ದರ್ಶನ್ʻರನ್ನು ಚಿಕ್ಕಣ್ಣ ಜೈಲಲ್ಲಿ ಭೇಟಿ ಮಾಡಿದ್ದು ಪ್ರಾಬ್ಲಂ ಆಗ್ತಾ ಇದೆ. ಈ ನಡುವೆ ರಚಿತಾ ರಾಮ್ ಕೊಟ್ಟಿರುವ ಹೇಳಿಕೆಯೂ ಸಮಸ್ಯೆ ಸೃಷ್ಟಿಸುತ್ತಿದೆ. ಹಾಗೆ ನೋಡಿದರೆ.. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ʻರನ್ನು ಭೇಟಿ ಮಾಡಿದ ಬಹುತೇಕ ಸ್ನೇಹಿತರು, ಆಪ್ತರು ದರ್ಶನ್ ಅವರಿಗೆ ಸಮಸ್ಯೆ ಸೃಷ್ಟಿಸಿದ್ದಾರೆ. ಅಭಿಮಾನಿಗಳೂ ಸೇರಿದಂತೆ.
ಚಿತ್ರರಂಗದಲ್ಲಿ ದರ್ಶನ್ ಅವರಿಗೆ ಅನೇಕ ಆಪ್ತರು ಇದ್ದಾರೆ. ಆ ಪೈಕಿ ಕೆಲವರು ಈಗಾಗಲೇ ಪರಪ್ಪನ ಅಗ್ರಹಾರ ಜೈಲಿಗೆ ಬಂದು ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಇದೇ ಪ್ರಕರಣದಲ್ಲಿ ಚಿಕ್ಕಣ್ಣ ಮುಂತಾದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸೆಕ್ಷನ್ 164 ಅಡಿಯಲ್ಲಿ ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಅವರ ಹೇಳಿಕೆಯನ್ನೂ ದಾಖಲಿಸಿದ್ದಾರೆ. ಅದಾದ ಮೇಲೆ ಜೈಲಿಗೆ ಹೋಗಿ ದರ್ಶನ್ ಅವರನ್ನ ಭೇಟಿ ಮಾಡಿ ಬಂದಿದ್ದಾರೆ. ಆ ಹೇಳಿಕೆಯಲ್ಲಿ ಏನಿದೆ ಅನ್ನೋದನ್ನ ಅವರು ದರ್ಶನ್ಗೆ ಹೇಳಿರಬಹುದಾ.. ಅದು ಕಾನೂನು ಪ್ರಕಾರ ತಪ್ಪಲ್ಲವಾ.. ಎಂಬುದು ಹಲವರ ಅನುಮಾನ. ಸಾಮಾನ್ಯವಾಗಿ ಕೊಲೆ ಕೇಸಿನಲ್ಲಿ ಆರೋಪಿಗಳಿಗೆ ಪ್ರತಿಕೂಲವಾಗಬಹುದಾದ ಸಾಕ್ಷಿಗಳು, ಆರೋಪಿಗಳನ್ನು ಮೀಟ್ ಮಾಡುವುದಿಲ್ಲ. ಹೀಗಿದ್ದರೂ.. ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಭೇಟಿ ಮಾಡಿದ್ದಾರೆ ಎನ್ನುವುದನ್ನು ಪೊಲೀಸರು ಸೀರಿಯಸ್ ಆಗಿಯೇ ತೆಗೆದುಕೊಂಡಿದ್ದಾರೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಮಿಷನರ್ ಬಿ.ದಯಾನಂದ್ ಹೇಳಿದ್ದಾರೆ.
ಈ ಮಧ್ಯೆ ನಟಿ ರಚಿತಾ ರಾಮ್ ಕೂಡಾ ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ.. ಅವರು ಹೊರಬಂದ ಮೇಲೆ ನೀಡಿರೋ ಆ ಹೇಳಿಕೆ ದರ್ಶನ್ ಅವರ ಮನೆಯೂಟಕ್ಕೆ ಪ್ರಾಬ್ಲಂ ಆಗುವಂತೆ ಕಾಣ್ತಿದೆ.
ರಚಿತಾ ಅವರು ಜೈಲಿಂದ ಬಂದ್ಮೇಲೆ ಫುಲ್ ಎಮೋಷನಲ್ಲಾಗಿ ದರ್ಶನ್ ಅವರ ಬಗ್ಗೆ ಮಾತನಾಡಿದ್ರು. ಅವರು ರಾಜರ ತರಾ.. ರಾಜರ ತರಾನೇ ನೋಡೋಕ್ ಇಷ್ಟ. ನನಗೆ ನನ್ನ ಕುಟುಂಬದ ಮೇಲೆ ದರ್ಶನ್ ಅವರ ಋಣ ಇದೆ. ಇಲ್ಲದೇ ಇದ್ರೆ ವಿಂದ್ಯಾ ರಾಮ್, ರಚಿತಾ ರಾಮ್ ಆಗೋಕೆ ಆಗ್ತಾ ಇರಲಿಲ್ಲ ಎಂದೆಲ್ಲ ಮಾತನಾಡಿದ್ರು. ಆದರೆ ದರ್ಶನ್ ಅವರು ಜೈಲಲ್ಲಿ ಆರಾಮಾಗಿದ್ದಾರೆ. ಆರೋಗ್ಯವಾಗಿದ್ದಾರೆ ಅನ್ನೋ ಈ ಹೇಳಿಕೆ ದರ್ಶನ್ ಅವರ ಮನೆಯೂಟಕ್ಕೆ ಕಂಟಕವಾದ್ರೂ ಆಶ್ಚರ್ಯವಿಲ್ಲ ಎನ್ನಲಾಗಿದೆ.
ಇದು ರಚಿತಾ ರಾಮ್ ಸೇರಿದಂತೆ ಹಲವರು ನೀಡುತ್ತಿರುವ ಹೇಳಿಕೆಯ ಸಮಸ್ಯೆ. ಬಹುತೇಕರು ದರ್ಶನ್ ಆರಾಮ್ ಇದ್ದಾರೆ ಎಂದೇನೋ ಹೇಳ್ತಾರೆ. ಅಲ್ಲಿಗೆ ಕೋರ್ಟಿನಲ್ಲಿ ವಾದ ಬಿದ್ದು ಹೋಗುತ್ತದೆ. ಅಲ್ಲದೆ, ದರ್ಶನ್ ಅವರನ್ನು ಭೇಟಿಯಾಗಲು ಶಾಸಕರೂ (ದರ್ಶನ್ ಪುಟ್ಟಣ್ಣಯ್ಯ) ಬಂದಿದ್ದಾರೆ. ಸರ್ಕಾರದಲ್ಲಿ ಪ್ರಭಾವಿಗಳು (ಸಾಧುಕೋಕಿಲ) ಬಂದು ಹೋಗಿದ್ದಾರೆ. ನ್ಯಾಯಾಲಯದಲ್ಲಿ ಇವೆಲ್ಲವೂ ಕೂಡಾ ಕೌಂಟ್ ಆಗುತ್ತವೆ. ಆದರೆ.. ಭೇಟಿ ಮಾಡಿ ಬಂದವರೆಲ್ಲ ದರ್ಶನ್ ಅವರಿಗೆ ಜೈಲಿನಲ್ಲಿ ಏನೇನು ಭರವಸೆ ಕೊಡುತ್ತಿದ್ದಾರೋ.. ಅವರಿಗೇ ಗೊತ್ತು. ಆದರೆ.. ಒಬೊಬ್ಬರ ಭೇಟಿಯೂ ಈ ಪ್ರಕರಣದಲ್ಲಿ ಪ್ರಭಾವಿಗಳ ಸಹಾಯಹಸ್ತ ಇದೆ ಎನ್ನುವುದಕ್ಕೆ ಸಾಕ್ಷಿಯಾಗುತ್ತಿದೆ. ಅಷ್ಟೇ ಅಲ್ಲ, ಅಭಿಮಾನಿಗಳ ಈ ರೀತಿಯ ಆರ್ಭಟಗಳೂ ಕೂಡಾ ದರ್ಶನ್ ಅವರನ್ನು ಜೈಲಿನಲ್ಲೇ ಕೂರುವಂತ ಮಾಡಲಿವೆ.



