ನೀನಾಸಂ ಸತೀಶ್ (Neenasam Satheesh) ಸಿದ್ದೇಗೌಡನಾಗಿ, ರಚಿತಾ ರಾಮ್ (Rachitha Ram) ನಂದಿನಿಯಾಗಿ ನಟಿಸಿದ್ದ (Ayogya) ಅಯೋಗ್ಯ, ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಇಬ್ಬರ ನಡುವಿನ ಕೆಮಿಸ್ಟ್ರಿ ಸಖತ್ ಆಗಿಯೇ ವರ್ಕೌಟ್ ಆಗಿತ್ತು. ಅಯೋಗ್ಯ (Ayogya) ಜೋಡಿ ಮತ್ತೊಮ್ಮೆ ಒಂದಾಗಿದೆ. ಮ್ಯಾಟ್ನಿಯಲ್ಲಿ ಜೊತೆ ಸೇರಿದೆ. ಅಯೋಗ್ಯದಲ್ಲಿ ಕಬ್ಬಿನ ಹಾಲು ಕುಡಿಸಿದ್ದ (Neenasam Satheesh) ಸತೀಶ್, ಇಲ್ಲಿ ಮ್ಯಾಟ್ನಿ (Matnie) ಶೋಗೆ ಕರೆಯುತ್ತಿದ್ದಾರೆ.
ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲ ನಿಂಗೆ..
ನಿನ್ನ ಜೊತೆಗೆ ಸುತ್ತಬೇಕು ಊರ ತುಂಬ ಹಾಗೆ..
ಎಂದು ಕರೆಯುತ್ತಾ (Neenasam Satheesh) ನೀನಾಸಂ ಸತೀಶ್, ರಚಿತಾ ರಾಮ್`ಗೆ ಕಾಳು ಹಾಕ್ತಿದ್ದಾರೆ. ಅದೂ ಮ್ಯಾಟ್ನಿಗೆ (Matnie) ಕರೆದುಕೊಂಡು ಹೋಗೋಕೆ.. ಮ್ಯಾಟ್ನಿ ಚಿತ್ರದ ಮೊದಲ ಹಾಡು ಮೋಡಿಯನ್ನೇ ಮಾಡಿದೆ. ಕಣ್ಣಿಗೆ ಡಿಸೈನ್ ಕನ್ನಡಕ, ತುಂಡು ಬಟ್ಟೆ ಹಾಕ್ಕೊಂಡು ಸ್ಕೂಲ್ ಹುಡುಗಿಗಿಂತ ಚಿಕ್ಕವರಾಗಿ ಕಾಣ್ತಿದ್ದಾರೆ ರಚಿತಾ ರಾಮ್.
ರಚಿತಾ ರಾಮ್ (Rachitha Ram) ಮುದ್ದು ಮುದ್ದಾಗಿ ಕಾಣ್ತಿದ್ದರೆ, ಮ್ಯಾಟ್ನಿಗೆ (Matnie) ಕರೆಯೋ ಹುಡುಗನಾಗಿ ಲವ್ಲಿ ಬಾಯ್ ಆಗಿದ್ದಾರೆ ನೀನಾಸಂ ಸತೀಶ್. ಮನೋಹರ್ ಕಾಂಪಲ್ಲಿ ನಿರ್ದೇಶನದ ಮ್ಯಾಟ್ನಿ ಚಿತ್ರದ ಈ ಹಾಡು, ಪ್ರೇಮಿಗಳ ಮನಸ್ಸು ಗೆದ್ದಿದೆ. ಲವರ್ಸ್‍ಗಳಿಗೆ ಹುಡುಗಿಯರನ್ನ ಕರೆಯೋಕೆ ಹೊಸ ಲಿರಿಕ್ಸು ಕೊಟ್ಟಿರೋದು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ. ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಹಾಡು ಚೆಂದವಾಗಿ ಮೂಡಿ ಬಂದಿದೆ.
ಚಿತ್ರದ ಕೊರಿಯೋಗ್ರಫಿ, ಸೆಟ್ ಕೂಡಾ ಡಿಫರೆಂಟ್ ಆಗಿದ್ದು, ಸುಧಾಕರ್ ರಾಜ್ ಅವರ ಪ್ರತಿಭೆ ಮತ್ತು ಶ್ರಮ ಜೊತೆಗೆ ಪ್ರತಾಪ್ ಮೆಂಡನ್ ಅವರ ಕ್ರಿಯೇಟಿವಿಟಿ ಎದ್ದು ಕಾಣುತ್ತಿದೆ. ಪಾರ್ವತಿ ಎಸ್. ಗೌಡ ಅವರು ಚಿತ್ರದ ನಿರ್ಮಾಪಕರು.
ಸತೀಶ್ ಅವರ ಹೊಸ ಚಿತ್ರ ಇತ್ತೀಚೆಗೆ ಬಂದಿಲ್ಲ. ಪೆಟ್ರೋಮ್ಯಾಕ್ಸ್ (Petromax) ಚಿತ್ರದ ನಂತರ ಸತೀಶ್ ಅವರ ದರ್ಶನ ಪ್ರೇಕ್ಷಕರಿಗೆ ಆಗಿಲ್ಲ. ರಚಿತಾ ರಾಮ್ (Rachitha Ram) ಕೂಡಾ ಅಷ್ಟೆ, ಇತ್ತೀಚೆಗೆ ದೊಡ್ಡ ಮಟ್ಟದ ಚಿತ್ರಗಳಲ್ಲಿ ನಟಿಸಿಲ್ಲ. ಹಿಟ್ ಕೂಡಾ ಕೊಟ್ಟಿಲ್ಲ. ಇದೀಗ ಸತೀಶ್ ಮತ್ತು ರಚಿತಾ ಇಬ್ಬರೂ ಜೊತೆಯಾಗಿದ್ದಾರೆ. ಅಯೋಗ್ಯವನ್ನೂ ಮೀರಿಸುವ ಹಿಟ್ ಕೊಡುವ ನಿರೀಕ್ಷೆ ಹುಟ್ಟಿಸಿದ್ದಾರೆ.



