ದೊಡ್ಮನೆಯ ಒಂದೊಂದು ಫೋಟೋ, ವಿಡಿಯೋಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಅಭಿಮಾನಿಗಳ ಕಣ್ಣಲ್ಲಿ ವಿಚಿತ್ರ ಕುತೂಹಲ. ಯಾರು ಆ ಹುಡುಗಿ..
ಏಕೆಂದರೆ ಫೊಟೋ ಪೋಸ್ಟ್ ಆಗಿರುವುದು ಅಧಿಕೃತ ಖಾತೆಗಳಿಂದ. ಯುವ ರಾಜ್ ಕುಮಾರ್ ಅವರ ಖಾತೆಯಿಂದ.
ಅಪ್ಪ ಅಮ್ಮ, ಅಣ್ಣನ ಜತೆ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ ಯುವ. ಆದರೆ ದೊಡ್ಮನೆ ಅಭಿಮಾನಿಗಳು ಹುಡುಕ್ತಿರೋದು ಆ ಹುಡುಗಿ ಯಾರು ಅನ್ನೋದ್ರ ಬಗ್ಗೆ.
ಫೋಟೋದಲ್ಲಿ ಅಪ್ಪ, ಅಮ್ಮ, ಅಣ್ಣ ಹಾಗೂ ಮುದ್ದಿನ ನಾಯಿ ಮರಿಗಳ ಜತೆ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಇನ್ನು ಫೋಟೋದಲ್ಲಿ ಹುಡುಗಿ ಇರೋದನ್ನ ನೋಡಿ, ಯಾರು ಈ ಹುಡುಗಿ ಎಂದು ಪ್ರಶ್ನೆ ಕೂಡ ಇಟ್ಟಿದ್ದಾರೆ. ಮಂಗಳಮ್ಮ ಅವರ ಬರ್ತ್‌ಡೇ ಮರುದಿನ ಈ ಫೋಟೋ ಪೋಸ್ಟ್ ಮಾಡಿದ್ದಾರೆ ಯುವ. ಹುಡುಗಿ ಕ್ಯೂಟ್ ಆಗಿದ್ದಾರೆ. ಆದರೆ ಯಾರು ಅನ್ನೋದು ಗೊತ್ತಿಲ್ಲ.
ದೊಡ್ಮನೆಯವರ ಬಂಧು ಬಳಗ ದೊಡ್ಡದು. ಅವರ ಕುಟುಂಬದವರಲ್ಲೇ ಯಾರೋ ಒಬ್ಬರು ಇರಬಹುದು ಎನ್ನುವ ವಾದ ಬರ್ತಿದೆ. ಆದರೂ.. ಅನುಮಾನ ಬಗೆಹರಿಯುತ್ತಿಲ್ಲ. ಉತ್ತರ ಕೊಡಬೇಕಿರುವ ರಾಘವೇಂದ್ರ ರಾಜ್ ಕುಮಾರ್, ಯುವ ಅಥವಾ ವಿನಯ್.. ಯಾರೊಬ್ಬರೂ ಮಾತನಾಡುತ್ತಿಲ್ಲ.
ಇತ್ತೀಚೆಗೆ ಯುವ ಅವರ 2ನೇ ಚಿತ್ರದ ಹೆಸರು ರಿವೀಲ್ ಆಗಿತ್ತು. ನವೆಂಬರ್ 1 ರಂದು ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು. ಇದರ ಜೊತೆಗೆ ಸಿನಿಮಾದ ಇಂಟ್ರಸ್ಟಿಂಗ್ ಟೈಟಲ್ ಕೂಡ ರಿವೀಲ್ ಆಗಿತ್ತು. ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರ ಒಂದರಲ್ಲಿ ಬರೋ ಒಂದು ಪದವೇ ಇಲ್ಲಿ ಟೈಟಲ್ ಆಗಿದೆ. ಉತ್ತರಕಾಂಡ ಚಿತ್ರದ ಡೈರೆಕ್ಟರ್ ರೋಹಿತ್ ಪದಕಿ ಕಥೆಗೆ ಯುವರಾಜ್ ಕುಮಾರ್ ಹೀರೋ ಆಗಿದ್ದಾರೆ.
ಚಿತ್ರದ ಇತರ ತಾರಾಬಳಗದ ವಿಚಾರ ಇನ್ನು ರಿವೀಲ್ ಆಗಿಲ್ಲ. ಆದರೆ, ಅದು ಕೂಡ ಶೀಘ್ರದಲ್ಲಿಯೇ ಆಗಲಿದೆ ಅಂತಲೂ ಹೇಳಬಹುದು. ಎಕ್ಕ ಚಿತ್ರವನ್ನ ನಿರ್ಮಿಸಲು ಮೂರು ನಿರ್ಮಾಣ ಸಂಸ್ಥೆ ಜೊತೆ ಆಗಿವೆ. ಪುನೀತ್ ಅವರ ಪಿಆರ್‌ಕೆ ಸಂಸ್ಥೆ, ಜಯಣ್ಣ ಬೋಗಣ್ಣ, ಕಾರ್ತಿಕ್ ಗೌಡ ಹಾಗೂ ಯೋಗಿ ಅವರ ನಿರ್ಮಾಣ ಸಂಸ್ಥೆ; ಹೀಗೆ ಮೂರು ಬ್ಯಾನರ್‌ಗಳು ಈ ಚಿತ್ರಕ್ಕಾಗಿಯೇ ಕೈ ಜೋಡಿಸಿವೆ ಅಂತಲೇ ಹೇಳಬಹುದು.
ಹಾಗಾದರೆ ಈ ಹುಡುಗಿ ಎಕ್ಕ ಚಿತ್ರ ನಾಯಕಿ ಇರಬಹುದಾ..? ಏಕೆಂದರೆ ರೋಹಿತ್ ಪದಕಿ ಹೊಸ ಮುಖ ಎಂದು ಕ್ಲೂ ಕೊಟ್ಟಿದ್ದರು. ಸಂಪದಾ ಹೆಸರು ರಿವೀಲ್ ಆಗಿದ್ದರೂ, ಅವರು ಇಬ್ಬರು ನಾಯಕಿಯರಲ್ಲಿ ಒಬ್ಬರಷ್ಟೇ. ಹೀಗಿರುವಾಗ ಈ ಹೊಸ ಹುಡುಗಿ ಹೊಸ ಚಿತ್ರದ ನಾಯಕಿಯಾ..? ಅಥವಾ.. ದೊಡ್ಮನೆ ಕುಟುಂಬದ ಹೊಸ ಸದಸ್ಯೆಯಾ..? ಹುಡುಕಾಟ ನಿರಂತರವಾಗಿ ನಡೆಯುತ್ತಲೇ ಇದೆ. ಉತ್ತರ ಸಿಕ್ಕಿಲ್ಲ. ದೊಡ್ಮನೆ ಫ್ಯಾನ್ಸ್ ಉತ್ತರಕ್ಕಾಗಿ ಕಾಯುತ್ತಿದ್ದಾರೆ.



