ರಕ್ಷಿತ್ ಶೆಟ್ಟಿ (Rakshith Shetty) ಎಲ್ಲಿಗೇ ಹೋದರೂ.. ರಕ್ಷಿತ್ ಶೆಟ್ಟಿಗೆ (Rakshith Shetty) ಉತ್ತರ ಕೊಡೋಕೆ ಕಷ್ಟ ಆಗುತ್ತೆ ಅನ್ನೋದು ಗೊತ್ತಿದ್ದರೂ, ಎದುರಾಗುವ ಪ್ರಶ್ನೆ ರಶ್ಮಿಕಾ ಮಂದಣ್ಣ (Rashmika mandanna) ಮತ್ತು ಅವರ ಮದುವೆಯದ್ದು. ಈ ಬಾರಿಯೂ ಹಾಗೆಯೇ ಆಗಿದೆ.
ಸಪ್ತ ಸಾಗರದಾಚೆ ಎಲ್ಲೋ (saptha sagaradache ello) ಸಿನಿಮಾ ಸಪ್ತಸಾಗರಾಲು ದಾಟಿ (sapthasagaralu daati) ಅನ್ನೋ ಹೆಸರಲ್ಲಿ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರಮೋಷನ್ ವೇಳೆ ತೆಲುಗು ಯೂಟ್ಯೂಬ್ ಚಾನೆಲ್`ವೊಂದಕ್ಕೆ (youtube channel) ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಸಂದರ್ಶನ ಕೊಟ್ಟಿದ್ದಾರೆ. ಈ ವೇಳೆ ರಕ್ಷಿತ್ ಶೆಟ್ಟಿಗೆ (Rakshith Shetty) ರಶ್ಮಿಕಾ ಮಂದಣ್ಣ (rashmika mandanna) ಬಗ್ಗೆ ಪ್ರಶ್ನೆ ಮಾಡಲಾಗಿದೆ. ಮದುವೆ, ರಶ್ಮಿಕಾ ಮಂದಣ್ಣ ಬಗ್ಗೆ ಓಪನ್ ಆಗಿ ಮತಾಡಿರೋ ರಕ್ಷಿತ್ (Rakshith Shetty) ಕೊನೆಯಲ್ಲಿ ರುಕ್ಮಿಣಿಗೆ (Rukmini vasanth) ಪ್ರಪೋಸ್ ಕೂಡ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು ರಶ್ಮಿಕಾ ಮಂದಣ್ಣ ಹಾಗೂ ನಾನು ಇಬ್ಬರೂ ಸಂಪರ್ಕದಲ್ಲಿ ಇದ್ದೇವೆ. ಅವರ ಲೈಫ್ ಚೆನ್ನಾಗಿದೆ. ಅವರು ಯಾವಾಗಲೂ ದೊಡ್ಡ ಕನಸು ಕಾಣುತ್ತಿದ್ದರು. ಅದನ್ನು ಅವರು ಅಚೀವ್ ಮಾಡುತ್ತಿದ್ದಾರೆ. ಅದಕ್ಕೆ ಅವರಿಗೆ ಯಾವಾಗಲೂ ಕ್ರೆಡಿಟ್ ಕೊಡಲೇ ಬೇಕು.” ಎಂದು ರಕ್ಷಿತ್ ಶೆಟ್ಟಿ ಸಂದರ್ಶನದಲ್ಲಿ ಹೇಳಿದ್ದಾರೆ.
ಇದೇ ವೇಳೆ ನಿರೂಪಕ ನಟಿ ರುಕ್ಮಿಣಿ ವಸಂತ್ಗೆ (Rukmini vasanth) ಪ್ರಪೋಸ್ ಮಾಡುವಂತೆ ರಕ್ಷಿತ್ ಮನವಿ ಮಾಡಿದ್ದರು. ಎರಡು ಗುಲಾಬಿ ಹೂವನ್ನು ಕೈಗೆ ಕೊಟ್ಟು ರಕ್ಷಿತ್ಗೆ ಪ್ರಪೋಸ್ ಮಾಡುವಂತೆ ಹೇಳಿದಾಗ, ನಾಚುತ್ತಲೇ ರಕ್ಷಿತ್ ನಟಿ ರುಕ್ಮಿಣಿಗೆ (Rukmini vasanth) ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರಕ್ಷಿತ್ ಶೆಟ್ಟಿಗೆ ಅದೇನೋ ಮೊದಲಿನಿಂದಲೂ ಇದು ಕಾಮನ್ ಆಗ್ಬಿಟ್ಟಿದೆ. ಅವರ ಜೊತೆ ನಟಿಸಿದ್ದ ನಟಿಯರ ಜೊತೆಯಲ್ಲೆಲ್ಲ ಲವ್ ಆಗುತ್ತೆ. ಬ್ರೇಕಪ್ಪೂ ಆಗುತ್ತೆ. ಏನೂ ಆಗದೇ ಹೋದ್ರೆ ಅಭಿಮಾನಗಳೇ ಅದನ್ನೆಲ್ಲ ಮಾಡಿಸ್ತಾರೆ. ಹಿತಶತ್ರುಗಳೂ ಅದನ್ನು ಮಾಡ್ತಾರೆ. ಈ ಬಾರಿಯೂ ಹಾಗೆಯೇ. ಅಂದಹಾಗೆ ಇದು ಸಿನಿಮಾ ಪ್ರಚಾರದ ಒಂದು ಭಾಗ ಅಷ್ಟೆ. ರಿಯಲ್ ಅಲ್ಲ, ಸದ್ಯಕ್ಕೆ.



