ದಿ.ಪುನೀತ್ ರಾಜಕುಮಾರ್ (Puneeth rajkumar) ಅವರ 3ನೇ ಪುಣ್ಯತಿಥಿಯನ್ನು ರಾಜ್ಯಾದ್ಯಂತ ಅಭಿಮಾನದಿಂದ ಆಚರಿಸಲಾಗಿದೆ. ಪುನೀತ್ ಅಗಲಿಕೆಯ ನೋವನ್ನು ಅಭಿಮಾನಿಗಳು ರಕ್ತದಾನ, ಅನ್ನದಾನ ಮುಂತಾದ ಸೇವಾಕಾರ್ಯಗಳ ಮೂಲಕ ಮರೆಯಲು ಪ್ರಯತ್ನಿಸುತ್ತಿರುವುದು ವಿಶೇಷ. ಕರುನಾಡಿನ ಕೋಟ್ಯಂತರ ಮನೆಗಳಲ್ಲಿ ಪುನೀತ್ ಪುಣ್ಯಸ್ಮರಣೆ ನಡೆದಿದೆ. ಕುಟುಂಬಸ್ಥರು ಬರುವ ಮುನ್ನವೇ ನೂರಾರು ಅಭಿಮಾನಿಗಳು ಪುನೀತ್ ಸಮಾಧಿಯೆದರು ಎಡೆಯಿಟ್ಟು ಆರಾಧನೆ ಮಾಡಿದ್ಧಾರೆ.
ರಾಜ್ಯದ ಹಲವಾರು ಕಡೆಗಳಲ್ಲಿ ಪುನೀತ್ ಅವರಿಗೆ ಬಿರಿಯಾನಿ ಇಷ್ಟವೆಂಬ ಕಾರಣಕ್ಕೆ ಅಭಿಮಾನಿಗಳಿಗೆ ಬಿರಿಯಾನಿ ಊಟ ಹಾಕಿಸಿದು ವಿಶೇಷ.
ಪುನೀತ್ ರಾಜ್ಕುಮಾರ್ ಅವರ ಸಮಾಧಿಯ ಬಳಿಗೆ ಪುನೀತ್ ಅವರ ಪತ್ನಿ ಅಶ್ವಿನಿ (Ashwini Puneeth rajkumar), ಪುತ್ರಿ ವಂದಿತಾ ಸೇರಿದಂತೆ ಶಿವರಾಜ್ ಕುಮಾರ್ (shiva rajkumar), ರಾಘವೇಂದ್ರ ರಾಜ್ ಕುಮಾರ್ (raghavendra rajkumar), ಯುವ ರಾಜ್ಕುಮಾರ್ yuva rajkumar ಹಾಗೂ ಅಪ್ಪುವಿನ appu ಅಕ್ಕಂದಿರಾದ ಲಕ್ಷ್ಮಿ ಹಾಗೂ ಪೂರ್ಣಿಮಾ ಸೇರಿದಂತೆ ರಾಜ್ ಕುಟುಂಬಸ್ಥರು ಪೂಜೆಯಲ್ಲಿ ಭಾಗಿಯಾಗಿದ್ದರು.
ಶಿವರಾಜ್ ಕುಮಾರ್ ಅವರು, ಮೊದಲು ತಂದೆ ಡಾ.ರಾಜ್ ಕುಮಾರ್ ಹಾಗೂ ತಾಯಿ ಪಾರ್ವತಮ್ಮ ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಪತ್ನಿ ಸಹಿತರಾಗಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು. ಪುನೀತ್ ಅವರ ಸಮಾಧಿಗೆ ಹೋಗುವ ಮುನ್ನ ಶಿವರಾಜ್ ಕುಮಾರ್ ಅವರು, ಮೊದಲು ತಂದೆ ಡಾ.ರಾಜ್ ಕುಮಾರ್ ಹಾಗೂ ತಾಯಿ ಪಾರ್ವತಮ್ಮ ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಪತ್ನಿ ಸಹಿತರಾಗಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್ ಅವರು, ಅಭಿಮಾನಿಗಳಿಗೆ ಅಪ್ಪು ಮೇಲಿರೋ ಪ್ರೀತಿ, ವಿಶ್ವಾಸ ನೋಡಿದ್ರೆ ತುಂಬಾ ಹೆಮ್ಮೆ ಅನಿಸುತ್ತದೆ. ನಾವು ಉಳಿಸಿಕೊಂಡು ಹೋಗುತ್ತೇವೆ ಎಂದರು. ಅಪ್ಪು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಪ್ಪಾಜಿಗಿಂತಲೂ ಹೆಚ್ಚು ಹೆಸರು ಸಂಪಾದನೆ ಮಾಡಿರೋದು ಖುಷಿ ತರುತ್ತದೆ. ಆತ ಇಲ್ಲ ಅಂತ ನಮಗೆ ಅನ್ನಿಸುವುದೇ ಇಲ್ಲ. ಅಪ್ಪು ಎಲ್ಲಿಯೂ ಹೋಗಿಲ್ಲ, ಇಲ್ಲಿಯೇ ಇದ್ದಾನೆ ಎಂದು ಹೇಳಿ ಭಾವುಕರಾದರು.
ರಾಜ್ಯದ ಬೆಂಗಳೂರು, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ-ಧಾರವಾಡಿ, ಬೀದರ್, ದಾವಣಗೆರೆ, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಕೊಪ್ಪಳ, ಗದಗ, ಹಾವೇರಿ.. ಸೇರಿದಂತೆ ವಿವಿಧೆಡೆಗಳಲ್ಲಿ ನೂರಾರು ಸಂಘಟನೆಗಳು ಅಪ್ಪು ಪುಣ್ಯತಿಥಿಯನ್ನು ಭಾವನಾತ್ಮಕವಾಗಿ ಆಚರಿಸಿದರು.



