ಸನ್ಯಾಸಿಯಾದವರಿಗೆ ಯಾರೂ ನಮಸ್ಕರಿಸುತ್ತಾರೆ. ಅವರ ವಯಸ್ಸನ್ನು ನೋಡುವುದಿಲ್ಲ. ಚಿಕ್ಕ ಬಾಲಕನೇ ಆಗಿದ್ದರೂ ಕಾಲಿಗೆ ನಮಸ್ಕರಿಸುತ್ತಾರೆ. ಶಿರಸಾಷ್ಟಾಂಗ ನಮಸ್ಕಾರ ಮಾಡ್ತಾರೆ. ಆದರೆ ಅಂತಾದ್ದೊಂದು ನಮಸ್ಕಾರವೇ ವಿವಾದವಾದ, ಸೋಷಿಯಲ್ ಮೀಡಿಯಾದಲ್ಲಿ ಹೊಗಳಿಕೆ..ತೆಗಳಿಕೆಗೆ ಕಾರಣವಾದ ಘಟನೆ ಇದು. ನಟರೊಬ್ಬರು ತಮಗಿಂತ ಕಿರಿಯರಾದ 20 ವರ್ಷಕ್ಕೂ ಹೆಚ್ಚು ಚಿಕ್ಕ ವಯಸ್ಸಿನವರಿಗೆ ನಮಸ್ಕಾರ ಮಾಡಿದ್ದೇ ವಿವಾದವಾಗಿದ್ದು ವಿಶೇಷ.
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth), ಆಶ್ರಮ ವಾಸ ಮುಗಿಸಿ ವಾಪಸ್ ಆಗುತ್ತಿದ್ದಾರೆ. ಹಾಗೆ ವಾಪಸ್ ಆಗುವಾಗ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (UP CM Yogi Adithyanath) ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರಜನಿಕಾಂತ್ ಯೋಗಿ ಆದಿತ್ಯನಾಥ್ ಅವರ ಕಾಲಿಗೆ ನಮಸ್ಕಾರ ಮಾಡಿರುವುದು ಹಾಗೂ ಯೋಗಿ (UP CM Yogi Adithyanath) ಆಶೀರ್ವಾದ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಪ್ರತಿಟೀಕೆ ಸಮರ್ಥನೆಗಳ ಸುರಿಮಳೆಯಾಗುವಂತೆ ಮಾಡಿದೆ.
ರಜನಿಕಾಂತ್ (Super Star Rajinikanth) ಅವರ ವಯಸ್ಸು 72. ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (UP CM Yogi Adithyanath) ಅವರಿಗೆ 51 ವರ್ಷ ವಯಸ್ಸು. ವಯಸ್ಸಿನಲ್ಲಿ ಹಿರಿಯರಾಗಿರುವ ರಜನಿಕಾಂತ್ (Super Star Rajinikanth), ಯೋಗಿಯ ಕಾಲಿಗೆ ನಮಸ್ಕರಿಸಿದ್ದು ಸರಿಯಲ್ಲ. ಅವರಿಗೆ ಆಶೀರ್ವಾದವನ್ನೂ ಮಾಡುವ ಯೋಗಿ (UP CM Yogi Adithyanath) ಅವರದ್ದು ಅಹಂಕಾರದ ವರ್ತನೆ ಎನ್ನುವುದು ಯೋಗಿಯನ್ನು ಟೀಕಿಸುವವರ ವಾದ.
ಇದನ್ನು ಸಮರ್ಥನೆ ಮಾಡಿಕೊಳ್ಳುವವರ ವಾದವೇನೆಂದರೆ ಯೋಗಿ (UP CM Yogi Adithyanath) ಕೇವಲ ರಾಜಕಾರಣಿಯಲ್ಲ. ಸನ್ಯಾಸಿ. ನಾಥ ಸಂಪ್ರದಾಯದಲ್ಲಿ ಗುರು. ಗೋರಖ್‍ನಾಥ ದೇವಸ್ಥಾನದ (Gorakhnath Temple) ಅರ್ಚನೆ ಮಾಡುವ ಯೋಗಿ ಆದಿತ್ಯನಾಥ್ ಅವರು ಮಹಂತ (mahantha) ಪದವಿ ಸ್ವೀಕರಿಸಿದ್ದವರು. ಗೋರಖನಾಥ್ ಮಠದ ಪೀಠಾಧ್ಯಕ್ಷರು. ಅವರಿಗೆ ರಜನಿಕಾಂತ್ (Super Star Rajinikanth) ಅವರು ನಮಸ್ಕಾರ ಮಾಡುವುದು ಸಹಜ. ಅದರಲ್ಲಿ ತಪ್ಪೇನಿದೆ. ಸನ್ಯಾಸಿಯಾದ ವ್ಯಕ್ತಿಗೆ ಹೆತ್ತ ತಾಯಿಯೊಬ್ಬರನ್ನು ಮಿಕ್ಕವರೆಲ್ಲ ನಮಸ್ಕಾರ ಮಾಡುತ್ತಾರೆ. ತಂದೆಯೂ ಸನ್ಯಾಸಿಯಾದವರಿಗೆ ನಮಸ್ಕಾರ ಮಾಡಬೇಕು. ಹಿಂದೂ ಧರ್ಮದ ಪದ್ಧತಿ, ಸಂಪ್ರದಾಯಗಳ ಬಗ್ಗೆ ಗೊತ್ತಿಲ್ಲದೆ ಮಾತನಾಡಬೇಡಿ ಎನ್ನುವುದು ಯೋಗಿ ಸಮರ್ಥಕರ ವಾದ.
ಇದರ ಮಧ್ಯೆ (Super Star Rajinikanth) ಜೈಲರ್ (Jailor) ಸಿನಿಮಾ ಬಾಕ್ಸಾಫೀಸಿನಲ್ಲಿ ಸಂಚಲನ ಮೂಡಿಸುತ್ತಿದ್ದು, 500 ಕೋಟಿ ಕ್ಲಬ್ ಸೇರಿದೆ.



