇದೆಯಲ್ಲ ಎಂದುಕೊಂಡರೆ, ಅದು ತಪ್ಪು. ಕ್ಲಿನ್ ಕ್ಲಾರಾ ಅವರ ಹೆಸರಿನ ಮೂಲ ಇರುವುದು ಲಲಿತಾ ಸಹಸ್ರನಾಮದಲ್ಲಿ.
ಪೂರ್ತಿ ಹೆಸರು ಕ್ಲಿನ್ ಕಾರಾ ಕೋಡಿನೆಲ. ಕೋಡಿನೆಲ ಅನ್ನೋದು ಚಿರಂಜೀವಿ ಅವರ ಕುಟುಂಬದ ಹೆಸರು. ಲಲಿತಾ ಸಹಸ್ರನಾಮದಲ್ಲಿ ಈ ಹೆಸರು ಬರುತ್ತದೆ. ಆದ್ಯಾತ್ಮ ಶಕ್ತಿಯನ್ನು ಜಾಗೃತಗೊಳಿಸಲು ಬೇಕಾಗುವ ಪರಿಶುದ್ಧತೆಯ ಶಕ್ತಿ ಮತ್ತು ಪರಿವರ್ತನೆಯ ಸಂಕೇತ ಎಂದು ಮೆಗಾ ಕುಟುಂಬ ಹೇಳಿದೆ.
ಜೂನ್ 20ರಂದು ಹೈದರಾಬಾದಿನಲ್ಲಿ ಮಗು ಜನನವಾಗಿತ್ತು. ಚೆಂಚು ಬುಡಕಟ್ಟಿನ ಬಾವ್ರಮ್ಮ ದೇವಿಯ ಆಶೀರ್ವಾದದೊಂದಿಗೆ ಮಗುವಿನ ನಾಮಕರಣವಾಗಿದೆ ಎಂದು ರಾಮ್ ಚರಣ್ ತಿಳಿಸಿದ್ದಾರೆ. ಕ್ಲಿನ್ ಕಾರಾ ಎಂಬ ಹೆಸರು ಸಹಸ್ರನಾಮದಲ್ಲಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಸಹಸ್ರನಾಮದಲ್ಲಿ ಈ ಪದ ಎಲ್ಲಿ ಬರುತ್ತದೆ ಎಂಬ ಹುಡುಕಾಟವೂ ಶುರುವಾಗಿದೆ.
ಲಲಿತಾ ಸಹಸ್ರನಾಮ ಎಂಬುದು ದೇವಿಯ ಹೆಸರನ್ನು ಸಾವಿರ ವಿಧಗಳಲ್ಲಿ ಪಠಿಸುವ ಮಂತ್ರ. ಲಲಿತಾ ಸಹಸ್ರನಾಮ ಸ್ತೋತ್ರಮ್ ಲಲಿತಾ ದೇವಿಗೆ ಸಮರ್ಪಿತವಾದ ಪವಿತ್ರ ಮತ್ತು ಶಕ್ತಿಯುತ ಸ್ತೋತ್ರ. ಲಲಿತಾ ದೇವಿಯನ್ನು ತ್ರಿಪುರ ಸುಂದರಿ ಅಥವಾ ಷೋಡಶಿ ಎಂದೂ ಕರೆಯುತ್ತಾರೆ. ‘ಸಹಸ್ರ’ ಎಂದರೆ ಸಾವಿರ ಮತ್ತು ‘ನಾಮ’ ಎಂದರೆ ಹೆಸರು. ಇದು ಲಲಿತಾ ದೇವಿಯ 1000 ಹೆಸರುಗಳನ್ನು ಒಳಗೊಂಡಿದೆ, ಪ್ರತಿಯೊಂದೂ ಅವಳ ದೈವಿಕ ಗುಣಗಳು ಮತ್ತು ಗುಣಲಕ್ಷಣಗಳನ್ನು ವ್ಯಾಖ್ಯಾನಿಸುತ್ತದೆ. ಲಲಿತಾ ಸಹಸ್ರನಾಮ ಸ್ತೋತ್ರಂ 18 ಪುರಾಣಗಳಲ್ಲಿ ಒಂದಾದ ಬ್ರಹ್ಮಾಂಡ ಪುರಾಣ ಎಂಬ ಪ್ರಾಚೀನ ಹಿಂದೂ ಪಠ್ಯದ ಭಾಗವಾಗಿದೆ.



