ರಾಧಿಕಾ ಕುಮಾರಸ್ವಾಮಿ (Radhika kumaraswamy). ಕನ್ನಡ ಚಿತ್ರರಂಗದ ಸ್ಟಾರ್ ನಟಿ (heroine), ನಿರ್ಮಾಪಕಿ (producer). ನಿನಗಾಗಿ ಚಿತ್ರದ ಮೂಲಕ ನಾಯಕಿಯಾಗಿ ಖ್ಯಾತಿಗೆ ಬಂದ ರಾಧಿಕಾ (ಮೊದಲು ನಟಿಸಿದ ಸಿನಿಮಾ ಸೃಜನ್ ಲೋಕೇಶ್ ಜೊತೆಗಿನ ನೀಲ ಮೇಘ ಶ್ಯಾಮ ಆದರೂ, ಮೊದಲು ರಿಲೀಸ್ ಆದ ಚಿತ್ರ ನಿನಗಾಗಿ), ನಂತರ ರಾಧಿಕಾ ಕುಮಾರಸ್ವಾಮಿಯಾಗಿ Radhika kumaraswamy ಬದಲಾಗಿದ್ದು ಬೇರೆಯದೇ ಕಥೆ.
ಶಿವಣ್ಣ (Shivanna) ಜೊತೆ ತಂಗಿಯಾಗಿ, ವಿಜಯ್ ರಾಘವೇಂದ್ರ (Vijay Raghavendra), ಸೃಜನ್ ಲೋಕೇಶ್, ದರ್ಶನ್ (actor Darshan), ಉಪೇಂದ್ರ (Upendra), ಅರ್ಜುನ್ ಸರ್ಜಾ (Arjun Sarja), ಚಿರಂಜೀವಿ ಸರ್ಜಾ (chiranjeevi Sarja) ಮೊದಲಾದ ನಟರ ಜೊತೆ ನಾಯಕಿಯಾಗಿ ನಟಿಸಿ ಗೆದ್ದವರು. ಕನ್ನಡದಲ್ಲಷ್ಟೇ ಅಲ್ಲದೆ, ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿದ ರಾಧಿಕಾ (Radhika kumaraswamy) , ಅದಾದ ಮೇಲೆ ನಿರ್ಮಾಪಕಿಯಾಗಿ ಗೆದ್ದವರು.
ತಮ್ಮ ಶಮಿಕಾ ಎಂಟರ್ಪ್ರೈಸಸ್ ಮೂಲಕ ರಾಧಿಕಾ ಕುಮಾರಸ್ವಾಮಿ Radhika kumaraswamy ಈಗಾಗಲೇ 3 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಈಗ ಅವರ ಸಹೋದರ ರವಿರಾಜ್ ಕೂಡ ನಿರ್ಮಾಪಕರಾಗಿ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಲಕ್ಕಿ’, ‘ಸ್ವೀಟಿ ನನ್ನ ಜೋಡಿ’, ‘ಭೈರಾದೇವಿ’ ಸಿನಿಮಾಗಳಿಗೆ ರವಿರಾಜ್ ಸಹ ನಿರ್ಮಾಪಕನಾಗಿ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಸಿನಿಮಾ ವಿತರಣೆ ವಿಭಾಗದಲ್ಲೂ ಕೆಲಸ ಮಾಡಿದ ಅನುಭವ ರವಿರಾಜ್ಗೆ ಇದೆ. ಇದೀಗ ಸ್ವತಂತ್ರವಾಗಿ ಸಿನಿಮಾ ನಿರ್ಮಾಣಕ್ಕಿಳಿದಿರೋ ರವಿರಾಜ್, ಹೊಸ ಬ್ಯಾನರ್ ಜೊತೆ ಬಂದಿದ್ದಾರೆ.
ತಮ್ಮದೇ ಆದ ಹೊಸ ಬ್ಯಾನರ್ ಕಟ್ಟಿರುವ ರವಿರಾಜ್, ತಮ್ಮ ನಿರ್ಮಾಣ ಸಂಸ್ಥೆಗೆ ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್ ಎಂದು ಹೆಸರಿಟ್ಟಿದ್ದಾರೆ. ತಮ್ಮ ಬ್ಯಾನರ್ನ ಮೊದಲ ಸಿನಿಮಾವಾಗಿ ಹಾರರ್ ಚಿತ್ರವನ್ನು ಮಾಡುತ್ತಿದ್ದು, ಇದುವರೆಗೂ ಬಂದಿರದ ಹಾರರ್ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡಿದ್ದಾರಂತೆ.
ರವಿರಾಜ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಸುತ್ತಿಲ್ಲ. ನಿರ್ದೇಶಕ ಲೋಹಿತ್, ಮಮ್ಮಿ ಚಿತ್ರದ ಮೂಲಕ ಖ್ಯಾತರಾದವರು. ಉಳಿದಂತೆ ಚಿತ್ರದ ಮಾಹಿತಿಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಯೋಜನೆ ರವಿರಾಜ್ ಅವರಿಗೆ ಇದೆ.
ಸದ್ಯ ರಾಧಿಕಾ ಕುಮಾರಸ್ವಾಮಿ ‘ಅಜಾಗ್ರತ’ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಮಾಡಿದ್ದು 7 ಭಾಷೆಗಳಲ್ಲಿ ನೇರವಾಗಿ ಚಿತ್ರೀಕರಣ ಮಾಡಲಾಗುತ್ತಿದೆ. ‘ಅಜಾಗ್ರತ’ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಜೊತೆ ಸ್ಪರ್ಶ ರೇಖಾ, ಚಿತ್ರಾ ಶೆಣೈ, ದೇವರಾಜ್, ಸುಚೇಂದ್ರ ಪ್ರಸಾದ್, ವಿನಯ ಪ್ರಸಾದ್ ನಟಿಸುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ನಟನೆಯ ‘ಬೈರಾದೇವಿ’ ಸಿನಿಮಾ ರಿಲೀಸ್ ಆಗಬೇಕಿದೆ. ಬಹಳ ಹಿಂದೆ ನಿರ್ಮಾಣವಾಗಿದ್ದ ಸಿನಿಮಾ ಇನ್ನು ಪ್ರೇಕ್ಷಕರ ಮುಂದೆ ಬಂದಿಲ್ಲ. ಆ ಚಿತ್ರದ ಮೇಕಿಂಗ್ ವಿಡಿಯೋಗಳು ಈ ಹಿಂದೆ ವೈರಲ್ ಆಗಿದ್ದವು. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಶೀಘ್ರದಲ್ಲೇ ಪ್ರಚಾರ ಆರಂಭಿಸಿ ಸಿನಿಮಾ ತೆರೆಗೆ ತರುವ ಸಾಧ್ಯತೆಯಿದೆ.



