ಇದೇ ಸೆಪ್ಟೆಂಬರ್ 7 ರಂದು ಚಂದ್ರ ಗ್ರಹಣವಿದ್ದು, ಇದೇ ದಿನ ಶನಿ-ಮಂಗಳ ಸೇರಿ ಸಂಸಪ್ತಕ ಯೋಗದ ನಿರ್ಮಾಣವಾಗಲಿದೆ. ಇದು 2025ರ ಕೊನೆಯ ಚಂದ್ರಗ್ರಹಣ. ಇದಕ್ಕೂ ಒಂದು ದಿನ ಮೊದಲು ಅಂದರೆ ಸೆಪ್ಟೆಂಬರ್ 6 ರಂದು ರಾಹು ಮತ್ತು ಚಂದ್ರನು ಶನಿಯ ರಾಶಿಯಲ್ಲಿ ಸಂಯೋಗಗೊಳ್ಳಲಿದೆ. ರಾಹು ಮತ್ತು ಚಂದ್ರನ ಈ ಸಂಯೋಗದಿಂದಾಗಿ ಗ್ರಹಣ ಯೋಗದ ನಿರ್ಮಾಣವಾಗುತ್ತದೆ. ಈ ಗ್ರಹಣ ಯೋಗವು ಸೂರ್ಯ, ಚಂದ್ರ ಮತ್ತು ರಾಹು ಕೇತುಗಳು ಒಟ್ಟಾಗಿ ಅಥವಾ ಪರಸ್ಪರರ ಪ್ರಭಾವದಿಂದ ರೂಪಗೊಳ್ಳುವುದು.
ಈ ಗ್ರಹಣ ಯೋಗದ ಪರಿಣಾಮದಿಂದಾಗಿ ಕೆಲವು ವ್ಯಕ್ತಿಗಳ ಬದುಕಿನಲ್ಲಿ ಮಾನಸಿಕ ಅಸ್ಥಿರತೆ, ಭಾವನಾತ್ಮಕ ಏರಿಳಿತ, ವೃತ್ತಿ ಜೀವನದಲ್ಲಿ ಅಡೆತಡೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದಂತೆ. ಹಾಗಾಗಿ ರಾಹು, ಚಂದ್ರ ರಿಂದಾಗಿ ರೂಪಗೊಳ್ಳುವ ಈ ಅಶುಭ ಯೋಗವು ವಿಶೇಷವಾಗಿ ನಾಲ್ಕು ರಾಶಿಗೆ ಸೇರಿದ ಜನರ ಜೀವನದಲ್ಲಿ ಹಲವಾರು ಅಡೆತಡೆ, ಏರಿಳಿತ ಹಾಗೂ ಸಮಸ್ಯೆಗಳನ್ನು ಎದುರಿಸುವಂತೆ ಮಾಡಲಿದೆ.
ಮೀನ ರಾಶಿ :
ಈ ಗ್ರಹಣ ಯೋಗದ ಪ್ರಭಾವದಿಂದ ಹಣಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಲಿದೆ. ಮೀನ ರಾಶಿಗೆ ಸೇರಿದ ಜನರು ಈ ಅವಧಿಯಲ್ಲಿ ಬೇರೆಯವರ ಮುಂದೆ ಕೈ ಚಾಚುವ ಸಂದರ್ಭ ಎದುರಾಗುತ್ತದೆ. ಖರ್ಚು ಹೆಚ್ಚಾಗಿ, ಆದಾಯದ ಹರಿವು ಕಡಿಮೆಯಾಗಿ ಮಾನಸಿಕ ಗೊಂದಲ, ಸಿಟ್ಟು ಹೆಚ್ಚುತ್ತದೆ. ತಾಳ್ಮೆ, ಸಂಯಮ ವಹಿಸುವುದು ಉತ್ತಮ.
ರಾಹುವಿನ ಅಶುಭ ಪ್ರಭಾವದಿಂದಾಗಿ ಜನರು ತಮ್ಮ ಮನೆಯವರೊಂದಿಗೆ ಉತ್ತಮ ಸಮಯ ಕಳೆಯುವುದಕ್ಕೆ ತೊಡಕಾಗುತ್ತವೆ. ಆದರೆ, ಅವುಗಳನ್ನು ಮೀರುವ ಪ್ರಯತ್ನ ಜಾರಿಯಲ್ಲಿರಲಿ. ಕುಟುಂಬದೊಂದಿಗೆ, ಮಕ್ಕಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ. ಸಂಬಂಧಗಳು ಕೆಡದಂತೆ ನೋಡಿಕೊಳ್ಳಿ.
ಧನು ರಾಶಿ :
ಈ ಅವಧಿಯಲ್ಲಿ ಧನು ರಾಶಿಗೆ ಸೇರಿದ ಜನರು ಅನಗತ್ಯವಾಗಿ ಯಾವುದಾದರೂ ವಿಚಾರಗಳಿಂದ ವಿವಾದಕ್ಕೆ ಸಿಲುಕುತ್ತಾರೆ. ಜಗಳ ಮಾಡಿಕೊಳ್ತಾರೆ. ಹೊಡೆದಾಟದ ಹಂತಕ್ಕೂ ಹೋಗುತ್ತಾರೆ. ಮಾನಸಿಕವಾಗಿ ನೆಮ್ಮದಿ ಇರಲ್ಲ. ಸದಾ ಸಿಟ್ಟು, ಆಕ್ರೋಶ ಇರುತ್ತದೆ. ಬಿಪಿ ಹೆಚ್ಚಾಗುತ್ತದೆ. ಮಾತಿನ ಮೇಲೆ ಕಂಟ್ರೋಲ್ ತಪ್ಪುತ್ತಾರೆ.
ಪರಿಹಾರ ಬೇರೇನೂ ಇಲ್ಲ. ನೀವು ನಿಮ್ಮ ಮಾತಿನ ಮೇಲೆ ನಿಯಂತ್ರಣ ಇಡುವುದು ಅವಶ್ಯಕ. ಈ ಸಮಯದಲ್ಲಿ ಯಾವುದಾದರೂ ವಿಚಾರಗಳು ನ್ಯಾಯಾಲಯಕ್ಕೆ ತಲುಪುವ ಸಂಭವವಿದೆ. ಹಾಗಾಗಿ ಈ ಸಮಯದಲ್ಲಿ ಧನು ರಾಶಿಗೆ ಸೇರಿದ ಜನರು ಎಲ್ಲಾ ವಿಚಾರಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡುವುದು ಒಳ್ಳೆಯದು. ಅಳೆದು ತೂಗಿ ಮಾತನಾಡಿ.
ಮಿಥುನ ರಾಶಿ :
ಮಿಥುನ ರಾಶಿಗೆ ಸೇರಿದ ಜನರಿಗೆ ಬಹಳಷ್ಟು ಹಾನಿ ಉಂಟು ಮಾಡಬಹುದು. ರಾಹುವಿನ ಅಶುಭ ಪ್ರಭಾವ ಇರುವಾಗ ಯಾವುದೇ ರೀತಿಯ ಅಪಾಯಕಾರಿ ವಿಚಾರಗಳಿಂದ ದೂರವಿರುವುದು ಒಳ್ಳೆಯದು. ಹಾಗೆ ಹಣಕಾಸಿಗೆ ಸಂಬಂಧಿಸಿದ ವಿಚಾರಗಳಲ್ಲಿ ತಾಳ್ಮೆಯಿಂದ ಹೆಜ್ಜೆ ಇಡಿ. ಮಕ್ಕಳಿಗೆ ಸಂಬಂಧಿಸಿದ ಕೆಲವು ಚಿಂತೆಗಳು ಕಾಡುತ್ತವೆ. ಆರೋಗ್ಯವೂ ಇದರಿಂದ ಕೈಕೊಡಬಹುದು. ಕೆಲಸದ ಒತ್ತಡ ಹೆಚ್ಚಾಗಬಹುದು. ತಾಳ್ಮೆ, ಶಾಂತ ಮನಸ್ಥಿತಿಯೊಂದೇ ಪರಿಹಾರ.
ಕನ್ಯಾ ರಾಶಿ :
ವೃತ್ತಿ ಜೀವನಕ್ಕೆ ಸಂಬಂಧಪಟ್ಟ ನಿರ್ಧಾರವನ್ನು ಸ್ವಲ್ಪ ಮುಂದೂಡುವುದು ಉತ್ತಮ. . ಇಲ್ಲದಿದ್ದರೆ ಗ್ರಹಣ ಯೋಗದ ಪ್ರಭಾವದಿಂದಾಗಿ ನಿಮಗೆ ಹಾನಿ ಉಂಟಾಗುವ ಸಂಭವ ಹೆಚ್ಚು. ಕನ್ಯಾ ರಾಶಿಗೆ ಸೇರಿದ ಜನರು ರಾಹುವಿನ ಅಶುಭ ಪ್ರಭಾವದಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಂಭವ ಈ ಸಂದರ್ಭದಲ್ಲಿ ಹೆಚ್ಚಾಗಿರುವುದು. ಹಾಗಾಗಿ ಸಾಕಷ್ಟು ಕಾಳಜಿಯನ್ನು ವಹಿಸುವುದು ಅಗತ್ಯ.



