ರಚಿತಾ ರಾಮ್ (Rachitha Ram) ಅಪರೂಪಕ್ಕೆ ವಿವಾದ ಮಾಡಿಕೊಳ್ತಾರೆ. ಆದರೆ ರಂಪರಾಮಾಯಣ ಮಾಡಿಕೊಳ್ಳಲ್ಲ. ಈ ಬಾರಿಯೂ ಅಷ್ಟೆ, ದೊಡ್ಡದಾಗಿ ಬೆಳೆಯಬಹುದಾಗಿದ್ದ ವಿವಾದವನ್ನು ಕೂಲ್ ಆಗಿಯೇ ನಿಭಾಯಿಸಿದ್ದಾರೆ. ಟೀಕೆ ಮಾಡಿದ್ದವರೇ ಶಹಬ್ಬಾಶ್.. ಎಷ್ಟಂದ್ರೂ ನಮ್ಮ ಕನ್ನಡದ ಹುಡುಗಿ.. ಆಚಾರ, ಸಂಸ್ಕøತಿ ಗೊತ್ತಿರೋ ಹುಡುಗಿ.. ಎಂದು ಡಿಂಪಲ್ ಕ್ವೀನ್`ಗೆ (Dimple Queen) ಬೆನ್ನು ತಟ್ಟುತ್ತಿದ್ದಾರೆ. ಇಷ್ಟಕ್ಕೂ ಆಗಿದ್ದೇನಂದ್ರೆ..
ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ರಚಿತಾ ರಾಮ್ (Rachitha Ram) ಲಾಲ್ ಬಾಗ್ (lalbagh) ಸಮೀಪ ಫ್ಲವರ್ ಶೋಗೆ ಕಾರಿನಲ್ಲಿ ಹೋಗುವಾಗ ಕಾರ್ಮಿಕ ರಂಗಪ್ಪ ಎಂಬುವವರಿಗೆ ಕಾರು ಡಿಕ್ಕಿ ಹೊಡೆದಿತ್ತು. ದೊಡ್ಡದೇನಲ್ಲ. ಅನಾಹುತವೂ ಆಗಿರಲಿಲ್ಲ. ಆದರೆ ಕಾರಿನಲ್ಲಿದ್ದ ರಚಿತಾ ರಾಮ್(Rachitha Ram) , ಅದನ್ನು ನೋಡದಂತೆ ಹೋಗಿದ್ದರು ಎಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗಿತ್ತು. ಅಂದಹಾಗೆ ಕಾರ್ ಡ್ರೈವ್ ಮಾಡುತ್ತಿದ್ದವರು ರಚಿತಾ (Rachitha Ram) ಆಗಿರಲಿಲ್ಲ. ಅವರ ಕಾರಿನ ಡ್ರೈವರ್. ಆದರೆ ವಿವಾದ ರಚಿತಾ ರಾಮ್ (Rachitha Ram) ಮೇಲೆ ಬಂದಿತ್ತು. ಇದೆಲ್ಲದಕ್ಕೂ ಇದೀಗ ರಚಿತಾ (Rachitha Ram) ಫುಲ್ ಸ್ಟಾಪ್ ಇಟ್ಟಿದ್ದಾರೆ.
ಆ ಕಾರ್ಮಿಕ ರಂಗಪ್ಪ ಅವರನ್ನು ಮನೆಗೇ ಕರೆಸಿಕೊಂಡು ಆತಿಥ್ಯ ನೀಡಿ ಗೌರವಿಸಿ ಕ್ಷಮೆ ಯಾಚಿಸಿದ್ದಾರೆ. ನನ್ನ ಕಾರು ಸಿಬ್ಬಂದಿಗೆ ಡಿಕ್ಕಿ ಹೊಡೆದಿದ್ದು ನನ್ನ ಗಮನಕ್ಕೆ ಬಂದಿಲ್ಲ. ಇದು ಆಕಸ್ಮಿಕವಾಗಿ ನಡೆದ ಘಟನೆ ಆಗ ನನಗೆ ಗೊತ್ತಾಗಲಿಲ್ಲ ಎಂದು ಹೇಳಿ ನಟಿ ರಚಿತಾ ರಾಮ್ ಕ್ಷಮೆಯಾಚಿಸಿದ್ದಾರೆ. ಲಾಲ್ಬಾಗ್ ಸಿಬ್ಬಂದಿಯನ್ನ ಮನೆಗೆ ಕರೆಸಿ ಮಾತನಾಡಿಸಿದ ನಟಿಯ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಚಿತಾ ಅವರನ್ನು ಟೀಕಿಸಿದ್ದವರೇ, ಈಗ ಅವರನ್ನು ಅವರ ನಡುವಳಿಕೆಯನ್ನು ಹೊಗಳುತ್ತಿದ್ದಾರೆ.



